83ನೇ ವಯಸ್ಸಲ್ಲಿ ಎಂ.ಎ., ಇಂಗ್ಲಿಷ್ ಪದವಿ ಪಡೆದ ಸೋಹನ್ ಸಿಂಗ್ ಗಿಲ್
ಹೋಶಿಯಾರ್ ಪುರ್ (ಪಂಜಾಬ್), ಸೆಪ್ಟೆಂಬರ್ 23: ಜಲಂಧರ್ ವಿಶ್ವವಿದ್ಯಾನಿಲಯದಿಂದ ಈ ತಿಂಗಳು 83 ವರ್ಷದ ವ್ಯಕ್ತಿಯೊಬ್ಬರು ಇಂಗ್ಲಿಷ್ ಎಂ.ಎ., ಸ್ನಾತಕೋತ್ತರ ಪದವಿ ಮಾಡಿದ್ದಾರೆ. ಹೋಶಿಯಾರ್ ಪುರ್ ನ ಸೋಹನ್ ಸಿಂಗ್ ಗಿಲ್ ಮಹಿಲ್ ಪುರ್ ನಲ್ಲಿ ದಶಕಗಳ ಹಿಂದೆ ಪದವಿ ಪಡೆದಿದ್ದರು.
ಆ ನಂತರ ಉಪ ಪ್ರಾಂಶುಪಾಲರು ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವಿ ಮಾಡುವಂತೆ ಸಲಹೆ ಮಾಡಿದ್ದಾರೆ. ಆದರೆ ಸೋಹನ್ ಸಿಂಗ್ 1958ರಲ್ಲಿ ಮದುವೆಯಾಗಿ, ತಮ್ಮ ಹೆಂಡತಿ ಜತೆಗೆ ಕೀನ್ಯಾಗೆ ತೆರಳಿದ್ದಾರೆ. ಅಲ್ಲಿ ಕೆಲಸ ಮಾಡುವಾಗಲೇ ಮಕ್ಕಳಿಗೆ ನಾನಾ ವಿಷಯಗಳನ್ನು ಬೋಧಿಸಿದ್ದಾರೆ. ಅಂತೂ 1991ರಲ್ಲಿ ಅವರು ಭಾರತಕ್ಕೆ ಹಿಂತಿರುಗಿದ್ದಾರೆ.

ನನ್ನ ಉಪ ಪ್ರಾಂಶುಪಾಲರು ಮಾಡಿದ್ದ ಸಲಹೆಯನ್ನು ನೆನಪಿಸಿಕೊಂಡು, 2018ರಲ್ಲಿ ಎಂ.ಎ., ಇಂಗ್ಲಿಷ್ ಗೆ ತಯಾರಿ ನಡೆಸಲು ನಿರ್ಧರಿಸಿದೆ ಎಂದು ಹೇಳಿಕೊಂಡಿದ್ದಾರೆ ಸಿಂಗ್. ಅಂತಿಮವಾಗಿ ಜಲಂಧರ್ ನ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯಿಂದ ಅವರು ಎಂ.ಎ., ಇಂಗ್ಲಿಷ್ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.












Click it and Unblock the Notifications