• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಎನ್‌ಪಿಯಿಂದ ಪರಿಸರಸ್ನೇಹಿ ಎಲೆಕ್ಟ್ರಾನಿಕ್ ವಾಹನ ಬಿಡುಗಡೆ

ಬೆಂಗಳೂರು, ಆಗಸ್ಟ್ 9: ಹೆಚ್ಚುತ್ತಿರುವ ವಾಯುಮಾಲಿನ್ಯದ ಪ್ರಮಾಣವನ್ನು ತಗ್ಗಿಸಲು ವಿದ್ಯುತ್ ಚಾಲಿತ ವಾಹನಗಳ ಬಳಕೆ ಅಗತ್ಯ. ಡೀಸೆಲ್ ಮತ್ತು ಪೆಟ್ರೋಲ್ ಇಂಧನದ ವಾಹನಗಳಿಂದ ವಾಯುಮಾಲಿನ್ಯದ ಪ್ರಮಾಣ ಹೆಚ್ಚುತ್ತಲೇ ಇದೆ. ಇದನ್ನು ತಗ್ಗಿಸಲು ಹಾಗೂ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಉತ್ತೇಜನ ನೀಡಲು ಎಎನ್‌ಪಿ ಟ್ರಾವೆಲ್ಸ್ ಸಂಸ್ಥೆ ಗುರುತರ ಕೆಲಸ ಮಾಡುತ್ತಿದೆ.

ಎಎನ್‌ಪಿ ಟ್ರಾವೆಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಟಾಟಾ ಮೋಟಾರ್ಸ್‌ನ ಸಹಭಾಗಿತ್ವದೊಂದಿಗೆ ಎಎನ್‌ಪಿ ವಿದ್ಯುತ್‌ಚಾಲಿತ ವಾಹನಗಳನ್ನು ರಸ್ತೆಗಳಿಸಿವೆ. ಬೆಂಗಳೂರಿನಂತಹ ನಗರಗಳಲ್ಲಿ ಸ್ವಂತ ವಾಹನಗಳು ಮತ್ತು ಸಾರ್ವಜನಿಕ ಸಾರಿಗೆಗಳು ಹಾಗೂ ಬಾಡಿಗೆ ವಾಹನಗಳ ಸಂಚಾರ ಹೆಚ್ಚು. ಇವುಗಳ ಜತೆಗೆ ಉದ್ಯೋಗಿಗಳ ಓಡಾಟಕ್ಕಾಗಿ ಕಾರ್ಪೊರೇಟ್ ಕಂಪೆನಿಗಳು ವಾಹನಗಳನ್ನು ಪಡೆದುಕೊಳ್ಳುತ್ತವೆ. ಈ ವಾಹನಗಳು ಪರಿಸರ ಸ್ನೇಹಿಯಾದರೆ ಒಂದು ಮಟ್ಟಕ್ಕೆ ನಿಸರ್ಗಕ್ಕೆ ದೊಡ್ಡ ಕೊಡುಗೆ ನೀಡಿದಂತೆ ಎನ್ನುವುದು ಎಎನ್‌ಪಿ ಟ್ರಾವೆಲ್ಸ್ ಸಂಸ್ಥೆಯ ಉದ್ದೇಶ. ಅದರಂತೆ ಈ ಸಂಸ್ಥೆ ಕಾರ್ಯೋನ್ಮುಖವಾಗಿದೆ.

ಸಿ.ಕೆ. ಮುರಳೀಧರ ಮತ್ತು ಎಂ.ಕೆ. ನಾಗೇಶ್ ಅವರು ಪ್ರಾಂಭಿಸುತ್ತಿದ್ದಾರೆ ಎಎನ್‌ಪಿ ಸಂಸ್ಥೆಯ ವಿಶಿಷ್ಟ ಯೋಜನೆಯಡಿ ಕಾರ್ಪೊರೇಟ್ ಕಂಪೆನಿಗಳ ಉದ್ಯೋಗಿಗಳ ಸಾರಿಗೆಗಾಗಿ ಡೀಸೆಲ್ ಚಾಲಿತ ವಾಹನಗಳ ಬದಲು ವಿದ್ಯುತ್ ಚಾಲಿತ ವಾಹನಗಳ ಬಳಕೆ ಮಾಡಲಾಗುತ್ತಿದೆ. ಆರಂಭದಲ್ಲಿ 50 ವಾಹನಗಳನ್ನು ಖರೀದಿಸಿದ್ದ ಸಂಸ್ಥೆ, ಅವುಗಳನ್ನು ಕಾರ್ಪೋರೇಟ್ ಕಂಪೆನಿಗಳ ಉದ್ಯೋಗಿಗಳ ಸಾರಿಗೆಗೆ ಬಾಡಿಗೆಗೆ ನೀಡುವ ಮೂಲಕ ತನ್ನ ಪ್ರಯೋಗದಲ್ಲಿ ಯಶ ಕಂಡಿದೆ.

