• search

ಬಿಜೆಪಿ ಶಾಸಕ ಗೋವಿಂದ ಕಾರಜೋಳ ಪುತ್ರನ ವಿರುದ್ಧ ಎಫ್‌ಐಆರ್

By Manjunatha
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬಾಗಲಕೋಟೆ, ಜುಲೈ 16: ಶಾಸಕರ ಮಕ್ಕಳ ಗೂಂಡಾಗಿರಿ ಪ್ರಕರಣಗಳಿಗೆ ಕೊನೆಯೇ ಇದ್ದಂತಿಲ್ಲ. ಶಾಸಕ ಹ್ಯಾರಿಸ್ ಮಗನ ಪ್ರಕರಣದ ನಂತರ ಈಗ ಬಿಜೆಪಿ ಶಾಸಕ ಗೋವಿಂದ ಕಾರಜೋಳಮಗ ತನ್ನ ಗೂಂಡಾಗಿರಿಯಿಂದ ಸುದ್ದಿಯಲ್ಲಿದ್ದಾನೆ.

  ಮುಧೋಳ ಕ್ಷೇತ್ರದ ಬಿಜೆಪಿ ಶಾಸಕ ಗೋವಿಂದ ಕಾರಜೋಳ ಅವರ ಪುತ್ರ ಅರುಣ್ ಕಾರಜೋಳಪೊಲೀಸ್ ಪೇದೆಯೊಬ್ಬನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದುಆತನ ವಿರುದ್ಧ ಬಾಗಲಕೋಟೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

  ಮಾದಕ ದ್ರವ್ಯ ವ್ಯಸನದಿಂದ ಮಗನ ಹೊರತಂದ ಕಷ್ಟ ಹೇಳಿಕೊಂಡ ಶಾಸಕ

  ಅರುಣ್ ಕಾರಜೋಳ ಅವರು ನಿನ್ನೆ ರಾತ್ರಿ ನೋಪಾರ್ಕಿಂಗ್‌ನಲ್ಲಿ ಕಾರು ನಿಲ್ಲಿಸಿದ್ದರು. ಅದನ್ನು ತೆಗೆಯುವಂತೆ ಸಂಚಾರಿ ಪೊಲೀಸ್ ಕಾನ್ಸ್ಟೇಬಲ್ ಮಲ್ಲೇಶ್ ಲಮಾಣಿ ಸೂಚಿಸಿದ್ದಾರೆ. ಇದಕ್ಕೆ ಕೋಪಗೊಂಡ ಅರುಣ್ ಮಲ್ಲೇಶ್‌ ಅನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

  FIR against BJP MLA Govind Karjols son Arun Karjol

  ಅರುಣ್ ಕಾರಜೋಳ ಅವರು ಪೊಲೀಸ್ ಪೇದೆ ಒಬ್ಬರ ಜೊತೆ ಅಸಭ್ಯವಾಗಿ ವರ್ತಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪೇದೆ ಮಲ್ಲೇಶ್ ಅವರು ದೂರು ದಾಖಲಿಸಿದ್ದು ಎಫ್‌ಐಆರ್ ಕೂಡ ದಾಖಲಾಗಿದೆ.

  ಆದರೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶಾಸಕರ ಪುತ್ರ ಅರುಣ್ ಕಾರಜೋಳ ತಾವು ಅವಾಚ್ಯ ಶಬ್ದಗಳಿಂದ ಮಾತನಾಡಿಲ್ಲವೆಂದು, ಪೇದೆಯೇ ಅನಾಗರೀಕವಾಗಿ ವರ್ತಿಸಿದ್ದಾಗಿ ಹಾಗೂ ಎಫ್‌ಐಆರ್‌ ಕೂಡಾ ದುರುದ್ದೇಶಪೂರ್ವಕವಾಗಿ ಹಾಕಿರುವುದಾಗಿ ಹೇಳಿದ್ದಾರೆ.

  ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ್ ಬೆಂಬಲಿಗನ ವಿರುದ್ಧ ಪ್ರಕರಣ ದಾಖಲು

  ಬಿಜೆಪಿ ಶಾಸಕರಾಗಿರುವ ಗೋವಿಂದ ಕಾರಜೋಳ ಅವರು ಮುಧೋಳ ಕ್ಷೇತ್ರದಲ್ಲಿ ಕಾಂಗ್ರೆಸ್‌ ವಿರುದ್ಧ 16 ಸಾವಿರಕ್ಕೂ ಹೆಚ್ಚು ಮತಗಳಿಂದ ಜಯಗಳಿಸಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Baglkote police registered FIR against Mudhol constituency BJP MLA Govind Karjol's son Arun Karjol for wild behavior with a police constable. he allegedly used bad words to police constable.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more