• search
  • Live TV
ಅಮೃತಸರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾಕ್‌ಡೌನ್‌ ವೇಳೆ ಕೆಲಸ ಕಳೆದುಕೊಂಡ ಮಹಿಳೆಯರು ವೇಶ್ಯಾವಾಟಿಕೆ ಜಾಲದಲ್ಲಿ

|

ಲೂಧಿಯಾನಾ, ಮಾರ್ಚ್ 7: ಪಂಜಾಬ್‌ನ ಲೂಧಿಯಾನಾದಲ್ಲಿ ಪೊಲೀಸರು ಅಂತಾರಾಜ್ಯ ವೇಶ್ಯಾವಾಟಿಕೆ ರಾಕೆಟ್ ಜಾಲವನ್ನು ಭೇದಿಸಿದ್ದಾರೆ. ಹತ್ತು ಮಹಿಳೆಯರು ಸೇರಿದಂತೆ 14 ವ್ಯಕ್ತಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಜಾಲದ ಕಿಂಗ್‌ಪಿನ್ ಹಾಗೂ ಹಣದ ಅವಶ್ಯಕತೆ ಇರುವ ಮಹಿಳೆಯರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಮಹಿಳೆಯನ್ನು ಸಹ ಬಂಧಿಸಲಾಗಿದೆ.

ಶನಿವಾರ ಮುಂಜಾನೆ ಕಾರ್ಯಾಚರಣೆ ನಡೆಸಲಾಗಿತ್ತು. ಲಾಕ್‌ಡಣ್ ಕಾರಣದಿಂದ ಕೆಲಸ ಕಳೆದುಕೊಂಡ ವಿವಿಧ ರಾಜ್ಯಗಳ ಮಹಿಳೆಯರು ವೇಶ್ಯಾವಾಟಿಕೆ ವೃತ್ತಿಗೆ ಇಳಿದಿದ್ದರು ಎಂದು ಲೂಧಿಯಾನಾ ಎಡಿಸಿಪಿ-4, ರೂಪಿಂದರ್ ಕೌರ್ ಸ್ರಾನ್ ತಿಳಿಸಿದ್ದಾರೆ.

ಈ ಮಹಿಳೆಯರು ನೇಪಾಳ, ಕೇರಳ, ಹಿಮಾಚಲಪ್ರದೇಶ, ಹರ್ಯಾಣ, ಉತ್ತರಾಖಂಡ, ಚಂಡೀಗಡ ಮತ್ತು ಅಮೃತಸರಗಳಿಂದ ಬಂದವರಾಗಿದ್ದಾರೆ. ಈ ಜಾಲದಲ್ಲಿ ಮತ್ತಷ್ಟು ಜನರು ಭಾಗಿಯಾಗಿರುವ ಶಂಕೆ ಇದ್ದು, ಅದನ್ನು ಹೊರತೆಗೆಯಲು ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಹೇಳಿದ್ದಾರೆ.

ನಿರ್ಬಂಧಿತ ಮಾತ್ರೆಗಳು ಪತ್ತೆ

ನಿರ್ಬಂಧಿತ ಮಾತ್ರೆಗಳು ಪತ್ತೆ

ವೈದ್ಯರ ಸಲಹೆ ಮೇರೆಗೆ ಮಾತ್ರವೇ ತೆಗೆದುಕೊಳ್ಳಬೇಕಾದ ನಿರ್ಬಂಧಿತ ಎಟಿಜೊಲಮ್ ಮತ್ತು ಎಸ್ಕಿಟಲೊಪ್ರಮ್ ಮಾತ್ರೆಗಳನ್ನು ಕೂಡ ಅಲ್ಲಿಂದ ವಶಪಡಿಸಿಕೊಳ್ಳಲಾಗಿದೆ. ಅವುಗಳ ಪೂರೈಕೆ ಮೂಲವನ್ನು ತಿಳಿದುಕೊಳ್ಳಲು ತನಿಖೆ ನಡೆಸಲಾಗುತ್ತಿದೆ.

