ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಮಖಂಡಿ ಕ್ಷೇತ್ರದ ಶಾಸಕ ಆನಂದ್ ನ್ಯಾಮಗೌಡ ಪರಿಚಯ

|
Google Oneindia Kannada News

ಬಾಗಲಕೋಟೆ, ನವೆಂಬರ್ 07 : ಜಮಖಂಡಿ ಕ್ಷೇತ್ರದ ಶಾಸಕರಾಗಿ ಕಾಂಗ್ರೆಸ್‌ನ ಆನಂದ್ ನ್ಯಾಮಗೌಡ ಅವರು ಆಯ್ಕೆಯಾಗಿದ್ದಾರೆ. ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲಿಯೇ ಜಯಗಳಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ, ಜಮಖಂಡಿ ಕ್ಷೇತ್ರದ ಮಾಜಿ ಶಾಸಕ ಸಿದ್ದು ನ್ಯಾಮಗೌಡ ಅವರ ಪುತ್ರ ಆನಂದ್ ನ್ಯಾಮಗೌಡ. ಸಿದ್ದು ನ್ಯಾಮಗೌಡ ಅವರ ಅಕಾಲಿಕ ಮರಣದ ಬಳಿಕ ಜಮಖಂಡಿ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಯಿತು.

ಜಮಖಂಡಿಯಲ್ಲಿ ಕಾಂಗ್ರೆಸ್‌ಗೆ ಜಯಭೇರಿ: ಅಪ್ಪನನ್ನು ಮೀರಿಸಿದ ಮಗಜಮಖಂಡಿಯಲ್ಲಿ ಕಾಂಗ್ರೆಸ್‌ಗೆ ಜಯಭೇರಿ: ಅಪ್ಪನನ್ನು ಮೀರಿಸಿದ ಮಗ

ಕಾರ್ಯಕರ್ತರ, ಕ್ಷೇತ್ರದ ಜನರ ಒತ್ತಡಕ್ಕೆ ಮಣಿದು ಉಪ ಚುನಾವಣೆಗೆ ಸ್ಪರ್ಧಿಸಿದ ಆನಂದ್ ನ್ಯಾಮಗೌಡ ಅವರು 97017 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮೊದಲ ಬಾರಿಗೆ ಆನಂದ್‌ ನ್ಯಾಮಗೌಡ ಅವರು ಶಾಸಕರಾಗಿ ಚುನಾಯಿತರಾಗಿದ್ದಾರೆ.

ಜಮಖಂಡಿ ವಿಧಾನಸಭೆ ಉಪಚುನಾವಣೆ ಫಲಿತಾಂಶ: ಕಾಂಗ್ರೆಸ್‌ ಜಯಭೇರಿಜಮಖಂಡಿ ವಿಧಾನಸಭೆ ಉಪಚುನಾವಣೆ ಫಲಿತಾಂಶ: ಕಾಂಗ್ರೆಸ್‌ ಜಯಭೇರಿ

'ರಾಜಕೀಯಕ್ಕೆ ಬರುವುದು ದೂರದ ಮಾತು ಎಂದು ಪದೇ ಪದೇ ತಂದೆ ಅವರಿಗೆ ಹೇಳುತ್ತಿದ್ದೆ. ಆದರೆ, ತಂದೆಯ ಸಾವಿನ ಬಳಿಕ ಬೆಂಬಲಿಗರು ತಂದೆಯ ಕೆಲಸಗಳನ್ನು ಮುಂದುವರೆಸುವಂತೆ ಸಾಕಷ್ಟು ಒತ್ತಡ ಹಾಕಿದರು. ಆದ್ದರಿಂದ ರಾಜಕೀಯಕ್ಕೆ ಬಂದೆ' ಎಂದು ಆನಂದ್ ನ್ಯಾಮಗೌಡ ಹೇಳಿದ್ದಾರೆ.

Jamakhandi Congress MLA Anand Nyamagouda profile

ಆನಂದ್ ನ್ಯಾಮಗೌಡ ಅವರ ಸಂಕ್ಷಿಪ್ತ ಪರಿಚಯ ಇಲ್ಲಿದೆ

* ಆನಂದ್ ಸಿದ್ದು ನ್ಯಾಮಗೌಡ

* ದಿ. ಸಿದ್ದು ನ್ಯಾಮಗೌಡ ಅವರ ಪುತ್ರ

* ವಯಸ್ಸು 36 ವರ್ಷ

* ಫೈನಾನ್ಸ್ ವಿಷಯದಲ್ಲಿ ಬೆಂಗಳೂರು ವಿವಿಯಿಂದ ಎಂಬಿಎ ಪದವಿ ಪಡೆದಿದ್ದಾರೆ

* ಜಮಖಂಡಿ ಕ್ಷೇತ್ರದ ಶಾಸಕರಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.

English summary
Anand Nyamagouda elected as MLA of Jamakhandi in the by election 2018. He is first-time MLA and son of late Siddu Nyamagouda, who was a senior Congress leader of Bagalkot district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X