ಬಾದಾಮಿಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ
ಬಾಗಲಕೋಟೆ, ಮೇ 07 : ಕರ್ನಾಟಕ ಬಿಜೆಪಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರಕ್ಕೆ ಪ್ರತ್ಯೇಕ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬಾದಾಮಿಯಲ್ಲಿ ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಅವರು ಬಿಜೆಪಿ ಅಭ್ಯರ್ಥಿ.
ಈ ಬಾರಿ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದ ರಾಜ್ಯದ ಗಮನ ಸೆಳೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾದಾಮಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಬಿಜೆಪಿ ಶ್ರೀರಾಮುಲು ಅವರನ್ನು ಕಣಕ್ಕಿಳಿಸಿದೆ. ಈ ಇಬ್ಬರೂ ನಾಯಕರು ಸಹ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.
ಕಾಂಗ್ರೆಸ್ ಪಕ್ಷ ಬಾದಾಮಿಯ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಈಗ ಬಿಜೆಪಿಯೂ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಹಲವು ಭರವಸೆಗಳನ್ನು ಕ್ಷೇತ್ರದ ಅಭಿವೃದ್ಧಿಗಾಗಿ ನೀಡಲಾಗಿದೆ.

ಬಾದಾಮಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರು ಪ್ರಣಾಳಿಕೆ ಬಿಡುಗಡೆ ಮಾಡಿದರು. 'ಸಿದ್ದರಾಮಯ್ಯ ಪಾಪದ ಮೂಟೆ ಅವರನ್ನು ಸೋಲಿಸುತ್ತೆ. ಸಿದ್ದರಾಮಯ್ಯ ಅವರನ್ನು ಸೋಲಿಸುವುದು ನನ್ನ ಉದ್ದೇಶವಲ್ಲ. ಅವರು ಮಾಡಿರುವ ಪಾಪದ ಕೆಲಸಗಳು ಅವರನ್ನು ಸೋಲಿಸುತ್ತವೆ. ಬಾದಾಮಿಯ ಅಭಿವೃದ್ಧಿ ನನ್ನ ಮೂಲ ಉದ್ದೇಶ' ಎಂದರು.
ಪ್ರಣಾಳಿಕೆಯಲ್ಲಿನ ಭರವಸೆಗಳು
* 24*7 ವಿದ್ಯುತ್ ಪೂರೈಕೆ
* ಕೆಂದೂರು ಕೆರೆ ಹೂಳು ಎತ್ತುವುದು, ಇತರೆ ಕೆರೆಗಳ ಅಭಿವೃದ್ಧಿ
* ರಸ್ತೆಗಳನ್ನು ಕಾಂಕ್ರೀಟಿಕರಣ ಮಾಡುವುದು
* ಕೆರೂರುವಿನಲ್ಲಿ ನೂತನ ಕಣ್ಣಿನ ಆಸ್ಪತ್ರೆ ನಿರ್ಮಾಣ
* ಬಾದಾಮಿಯ ಪ್ರವಾಸಿ ತಾಣಗಳ ಅಭಿವೃದ್ಧಿ
* ಪ್ರತಿ ಬ್ಲಾಕ್‌ಗೆ ಉಚಿತ ಆಂಬ್ಯುಲೆನ್ಸ್ ವ್ಯವಸ್ಥೆ
* ಕೈಮಗ್ಗ ಉತ್ತೇಜಿಸಲು ಕಾರ್ಖಾನೆ ನಿರ್ಮಾಣ













Click it and Unblock the Notifications