ಶ್ರೀರಾಮುಲುರನ್ನು ಬಿಜೆಪಿ ರಾಜಕೀಯ ಬಲಿಪಶು ಮಾಡುತ್ತಿದೆ: ಉಗ್ರಪ್ಪ

ಬಾಗಲಕೋಟೆ, ಮೇ 3: ಬಾದಾಮಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಅವರನ್ನು ಕಣಕ್ಕೆ ಇಳಿಸಿರುವ ಬಿಜೆಪಿ, ಅವರನ್ನು ರಾಜಕೀಯವಾಗಿ ಬಲಿಪಶು ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಆರೋಪಿಸಿದ್ದಾರೆ.

ಬಾದಾಮಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮುಲು ಅವರನ್ನು ಬಿಜೆಪಿ ಡಿಸಿಎಂ ಮಾಡಲ್ಲ. ಅವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಮೊಳಕಾಲ್ಮೂರು ಹಾಗೂ ಬಾದಾಮಿ ಎರಡು ಕಡೆಗಳಲ್ಲಿ ಅವರು ಸೋಲುತ್ತಾರೆ. ಸಿದ್ದರಾಮಯ್ಯ ಗೆಲುವು ಖಚಿತ ಎಂದು ಹೇಳಿದರು.

"ಶ್ರೀರಾಮುಲು ಅವರ ಮೇಲೆ ಹಾಗೂ ವಾಲ್ಮೀಕಿ ಸಮಾಜದ ಮೇಲೆ ನಿಜಕ್ಕೂ ಕಾಳಜಿ ಇದ್ದಿದ್ದರೆ ಕೇಂದ್ರದಲ್ಲಿ ಅವರನ್ನು ಮಂತ್ರಿ ಮಾಡಲಿಲ್ಲವೇಕೆ?" ಎಂದು ಇದೇ ಸಂದರ್ಭದಲ್ಲಿ ಉಗ್ರಪ್ಪ ಪ್ರಶ್ನಿಸಿದರು.

BJP makes Sriramulu as scapegoat in Badami: Ugrappa

"ರಾಮುಲುಗೂ , ಬಾದಾಮಿಗೂ ನಿಕಟ ಸಂಬಂಧ ಇರಲಿಲ್ಲ. ಬಿಜೆಪಿಗೆ ನಿಜಕ್ಕೂ ತಾಕತ್ ಇದ್ದಿದ್ದರೆ ಸಿಎಂ ವಿರುದ್ಧ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್ ಇಲ್ಲವೇ ಸಂಸದ ಗದ್ದಿಗೌಡರ ಅವರನ್ನು ಕಣಕ್ಕೆ ಇಳಿಸಬೇಕಿತ್ತು. ಆದರೆ, ರಾಮುಲು ಅವರನ್ನು ರಾಜಕೀಯ ತಂತ್ರಗಾರಿಕೆ ಮಾಡಿ ಬಲಿಪಶು ಮಾಡುತ್ತಿದೆ," ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+