• search

ಇಂದಿನಿಂದ ಬಾಗಲಕೋಟೆ-ಕುಡಚಿ ರೈಲ್ ಬಸ್ ಸೇವೆ ಆರಂಭ

By ಬಾಗಲಕೋಟೆ ಪ್ರತಿನಿಧಿ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬಾಗಲಕೋಟೆ, ಜೂನ್.15: ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾಗಲಕೋಟೆ ಮತ್ತು ಕುಡಚಿ ನಡುವಿನ ಹೊಸ ರೈಲು ಮಾರ್ಗದಲ್ಲಿ ರೈಲ್ ಬಸ್ ಸೇವೆ ಆರಂಭವಾಗಿದೆ.

  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಪಿ.ಸಿ.ಗದ್ದಿಗೌಡರ, ಕುಡಚಿ-ಬಾಗಲಕೋಟೆ ರೈಲು ಮಾರ್ಗ ಕೂಡಲೇ ಮಾಡಿ ಎಂದು ಜಮಖಂಡಿ ಜನ ಸಾಕಷ್ಟು ಮನವಿ ಮಾಡಿದ್ದರು.
  ಜನ ಮನವಿ ಮಾಡಿರುವಂತೆ ರೈಲ್ ಬಸ್ ಸೇವೆ ಆರಂಭಗೊಂಡಿದೆ.

  ರೈಲ್ವೆಯ ಸಾಹಸಿ ಮಹಿಳಾ ಪೊಲೀಸ್ ಕಥೆ ಈಗ ಶಾಲಾ ಪಠ್ಯ

  ಕೇಂದ್ರ ಸರ್ಕಾರದ ಕೆಲಸದ ಜತೆಗೆ ಈ ಭಾಗದಲ್ಲಿ ರೈಲು ಸೇವೆಗೆ ಒತ್ತು ನೀಡಿದ್ದೇನೆ. ಹೆಚ್ಚು ಒತ್ತಡ ಹಾಕಿದಾಗ ಕೆಲಸ ಆಗುತ್ತದೆ. ಅದರಂತೆ ರೈಲು ಮಾರ್ಗಕ್ಕೆ ರೈತರನ್ನು ಮನವೊಲಿಸಿ ಭೂಮಿ ವಶಪಡಿಸಿಕೊಂಡು ಕೆಲಸ ಮಾಡಲಾಗಿದೆ ಎಂದರು.

  Rail bus service has begun on a new railway line between Bagalkot and Khajjidoni.

  ಸ್ವಾರ್ಥ ಬಿಟ್ಟು ಜನರಿಗೆ ಅನುಕೂಲವಾಗುವಂತಹ ಕೆಲಸ ಮಾಡುತ್ತೇನೆ. ಯಡಿಯೂರಪ್ಪ ನವರು ರೈಲು ಸೇವೆಗೆ ಒತ್ತು ಕೊಟ್ಟು, ಶೇ.50 ಭಾಗದ ಖರ್ಚು ಕೊಡಲು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಒಪ್ಪಿಕೊಂಡಿದ್ದರಿಂದ ಇಂದು ಈ ಮಾರ್ಗ ಆರಂಭಗೊಂಡಿದೆ ಎಂದು ಪ್ರಶಂಸಿಸಿದರು.

  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಕುಡಚಿ-ಬಾಗಲಕೋಟೆ ಮಾರ್ಗ142 ಕೀ.ಮೀ‌ ಪೈಕಿ ಈಗ ಬಾಗಲಕೋಟೆ ಯಿಂದ ಖಜ್ಜಿಡೋಣಿ ಗ್ರಾಮದವರೆಗೆ 30 ಕೀ.ಮೀ ರೈಲು ಮಾರ್ಗದ ಕಾಮಗಾರಿ ಪೂರ್ಣಗೊಂಡು ರೈಲ್ ಬಸ್ ಆರಂಭಗೊಂಡಿದೆ.

  ಬಾಗಲಕೋಟೆ ರೈಲ್ವೆ ಸ್ಟೇಶನ್ ಆದರ್ಶ ರೈಲ್ವೆ ಸ್ಟೇಶನ್ ಎಂದು ಘೋಷಿಸಲಾಗಿದೆ. ಆದರೂ ಇಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸ ಆಗಬೇಕು‌ ಎಂದರು.

  Rail bus service has begun on a new railway line between Bagalkot and Khajjidoni.

  ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಎಸ್.ಆರ್‌.ಪಾಟೀಲ, ಶಾಸಕ ಮುರಗೇಶ ನಿರಾಣಿ ಮಾತನಾಡಿದರು.

  Rail bus service has begun on a new railway line between Bagalkot and Khajjidoni.

  ಹುಬ್ಬಳ್ಳಿ ‌ನೈರುತ್ಯ ರೈಲ್ವೆ ವಿಭಾಗದ‌ ಮ್ಯಾನೇಜರ್ ರಾಜೇಶ ಮೋಹನ್, ಶಾಸಕ ಮುರಗೇಶ ನಿರಾಣಿ, ತಾ.ಪಂ.ಅಧ್ಯಕ್ಷ ಚನ್ನನಗೌಡ ಪರನಗೌಡ, ನಗರಸಭೆ ಅಧ್ಯಕ್ಷ ದ್ಯಾವಪ್ಪ ರಾಕುಂಪಿ, ಮಾಜಿ ಶಾಸಕ ಪಿ.ಎಚ್.ಪೂಜಾರ, ನಾರಾಯಣಸಾ ಭಾಂಡಗೆ, ಬಸವೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ , ಜಿ.ಎನ್.ಪಾಟೀಲ ಸೇರಿದಂತೆ ರೈಲ್ವೆ ಹೋರಾಟ ಸಮಿತಿಯ ಮುಖಂಡರು ಉಪಸ್ಥಿತರಿದ್ದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Rail bus service has begun on a new railway line between Bagalkot and Khajjidoni.The program was inaugurated by MP PC Gaddigoudar. The program was organized by the Hubli South Western Railway Division.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more