ಬಾಗಲಕೋಟೆ; ಮತದಾನ ಮಾಡಲು ಎಸ್ಆರ್ ಪಾಟೀಲ್ ಕರೆ

ಬಾಗಲಕೋಟೆ, ಮೇ 10; ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಮತದಾನ ಪ್ರಗತಿಯಲ್ಲಿದೆ. ಬನ್ನಿ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳೋಣ, ಪ್ರಜಾಸತ್ತೆ ಗೌರವಿಸಲು ಮತ ಚಲಾಯಿಸಿ ಎಂದು ಎಸ್. ಆರ್. ಪಾಟೀಲ್ ಕರೆ ನೀಡಿದರು.

ಬುಧವಾರ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಬಸವೇಶ್ವರ ನಗರದಲ್ಲಿರುವ ಉರ್ದು ಶಾಲೆಯ ಬೂತ್ ನಂಬರ್ 83 ರಲ್ಲಿ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಎಸ್. ಆರ್. ಪಾಟೀಲ್ ಮತದಾನ ಮಾಡಿದರು. ಬಳಿಕ ಕಾರ್ಯಕರ್ತರ ಜೊತೆ ಅವರು ಮಾತುಕತೆ ನಡೆಸಿದರು.

sr patil

ಮತದಾನ ಮಾಡಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ನಮ್ಮ ಹಿರಿಯರ ದೂರದೃಷ್ಟಿಯಿಂದ ಪ್ರಜಾಸತ್ತೆ ರಚನೆಯಾಗಿದ್ದು ಇದು ವಿಶ್ವಕ್ಕೆ ಮಾದರಿಯಾಗಿದೆ. ಇದರ ಫಲಾನುಭವಿಗಳಾದ ನಾವು ಇದನ್ನು ಗೌರವದಿಂದ ಕಾಣಲು ತಪ್ಪದೇ ತಮ್ಮೆಲ್ಲರ ಮತಚಲಾವಣೆ ಬಹಳ ಮುಖ್ಯ ಎಂದು ಪೋಸ್ಟ್‌ ಹಾಕಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿ ಬಾದಾಮಿ, ಬಾಗಲಕೋಟೆ, ಜಮಖಂಡಿ, ತೇರದಾಳ, ಮುಧೋಳ, ಬೀಳಗಿ ಮತ್ತು ಹುನಗುಂದ ವಿಧಾನಸಭಾ ಕ್ಷೇತ್ರಗಳಿವೆ. ಜಿಲ್ಲೆಯ ಒಟ್ಟು ಮತದಾರರ ಸಂಖ್ಯೆ 15,60,828. ಜಿಲ್ಲೆಯಲ್ಲಿ ಒಟ್ಟು 70 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+