ಲಾಭಕ್ಕಿಂತಲೂ ಮುಖ್ಯವಾಗಿ ಪರಿಸರಕ್ಕೆ ಪೂರಕವಾದ ವಿದ್ಯುತ್ ಚಾಲಿತ ವಾಹನದ ಬಳಕೆಯನ್ನು ಉತ್ತೇಜಿಸುವ ಈ ಉದ್ದೇಶವು ಈಗ ಮತ್ತಷ್ಟು ವಿಸ್ತಾರವಾಗುತ್ತಿದೆ. 2012ರಲ್ಲಿ ಆರಂಭವಾದ ವಾಹನ ಸೇವಾದಾರ ಸಂಸ್ಥೆ ಬೃಹದಾಕಾರವಾಗಿ ಬೆಳೆಯುವತ್ತ ದಾಪುಗಾಲು ಹಾಕಿದೆ. ಶೀಘ್ರದಲ್ಲಿಯೇ 500 ವಿದ್ಯುತ್ ಚಾಲಿತ ವಾಹನಗಳು ಎಎನ್‌ಪಿ ಸಂಸ್ಥೆಯಿಂದ ರಸ್ತೆಗಿಳಿಯಲಿವೆ. ಬೆಂಗಳೂರು, ಚೆನ್ನೈ, ಹೈದರಾಬಾದ್‌ನಂತಹ ದಕ್ಷಿಣ ಭಾರತದ ಪ್ರಮುಖ ಕಾರ್ಪೊರೇಟ್ ನಗರಗಳಲ್ಲಿ ಇವು ಸಂಚಾರ ನಡೆಸಲಿವೆ.

ಟಾಟಾ ಮೋಟಾರ್ಸ್ ಸಹಭಾಗಿತ್ವದಲ್ಲಿ ತಮ್ಮ ವಿದ್ಯುತ್ ಚಾಲಿತ ವಾಹನಗಳನ್ನು ಹೆಚ್ಚಿಸುತ್ತಿರುವ ಸಂಭ್ರಮವನ್ನು ಎಎನ್‌ಪಿ ಸಂಸ್ಥೆ ಆಚರಿಸಿಕೊಳ್ಳುತ್ತಿದೆ. ಗೌರಿ ಗದ್ದೆ ದತ್ತಾತ್ರೇಯ ಪೀಠದ ಶ್ರೀ ವಿನಯ್ ಗುರೂಜಿ ಅವರು ಆಗಸ್ಟ್ 12ರ ಬೆಳಿಗ್ಗೆ 11 ಗಂಟೆಗೆ ಈ ಸಂಭ್ರಮಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾರೆಡ್ಡಿ, ಸಂಸದ ತೇಜಸ್ವಿ ಸೂರ್ಯ, ಜಯನಗರ ಶಾಸಕಿ ಸೌಮ್ಯಾ ರೆಡ್ಡಿ, ಪಟ್ಟಾಭಿರಾಮನಗರ ಪಾಲಿಕೆ ಸದಸ್ಯೆ ನಾಗರತ್ನ ರಾಮಮೂರ್ತಿ, ಇ.ವಿ. ಕಾರ್ಸ್‌ನ ಮಾರಾಟ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥ ಆಶೇಶ್ ಧಾರ್ ಮತ್ತು ಕೊಂಕೋರ್ಡ್ ಮೋಟಾರ್ಸ್‌ನ ದಕ್ಷಿಣ ವಿಭಾಗದ ಮುಖ್ಯಸ್ಥ ಸತೀಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಜಯನಗರ 4ನೇ ಟಿ ಬ್ಲಾಕ್‌ನ 38ನೆಯ ಮುಖ್ಯರಸ್ತೆಯಲ್ಲಿರುವ ಎಎನ್‌ಪಿ ಟ್ರಾವೆಲ್ಸ್ ಕಚೇರಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಸುರಕ್ಷಿತ, ವಿಶ್ವಾಸಾರ್ಹ, ನಿರಂತರ ಮತ್ತು ಪರಿಣಾಮಕಾರಿ ಸೇವೆಯನ್ನು ಅಗ್ಗದ ಬೆಲೆಗೆ ಪರಿಣತ ಮತ್ತು ಬದ್ಧತೆಯುಳ್ಳ ತಂಡದೊಂದಿಗೆ ಗ್ರಾಹಕರಿಗೆ ಪ್ರಾಮಾಣಿಕತೆಯಿಂದ, ಸಮಗ್ರತೆಯಿಂದ ಮತ್ತು ದಕ್ಷತೆಯಿಂದ ಒದಗಿಸುವುದು ತಮ್ಮ ಧ್ಯೇಯ ಎಂದು ಎಎನ್‌ಪಿ ಸಂಸ್ಥೆ ಹೇಳಿಕೊಂಡಿದೆ.

ಕಾರ್ಪೊರೇಟ್ ಉದ್ಯಮವು ಹೆಚ್ಚಿನ ಪ್ರಮಾಣದಲ್ಲಿ ಡೀಸೆಲ್ ಚಾಲಿತ ವಾಹನಗಳನ್ನು ಬಳಸಿಕೊಳ್ಳುತ್ತಿದೆ. ಇಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಾದರೆ ಮಾಲಿನ್ಯದ ಪ್ರಮಾಣ ಗಮನಾರ್ಹ ರೀತಿಯಲ್ಲಿ ತಗ್ಗಲಿದೆ ಎನ್ನುವುದು ಸಂಸ್ಥೆಯ ಉದ್ದೇಶ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X