ಬಾದಾಮಿ: ಅಂಚೆ ಮತಪತ್ರ ದುರುಪಯೋಗದ ಶಂಕೆ
ಬಾಗಲಕೋಟೆ, ಮೇ 14: ಭಾರಿ ಕುತೂಹಲ ಕೆರಳಿಸಿರುವ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲಿ ಅಂಚೆ ಮತಪತ್ರದ ದುರುಪಯೋಗವಾಗಿರುವ ಶಂಕೆ ವ್ಯಕ್ತವಾಗಿದೆ.
ಬಾದಾಮಿಯ ಬೆಜೆಪಿ ಮುಖಂಡನಿಗೆ ಸೇರಿರುವ ಆನಂದ್ ಡಿಲಕ್ಸ್ ಎಂಬ ಲಾಡ್ಜ್‌ನಲ್ಲಿ ಅಂಚೆ ಮತಪತ್ರಗಳು ಲಭ್ಯವಾಗಿವೆ. ಲಾಡ್ಜ್‌ನಲ್ಲಿ ಅಂಚೆ ಮತಪತ್ರಗಳ ಡೀಲ್ ನಡೆಯುತ್ತಿತ್ತು. ಈ ಸುದ್ದಿ ತಿಳಿದು ಮಾಧ್ಯಮದವರು ಅಲ್ಲಿಗೆ ತೆರಳಿದಾಗ ಕೆಲವರು ಓಡಿಹೋದರು. ಇನ್ನು ಕೆಲವರು ಅಲ್ಲಿಯೇ ಕಾಗದಗಳನ್ನು ಹರಿದುಹಾಕಿದರು ಎನ್ನಲಾಗಿದೆ.
ಮಾಹಿತಿ ತಿಳಿದ ಬಳಿಕ ಚುನಾವಣಾಧಿಕಾರಿಗಳು ಲಾಡ್ಜ್‌ಗೆ ತೆರಳಿ ಪರಿಶೀಲನೆ ನಡೆಸಿದರು.

ಬಾದಾಮಿ ವಿಧಾನಸಭಾ ಕ್ಷೇತ್ರವು ಈ ಚುನಾವಣೆಯ ಅತ್ಯಂತ ಜಿದ್ದಾಜಿದ್ದಿನ ಕ್ಷೇತ್ರಗಳಲ್ಲಿ ಒಂದಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ಪ್ರತಿಷ್ಠೆಯ ಕಣವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿಯ ಶ್ರೀರಾಮುಲು ಇಬ್ಬರೂ ತಮ್ಮ ಎರಡನೆಯ ಕ್ಷೇತ್ರವಾಗಿ ಬಾದಾಮಿಯಿಂದ ಸ್ಪರ್ಧಿಸಿದ್ದಾರೆ.












Click it and Unblock the Notifications