ನೇಹಾ ಕೊಲೆ ಲವ್ ಜಿಹಾದ್ ಎಂದ ಅಮಿತ್ ಶಾಗೆ ಗುಮ್ಮಿದ ಟಗರು
ಬಾಗಲಕೋಟೆ ಮೇ 3: ನೇಹ ಕೊಲೆ ಪ್ರಕರಣ ರಾಜಕೀಯಗೊಳಿಸಲಾಗಿದ್ದು ರಾಜಕಾರಣಿಗಳ ಕೆಸರೆರೆಚಾಟ ಶುರುವಾಗಿದೆ. ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಕೇಸ್ ಈಗ ಲವ್ ಜಿಹಾದ್ ಹೆಸರು ಪಡೆದುಕೊಂಡಿದೆ. ಸ್ವತ: ಅಮಿತ್ ಶಾ ಅವರೇ ಇದನ್ನು ಲವ್ ಜಿಹಾದ್ ಎಂದು ಕರೆದಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಇಂದು ಬಾಗಲಕೋಟೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, 'ರಾಜಕೀಯಕ್ಕೋಸ್ಕರ ಆ ರೀತಿ ಅಮಿತ್ ಶಾ ಹೇಳಿಕೆ ನೀಡಿದ್ದಾರೆ. ಕಾನೂನು ರೀತಿಯಲ್ಲಿ ಏನೆಲ್ಲ ಕ್ರಮ ಕೈಗೊಳ್ಳಲು ಸಾಧ್ಯವಿದೆಯೋ ಅದನ್ನೆಲ್ಲ ಸರ್ಕಾರ ಮಾಡುತ್ತಿದೆ. ಅವರು ಲವ್ ಜಿಹಾದ್ ಎಂದು ರಾಜಕೀಯಕ್ಕೋಸ್ಕರ ಹೇಳುತ್ತಾರೆ. ಹಾಗಾದರೆ ಅಮಿತ್ ಶಾ ಕೇಂದ್ರದ ಗೃಹ ಮಂತ್ರಿ ಆಗಿದ್ದುಕೊಂಡು ಮಣಿಪುರದ ಘಟನೆ ಬಗ್ಗೆ ಯಾಕೆ ಒಂದೇ ಒಂದು ಮಾತನಾಡಲಿಲ್ಲ' ಎಂದು ಪ್ರಶ್ನೆ ಮಾಡಿದರು.

'ನೇಹಾ ಪ್ರಕರಣದ ತನಿಖೆಯನ್ನು ನಾವು ತಕ್ಷಣವೇ ಸಿಐಡಿಗೆ ಕೊಟ್ಟಿದ್ದೇವೆ. ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಿದ್ದೇವೆ. ಆರೋಪಿಗೆ ಕಠಿಣ ಶಿಕ್ಷೆ ಕೊಡಲು ಎಲ್ಲ ಕ್ರಮಗಳನ್ನು ಕೈಗೊಂಡಿದ್ದು, ಈ ಬಗ್ಗೆ ಪಬ್ಲಿಕ್ ಕ್ಲಾಸಿಕ್ಯೂಟರ್ ಜೊತೆ ಕೂಡ ಮಾತನಾಡಿದ್ದೇನೆ. ಮಣಿಪುರದಲ್ಲಿ ಅಷ್ಟೊಂದು ಹಿಂಸಾಚಾರವಾದರೂ ಅಲ್ಲಿದ್ದ ಸರ್ಆಕವನ್ನೇ ಮುಂದುವರಿಸಿದ್ದರು. ಕೇಂದ್ರದ ಗ್ರಹ ಸಚಿವರಾಗಿದ್ದುಕೊಂಡು ನೀವು ಏನು ಮಾಡಿದಿರಿ? ಸಿಎಂ ಅನ್ನು ಬಸಲಾಯಿಸಿಸಿರಾ ಅಥವಾ ಸರ್ಕಾರವನ್ನು ವಜಾ ಮಾಡಿದಿರಾ' ಎಂದು ಗುಮ್ಮಿದರು.
ಬಿಜೆಪಿಗೆ ಈ ಮೊದಲೇ ಗೊತ್ತಿತ್ತು ಪ್ರಜ್ವಲ್ ರೇವಣ್ಣ ವಿಡಿಯೋ ಇವೆ ಅನ್ನೋದು. ಆದರೂ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ತಪ್ಪು ಮಾಡಿದೆ. ಆತ ದೌರ್ಜನ್ಯ ಅಲ್ಲ, ಅತ್ಯಾಚಾರ ಎಸಗಿದ್ದಾನೆ. ಯಾವುದೇ ಸಂತ್ರಸ್ತೆ ಅತ್ಯಾಚಾರ ಆಗಿದೆ ಅಂತ ಸುಳ್ಳು ಹೇಳುತ್ತಾಳಾ? ಹಾಗೆ ಮಾಡಿದರೆ ಅವರ ಜೀವನ ಹಾಳಾಗುವುದಿಲ್ಲವೇ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶಗೊಂಡರು.
ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ಅಮಿತಾ ಶಾ ಅವರು, ನೇಹಾ ಹಿರೇಮಠ್ ಹತ್ಯೆ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದರು. ಈ ವೇಳೆ ಹುಬ್ಬಳ್ಳಿಯ ಕಾಲೇಜ್ ಕ್ಯಾಂಪಸ್ನಲ್ಲಿ ನಡೆದ ನೇಹಾ ಹಿರೇಮಠ್ (Neha Hiremath Case) ಹತ್ಯೆ ಲವ್ ಜಿಹಾದ್ (Love Jihad Case) ಪ್ರಕರಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿನ ಬ್ಲಾಸ್ಟ್ನ್ನು ಸಿಲಿಂಡರ್ ಸ್ಫೋಟ ಎಂದು ಕರೆಯಲಾಯ್ತು. ಎನ್ಐಎ ತನಿಖೆಯಲ್ಲಿ ಸತ್ಯಾಂಶ ಹೊರ ಬಂದಿದೆ. 10 ವರ್ಷದಲ್ಲಿ ಬೆಂಗಳೂರಿನಲ್ಲಿ ಯಾವುದೇ ಸ್ಫೋಟ ನಡೆದಿರಲಿಲ್ಲ. ಇವರ ಸರ್ಕಾರ ಬಂದ್ಮೇಲೆ ಎಸ್ಡಿಪಿಐಗೆ ಬೆಂಬಲ ನೀಡಿತು. ನಂತರ ಸ್ಫೋಟಗಳು ಸಂಭವಿಸುತ್ತಿವೆ ಎಂದು ಅಮಿತ್ ಶಾ ಆರೋಪಿಸಿದರು.












Click it and Unblock the Notifications