ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಿಹಾರ ಬೇಕಿಲ್ಲ, ರಕ್ಷಣೆ ಕೊಡಿ: ಸಿದ್ದರಾಮಯ್ಯ ಕೊಟ್ಟ 2 ಲಕ್ಷ ವಾಪಸ್ ಎಸೆದ ಮಹಿಳೆ

|
Google Oneindia Kannada News

ಬಾಗಲಕೋಟೆ, ಜುಲೈ 15: ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೆರೂರು ಗಲಭೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿಗೆ ಸಂಬಂಧಿಕರಿಗೆ ನೀಡಿದ್ದ ಹಣವನ್ನು ಮಹಿಳೆಯೊಬ್ಬರು ವಾಪಸ್‌ ಎಸೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ಬಾದಾಮಿಯಲ್ಲಿ ನಡೆದಿದೆ.

ಶುಕ್ರವಾರ ಸಿದ್ದರಾಮಯ್ಯ ಬಾಗಲಕೋಟೆ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಕೆರೂರು ಗುಂಪು ಘರ್ಷಣೆಯಲ್ಲಿ ಗಾಯಗೊಂಡಿದ್ದವರ ಯೋಗಕ್ಷೇಮ ವಿಚಾರಿಸಲು ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಗಾಯಾಳುಗಳಿಗೆ ನೀಡಿದ್ದ ಪರಿಹಾರದ ಹಣವನ್ನು ಮಹಿಳೆಯೊಬ್ಬರು ಸಿದ್ದರಾಮಯ್ಯಗೆ ವಾಪಸ್‌ ನೀಡಲು ಮುಂದಾದರು. ಸಿದ್ದರಾಮಯ್ಯ ಹಣವನ್ನು ಹಿಂದಕ್ಕೆ ತೆಗೆದುಕೊಳ್ಳಲು ನಿರಾಕರಿಸಿ ಕಾರಿನಲ್ಲಿ ಹೋಗುತ್ತಿದ್ದಂತೆ, ಆ ಮಹಿಳೆ 2 ಲಕ್ಷ ರೂಪಾಯಿಗಳ ನೋಟಿನ ಕಂತೆಯನ್ನು ಪೊಲೀಸ್ ಬೆಂಗಾವಲು ವಾಹನಕ್ಕೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.

Kerur Communal Clash:Muslim woman refuses to take Rs 2 Lakh compensation given by Siddaramaiah

ನಮಗೆ ರಕ್ಷಣೆ ಭೇಕು
ಚುನಾವಣೆಯಲ್ಲಿ ಮಾತ್ರ ಇವರು ನಮ್ಮ ಬಳಿ ಬರುತ್ತಾರೆ, ಆದರೆ, ನಮಗೆ ಸಮಸ್ಯೆಗಳು ಎದುರಾದಾಗ ಮಾತ್ರ ಬರುವುದಿಲ್ಲ. ಹಿಂದೂ-ಮುಸ್ಲಿಂ ಎಂದು ಬೇಧ -ಭಾವ ಮಾಡದೇ ಎಲ್ಲರನ್ನೂ ಸಮಾನವಾಗಿ ಕಾಣಲಿ, ನಾವೇನು ತಪ್ಪು ಮಾಡದಿದ್ದರೂ ನಮ್ಮ ಮೇಲೆ ಹಲ್ಲೆ ಮಾಡಲಾಗಿದೆ. ಘಟೆನ ನಡೆದು ಇಷ್ಟು ದಿನಗಳಾದರೂ ನಮ್ಮ ಯಾರನ್ನು ಮಾತನಾಡಿಸಲಿಲ್ಲ. ಸಚಿವರು ಬಂದರೂ ಕೆಲವರನ್ನೂ ಮಾತ್ರ ಮಾತನಾಡಿಸಿ ಹೋಗಿದ್ದಾರೆ. ಇಂದು ಇವರು ಪರಿಹಾರ ಎಂದು ನಮಗೆ ಹಣಕೊಡ್ತಾರೆ, ಆದರೆ ನಮ್ಮವರು ಒಂದು ವರ್ಷ ನರಳಾಡಬೇಕು. ಯಾರು ನಮ್ಮ ಸಮಸ್ಯೆ ಕೇಳುತ್ತಾರೆ? ಎಂದು ಮಹಿಳೆ ಕಣ್ಣೀರು ಹಾಕಿದರು.

Kerur Communal Clash:Muslim woman refuses to take Rs 2 Lakh compensation given by Siddaramaiah

ಹಣ ಬೇಡ, ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಲಿ
ನಮಗೆ ಇಂದು ಅವರು ನೀಡುವ ಹಣ ನಮಗೆ ಮಖ್ಯವಲ್ಲ, ಭಿಕ್ಷೆ ಭೇಡಿಯಾದರೂ ಕುಟುಂಬ ಸಾಕುತ್ತೇವೆ. ನಮಗೆ ಇಂತಹ ಘಟನೆಗಳು ಮುಂದೆ ಆಗದಂತೆ ನೋಡಿ ಕೊಳ್ಳುವವರು ಬೇಕು. ನಮಗೆ ಈ ದುಡ್ಡಿನ ಅವಶ್ಯಕತೆಯಿಲ್ಲ, ಹಿಂದೂ ಕುಟುಂಬಕ್ಕಾಗಲಿ ಅಥವಾ ಮುಸ್ಲಿಂ ಕುಟುಂಬಕ್ಕಾಗಲಿ ಇಂತಹ ಘಟನೆಗಳು ಆಗಬಾರದು. ನಮ್ಮ ತಪ್ಪಿದ್ರೆ ತಲೆ ಕಡಿಯಲಿ, ತಪ್ಪಾಗಿದೆ ಎಂದು ಎಫ್‌ಐಆರ್ ಆದರೆ ಕುಟುಂಬವೇ ಪೊಲೀಸರಿಗೆ ಶರಣಾಗುತ್ತೇವೆ ಎಂದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದರು.

English summary
woman one of the relative of the victim of the Kerur communal clash threw away 2 lakh Rupees compensation given by Badami MLA and opposition leader Siddaramaiah on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X