ಈಶ್ವರಪ್ಪ ಮಗಳ ಮೊಬೈಲ್ ಬಾಗಲಕೋಟೆ ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಪತ್ತೆ
Recommended Video
ಬಾಗಲಕೋಟೆ, ಸೆಪ್ಟೆಂಬರ್ 26: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮಗಳ ಕಳೆದುಹೋದ ಮೊಬೈಲ್ ಬಾಗಲಕೋಟೆಯಲ್ಲಿ ಪತ್ತೆಯಾಗಿದೆ. ಬಾಗಲಕೋಟೆಯ ಬಂಟನೂರು ಗ್ರಾಮದ ಬಿಜೆಪಿ ಕಾರ್ಯಕರ್ತ ಲಕ್ಷ್ಮಣ ಬಂಡಿವಡ್ಡರ್ ಮನೆಯಲ್ಲಿ ಮೊಬೈಲ್ ಪತ್ತೆಯಾಗಿದೆ.
ಬೆಂಗಳೂರಿನ ಈಶ್ವರಪ್ಪ ಅವರ ಗಾಂಧಿಭವನದ ನಿವಾಸದಲ್ಲಿ ಮೊಬೈಲ್ ಕಳೆದುಹೋಗಿತ್ತು. ಈ ಬಗ್ಗೆ ಅವರ ಮಗಳು ಕೆ.ಶಾಂತಾ ಸೆಪ್ಟೆಂಬರ್ 13ರಂದು ಬೆಂಗಳೂರು ನಾರ್ತ್ ಈಸ್ಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸ್ಯಾಮಸಂಗ್ ಜೆ -6 ಮಾಡಲ್ ನ ಮೊಬೈಲ್ ಅನ್ನು ಐಎಮ್ ಇಐ ಸಂಖ್ಯೆ ಮೂಲಕ ಸ್ಥಳ ಪತ್ತೆ ಹಚ್ಚಿದ ಬೆಂಗಳೂರು ಪೊಲೀಸರು, ಈ ಬಗ್ಗೆ ಬಾಗಲಕೋಟೆ ಜಿಲ್ಲೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮುಧೋಳ ತಾಲೂಕಿನ ಬಂಟನೂರು ಗ್ರಾಮದ ಬಿಜೆಪಿ ಕಾರ್ಯಕರ್ತ ಲಕ್ಷ್ಮಣ ಬಂಡಿವಡ್ಡರ್ ಮನೆಯಲ್ಲಿ ಮೊಬೈಲ್ ಪತ್ತೆಯಾಗಿದೆ. ಆದರೆ ಆ ಮೊಬೈಲ್ ಇಲ್ಲಿಗೆ ಹೇಗೆ, ಯಾಕೆ ಬಂತು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈಶ್ವರಪ್ಪ ಭೇಟಿ ಮಾಡಿದ ವೇಳೆ ಲಕ್ಷ್ಮಣ್ ಮೊಬೈಲ್ ತೆಗೆದುಕೊಂಡು ಬಂದರಾ? ಎನ್ನುವ ಸಂದೇಹಕ್ಕೆ ಈ ಘಟನೆ ಎಡೆಮಾಡಿದೆ. ಲಕ್ಷ್ಮಣ ಬಂಡಿವಡ್ಡರ್ ಅವರ ಮನೆಯಿಂದ ಮೊಬೈಲ್ ಪಡೆದ ಲೋಕಾಪುರ ಪೊಲೀಸರು ಎರಡು ದಿನಗಳ ಹಿಂದೆ ಮೊಬೈಲ್ ಅನ್ನು ಬೆಂಗಳೂರಿಗೆ ಕಳುಹಿಸಿದ್ದಾರೆ.












Click it and Unblock the Notifications