ಹಿಂದೂ ಧರ್ಮದ ಹೆಸರಿನಲ್ಲಿ ಗುಂಡಿಟ್ಟು ಕೊಂದಿಲ್ಲ, ಇದೆಲ್ಲ ರಾಜಕೀಯ: RB ತಿಮ್ಮಾಪುರ
ಬಾಗಲಕೋಟೆ, ಏಪ್ರಿಲ್ 27: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕ್ ಉಗ್ರರ ದಾಳಿಗೆ 26 ಭಾರತೀಯ ಪ್ರವಾಸಿಗರನ್ನು ಹತ್ಯೆಗೈಯಲಾಗಿದೆ. ಈ ಸಂಬಂಧ ಕೆಲವು ಕಾಂಗ್ರೆಸ್ ನಾಯಕರ ಹೇಳಿಕೆಗಳು ಆಕ್ರೋಶಕ್ಕೆ ಕಾರಣವಾಗಿವೆ. ಇದೀಗ ಉಗ್ರರ ದಾಳಿ ವಿಚಾರವಾಗಿ, ಅಬಕಾರಿ ಸಚಿವ ಆರ್ ಬಿ.ತಿಮ್ಮಾಪುರ ಈ ದೇಶದಲ್ಲಿ ಬೇಹುಗಾರಿಕೆ ವಿಫಲತೆ ಆಗುತ್ತಿದೆ. ಇದೇನು ಮೊದಲಲ್ಲ ಮೊದಲಲ್ಲ ಎಂದು ಅವರು ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಈ ದೇಶದಲ್ಲಿ ಬೇಹುಗಾರಿಕೆ ಪೆಲ್ಯೂರ್ ಆಗಿರುವುದು ಇದೇನು ಮೊದಲಲ್ಲ. ಈ ಹಿಂದೆ ಕಾರ್ಗಿಲ್ ಯುದ್ಧ, ಪುಲ್ವಾಮಾದಲ್ಲಿ ವಿಫಲವಾಗಿತ್ತು. ಇದೀಗ ಮತ್ತೆ ಪಹಲ್ಗಾಮ್ ನಲ್ಲಿ ಆಗಿದೆ. ಇದನ್ನು ಕೇಳಿದರೆ ಹಿಂದು ಐಡಿ ಕಾರ್ಡ್ ನೋಡಿದರೂ ಗುಂಡು ಹೊಡೆದರು ಎಂದು ಹೇಳುತ್ತಿದ್ದಾರೆ. ಯಾಕೆ ಮುಸ್ಲಿಮರನ್ನು ಕೊಲ್ಲೆ ಮಾಡಲಿಲ್ಲವಾ ಎಂದು ಪ್ರಶ್ನಿಸಿದ್ದಾರೆ.

ಹಿಂದೂದವರ ಹುಡುಕಿ ಹತ್ಯೆ ಬಗ್ಗೆ ಸಚಿವ ಅನುಮಾನ
ಯಾರೆ ಮೃತಪಟ್ಟರು ಅದನ್ನು ರಾಜಕೀಯವಾಗಿ ಹೇಗೆ ಲಾಭ ತಗೊಬೇಕು? ಎನ್ನುವುದೇ ನಮ್ಮ ಧ್ಯೇಯ ಆದರೆ, ದೇಶದ ಪರಿಸ್ಥಿತಿ ಏನಾಗುತ್ತದೆ ಎಂದು ಯೋಚನೆ ಮಾಡಬೇಕು. ಜನರ ಮೃತಪಟ್ಟಾಗ ದೇಶಕ್ಕೆ ಗಂಡಾಂತರ ಬಂದಿದೆ. ಈ ವಿಚಾರಕ್ಕೆ ನೋವು ವ್ಯಕ್ತಪಡಿಸುವುದು ಬಿಟ್ಟು. ಹಿಂದು ಧರ್ಮದವರನ್ನಷ್ಟೆ ಹುಡುಕಿ ಹುಡುಕಿ ಕೊಂದರು ಎಂದು ಹೇಳುವುದು ಸರಿಯಲ್ಲ.
ಈ ಹಿಂದೆ ಚುನಾವಣೆ ಬಂದಾಗ ಕಾರವಾರದಲ್ಲಿ ಯಾರೋ ಸತ್ತರೆ ಮುಸ್ಲಿಮರೇ ಕೊಂದರು ಎಂದರು. ಆನಂತರ ಅಸಹಜ ಸಾವು ಎಂದು ತಿಳಿದು ಬಂತು. ಎಲ್ಲವನ್ನೂ ಎಲೆಕ್ಷನ್ ದೃಷ್ಟಿಯಿಂದ ನೋಡುವುದು ಸರಿನಾ?. ಪಹಲ್ಗಾಮ್‌ನಲ್ಲಿ ಮೃತಪಟ್ಟ ಮಂಜುನಾಥ ಅವರ ಪತ್ನಿಯೇ, ನಮಗೆ ಆಗ ಮುಸ್ಲಿಂ ವ್ಯಕ್ತಿಯೊಬ್ಬ ಬಂದು ಸಹಾಯ ಮಾಡಿದ ಎಂದಿದ್ದಾರೆ ಎಂದರು.