ಉದ್ಯೋಗ ಹುಡುಕುವವರೇ ಟಾರ್ಗೆಟ್

ಉದ್ಯೋಗ ಹುಡುಕುವವರೇ ಟಾರ್ಗೆಟ್

ಮುಖ್ಯ ಆರೋಪಿ ಮಂಜಿತ್ ಕೌರ್ ಅಲಿಯಾಸ್ ಪಮ್ಮಿಯನ್ನು 2018ರಲ್ಲಿ ಇದೇ ರೀತಿಯ ಆರೋಪದಲ್ಲಿ ಬಂಧಿಸಲಾಗಿತ್ತು. ಜೈಲಿನಿಂದ ಹೊರಬಂದ ಬಳಿಕವೂ ಆಕೆ ಈ ದಂಧೆಯನ್ನು ಮುಂದುವರಿಸಿದ್ದಳು. ಮುಖ್ಯವಾಗಿ ಲಾಕ್‌ಡೌನ್ ವೇಳೆ ಕೆಲಸ ಕಳೆದುಕೊಂಡು, ಉದ್ಯೋಗ ಅರಸುತ್ತಿದ್ದ ಮಹಿಳೆಯರನ್ನೇ ಗುರಿ ಮಾಡಿಕೊಂಡು ಅಂತಹವರಿಗೆ ಕೆಲಸದ ಆಮಿಷವೊಡ್ಡಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದಳು.

ಸುಳ್ಳು ಹೇಳಿ ಬದುಕುತ್ತಿರುವ ಯುವತಿಯರು

ಸುಳ್ಳು ಹೇಳಿ ಬದುಕುತ್ತಿರುವ ಯುವತಿಯರು

ದೆಹಲಿಯ ಯುವತಿಯೊಬ್ಬಳು ಲಾಕ್‌ಡೌನ್ ವೇಳೆ ಸಂಬಂಧಿಯೊಬ್ಬರಿಂದ ಪಡೆದ ಸಾಲವನ್ನು ಮರಳಿ ನೀಡದ ಕಾರಣಕ್ಕೆ ಆಕೆಯನ್ನು ಈ ವೃತ್ತಿಗೆ ತಳ್ಳಲಾಗಿತ್ತು. ಉದ್ಯೋಗದ ಭರವಸೆ ನಂಬಿ ಗುರುದ್ವಾರಕ್ಕೆ ತೆರಳಿದ್ದ ಮತ್ತೊಬ್ಬ ಯುವತಿಯನ್ನು ಅಲ್ಲಿಂದ ಎಳೆದೊಯ್ದು ವೇಶ್ಯಾವಾಟಿಕೆಗೆ ದೂಡಲಾಗಿತ್ತು. ಈ ಯುವತಿಯರು ಕಾರ್ಖಾನೆಯಲ್ಲಿ ಅಥವಾ ಮದುವೆ ಸಮಾರಂಭಗಳಲ್ಲಿ ಕೆಲಸ ಮಾಡುತ್ತಿರುವುದಾಗಿ ಕುಟುಂಬದವರಿಗೆ ಸುಳ್ಳು ಹೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇತರೆ ನಗರಗಳಲ್ಲಿಯೂ ನಂಟು

ಇತರೆ ನಗರಗಳಲ್ಲಿಯೂ ನಂಟು

ಬಂಧಿತರಿಂದ ಏಳು ಮೊಬೈಲ್ ಫೋನ್‌ಗಳು, 28 ಪ್ಯಾಕೆಟ್ ಕಾಂಡೋಮ್‌ಗಳು, ನಗದು, ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಖ್ಯ ಆರೋಪಿ ಹಾಗೂ ಇತರರು ಇತರೆ ನಗರಗಳಲ್ಲಿಯೂ ನಡೆಯುತ್ತಿರುವುದರ ಬಗ್ಗೆ ಬಾಯಿಬಿಟ್ಟಿದ್ದಾರೆ. ದೇಶದ ಇನ್ನೂ ಅನೇಕ ಕಡೆ ಲಾಕ್‌ಡೌನ್ ಬಳಿಕ ವೇಶ್ಯಾವಾಟಿಕೆ ದಂಧೆ ಹೆಚ್ಚಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
Ludhiana police have busted an inter-state prostitution racket, the women who lost jobs during lockdown were forced into prostitution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X