ಜೆಡಿಎಸ್ ಜೊತೆ ಫ್ರೆಂಡ್ಲಿ ಫೈಟ್, ಬಿಜೆಪಿ ಜೊತೆ ಜಿದ್ದಾಜಿದ್ದಿ: ಸಿದ್ದರಾಮಯ್ಯ

Recommended Video

      ಜೆಡಿಎಸ್ ಜೊತೆ ಫ್ರೆಂಡ್ಲಿ ಫೈಟ್, ಬಿಜೆಪಿ ಜೊತೆ ಜಿದ್ದಾಜಿದ್ದಿ ಎಂದ ಸಿದ್ದರಾಮಯ್ಯ | Oneindia Kananda

      ಬಾಗಲಕೋಟೆ, ಆಗಸ್ಟ್.09: ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

      ಜೆಡಿಎಸ್ ಬಗ್ಗೆ ಮೃದು ಧೋರಣೆ ತಾಳಿರುವ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿ 21 ರ ಬದಲಿಗೆ 18 ವರ್ಷ ವಯಸ್ಸಿನವರಿಗೂ ಮತದಾನದ ಹಕ್ಕು ನೀಡಿದ್ದು ರಾಜೀವಗಾಂಧಿ. ಬಿಜೆಪಿಯವರು ಮೀಸಲಾತಿ ವಿರೋಧಿ ಕಿರಾತಕಿಗಳು ಎಂದರು.

      ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರು, ಹಿಂದುಳಿದವರಿಗೆ ಮೀಸಲಾತಿ ತಂದಿದ್ದು ರಾಜೀವ್ ಗಾಂಧಿ ಪ್ರಧಾನಿ ಆದಾಗ. ಸಂವಿಧಾನ ತಿದ್ದುಪಡಿ ಮಾಡಿ, ಮೀಸಲಾತಿ ಕೊಡುಗೆ ನೀಡಿದ್ದು ಕಾಂಗ್ರೆಸ್ ಪಕ್ಷ ಎಂದರು.

      Siddaramaiah addressed the pre-poll meetings of local bodies

      ಒಂದು ದಿನವಾದರೂ ಬಿಜೆಪಿಯವರು ಮೀಸಲಾತಿ ಬಗ್ಗೆ ಮಾತನಾಡಿಲ್ಲ. ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ ಅಧಿಕಾರ ಕೊಡಬಾರದು ಎನ್ನುವುದು ಬಿಜೆಪಿ ಉದ್ದೇಶವಾಗಿದೆ ಎಂದು ತಿಳಿಸಿದರು.

      ಜೆಡಿಎಸ್ ಬಗ್ಗೆ ಮಾತನಾಡುವುದು ಅನಗತ್ಯ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಫ್ರೆಂಡ್ಲಿ ಫೈಟ್. ಬಿಜೆಪಿ ಜೊತೆ ಜಿದ್ದಾಜಿದ್ದಿ ಎಂದರು. ಬಿಜೆಪಿ ನಮ್ಮ ಪ್ರಥಮ ರಾಜಕೀಯ ವೈರಿ. ಯಾವುದೇ ಕಾರಣಕ್ಕೂ ಬಿಜೆಪಿ ಅಭ್ಯರ್ಥಿ ಗೆಲ್ಲಬಾರದು ಎಂದು ಕಾರ್ಯಕರ್ತರಿಗೆ ಹೇಳಿದರು.

      Siddaramaiah addressed the pre-poll meetings of local bodies


      ಮೀಸಲಾತಿ, ಮತದಾನ ಹಕ್ಕು ನೀಡುವಲ್ಲಿ ಬಿಜೆಪಿ ಕೊಡುಗೆ ಜೀರೋ ಎಂದು ಸಿದ್ದರಾಮಯ್ಯ ತಿಳಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+