ಕೆಲವರನ್ನು ಹಿಂದು ಧರ್ಮದವರಾ? ಎಂದು ಕೇಳಿ ಗುಂಡಿಟ್ಟು ಕೊಲೆ ಮಾಡಿದ್ದಾರೆ. ಆಘಾತದಲ್ಲಿದ್ದಾಗ ಮನುಷ್ಯ ಧರ್ಮ ಕೇಳಿ ಹೊಡೆದರು ಎಂದು ಸಹಜವಾಗಿ ಹೇಳಿರಬಹುದು ಎಂದ ತಿಮ್ಮಾಪುರ ಅವರು ಹಿಂದೂ ಹೆಸರು ಕೇಳಿ ಗುಂಡ ಹೊಡೆದರು ಎಂಬುದನ್ನು ಅಲ್ಲೆ ಗಳೆದದಿದ್ದಾರೆ. ಮುಸ್ಲಿಂ ಯುವಕರು ಹಿಂದುಗಳನ್ನು ರಕ್ಷಣೆ ಮಾಡಿದಾರೆ. ಈ ಬಗ್ಗೆ ಪ್ರ್ಯಾಕ್ಟಿಕಲ್ ಆಗಿ ಯೋಚನೆ ಮಾಡಿ ಎಂದು ಹೇಳಿದರು.
ಗುಂಡು ಹೊಡೆದವನು ನಿಲ್ಲದೇ ಬಡ ಬಡ ಓಡಿ ಹೋಗುತ್ತಾನೆ. ನಿಂತು ಜಾತಿ ಕೇಳಿ ಹೊಡೆಯುವಷ್ಟು ವ್ಯವದಾನ ಯಾರಿಗೂ ಇರುವುದಿಲ್ಲ. ಏನೆ ಇದ್ದರು ಅದನ್ನು ಧರ್ಮಕ್ಕೆ ಹಚ್ಚಿ ಲಾಭ ತೆಗೆದುಕೊಳ್ಳುವುದು ಹುನ್ನಾರ ಏನು ನಡೆಯುತ್ತಿದೆ. ಇದು ಆಗಬಾರದು. ಹಿಂದೂ ಹೆಸರಿನಲ್ಲಿ ರಾಜಕಾರಣ ಮಾಡದೇ, ದೇಶ ಗಂಡಾಂತರ ಇರುವುದನ್ನು ಎದುರಿಸಬೇಕು ಎಂಬ ಭಾವನೆ ನಮ್ಮಲ್ಲಿ ಬರಬೇಕೇ ವಿನಃ ಧರ್ಮ ಅಂತ ರಾಜಕೀಯಕ್ಕೆ ಬಳಸಿಕೊಳ್ಳುವುದು ತಪ್ಪು. ಹಿಂದೂ ಹೆಸರಿನಲ್ಲಿ ಕೊಲೆ ಮಾಡಿಲ್ಲ ಎಂದು ಅವರು ಹೇಳಿದರು.
ಒಂದು ವೇಳೆ ಧರ್ಮದ ಹೆಸರಿನಲ್ಲಿ ಕೇಳಿ ಗುಂಡಿಕ್ಕಿದ್ದರೆ ಅದನ್ನು ಧರ್ಮ ಹೆಸರಿನಲ್ಲಿ ರಾಜಕೀಯ ಲಾಭ ಪಡೆದುಕೊಳ್ಳುವ ಹುಚ್ಚುತನ ಮಾಡಬಾರದು. ಕಲಬುರ್ಗಿಯಲ್ಲಿ ಮಹಿಳೆಯರಿಂದ ಪಾಕ್ ಧ್ವಜ ರಕ್ಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಸ್ತೆ ಮೇಲೆ ಅಂಟಿಸಿದ ಪಾಕ್ ಧ್ವಜ ರಕ್ಷಣೆ ಮಾಡಿದವರ ಬಗ್ಗೆ ಪ್ರತಿಕ್ರಿಯಿಸಿ ಅವರು, ರಾಷ್ಟ್ರದ್ರೋಹಿಗಳು ಯಾರಿದ್ದಾರೆ. ಅವರನ್ನು ಬಂಧಿಸಬೇಕು, ಶಿಕ್ಷೆ ಆಗಬೇಕು. ಸಿಂದಗಿಯಲ್ಲಿ ಪಾಕ್ ಧ್ವಜ ಹಾರಿಸಿದ್ದವರು ಯಾರು? ದ್ವಜ ರಕ್ಷಿಸಿದ ಮುಸ್ಲಿಂ ಮಹಿಳೆಯರ ಮೇಲೂ ಕ್ರಮ ಆಗುತ್ತದೆ ಎಂದು ಸಚಿವರು ಹೇಳಿದರು.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications