• search
  • Live TV
ಅಮೃತಸರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತದ ಅತ್ಯಂತ ಪುರಾತನ ಎಕ್ಸ್ ಪ್ರೆಸ್ ಟ್ರೈನಿನ ಬರ್ಥ್ ಡೇ ಸಂಭ್ರಮ

|

ಮುಂಬೈ ಮೇಲ್ -ಭಾರತದ ಅತ್ಯಂತ ಪುರಾತನ ರೈಲಿಗೆ ಜೂನ್ 02ರಂದು 107ನೇ ಹುಟ್ಟುಹಬ್ಬದ ಸಂಭ್ರಮ. ಈ ಟ್ರೈನಿನ ಪ್ರಯಾಣಿಕರು ತಮ್ಮ ನೆಚ್ಚಿನ ರೈಲಿನ ಬರ್ಥ್ ಡೇ ಆಚರಿಸಿ ಸಂಭ್ರಮಿಸಿದ್ದಾರೆ.

107 ವರ್ಷದ ಪಂಜಾಬ್​ ಮೇಲ್​ಗೆ ಕೋತ್ಕಾಪುರಾ ರೈಲು ನಿಲ್ದಾಣದಲ್ಲಿ ಜನರು ಹಾರ-ತುರಾಯಿ ಹಾಕಿ ಸಿಂಗರಿಸಿದರು. ಈ ವಿಶಿಷ್ಟ ರೈಲಿನ ಇಂದಿನ ಚಾಲಕರಿಗೂ ಮಾಲೆ ಹಾಕಲಾಯಿತು. ಪ್ರಯಾಣಿಕರ ಜೊತೆ ಸೇರಿ ಚಾಲಕರು ಕೂಡಾ ಕೇಕ್​ ಕಟ್​ ಮಾಡಿದರು. ನಂತರ ನಿಲ್ದಾಣದಲ್ಲಿದ್ದ ಎಲ್ಲರಿಗೂ ಸಿಹಿ ಹಂಚಲಾಯಿತು. ಈ ರೀತಿ ಟ್ರೈನಿನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಈ ಪಂಜಾಬ್​ಮೇಲ್​ಭಾರತದ ಅತ್ಯಂತ ಹಳೆಯದಾದ ಮತ್ತು ಅತಿ ಹೆಚ್ಚು ದೂರ ಕ್ರಮಿಸಿದ ರೈಲುಗಳಲ್ಲಿ ಒಂದೆನಿಸಿದೆ. 1912 ಜೂನ್​1ರಂದು ಮುಂಬೈನಿಂದ ಪೇಶಾವರ(ಪಾಕಿಸ್ತಾನ)ಕ್ಕೆ ತನ್ನ ಮೊದಲ ಪ್ರಯಾಣ ಆರಂಭಿಸಿತ್ತು. ಬ್ರಿಟಿಷ್​- ಇಂಡಿಯಾದ ಅತಿ ವೇಗದ ರೈಲು ಎಂದೆನಿಸಿಕೊಂಡಿತ್ತು.

ಮುಂಬೈನಿಂದ ಫಿರೋಜ್ ಪುರ್ ತನಕ

ಮುಂಬೈನಿಂದ ಫಿರೋಜ್ ಪುರ್ ತನಕ

ಸದ್ಯ ಭಾರತೀಯ ರೈಲ್ವೆಯ ಕೇಂದ್ರ ವಲಯದಲ್ಲಿ ಈ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಟ್ರೈನ್ ಸಂಚರಿಸುತ್ತಿದ್ದು, ಮುಂಬೈನಿಂದ ಫಿರೋಜ್ ಪುರ್ ತನಕ ತೆರಳುತ್ತಿದೆ. 12137 ಸಂಖ್ಯೆ ಟ್ರೈನ್ ಮುಂಬೈ ಸಿಎಸ್ಟಿ ನಿಲ್ದಾಣದಿಂದ ಫಿರೋಜ್ ಪುರ್ ತೆರಳಿದರೆ, 12138 ಸಂಖ್ಯೆ ರೈಲು ವಾಪಸ್ ಮುಂಬೈಗೆ ಹಿಂತಿರುಗಲಿದೆ.

ಪಂಜಾಬ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು

ಪಂಜಾಬ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು

ಆರಂಭದ ದಿನಗಳಲ್ಲಿ ಪಂಜಾಬ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು, ಮುಂಬೈನಿಂದ ಪಾಕಿಸ್ತಾನದ ಪೇಶಾವರ್ ಗೆ ಸಂಚರಿಸುತ್ತಿತ್ತು. 47 ಗಂಟೆಗಳಲ್ಲಿ 2,496 ಕಿ.ಮೀ ಕ್ರಮಿಸುತ್ತಿತ್ತು. ಆ ಕಾಲದಲ್ಲಿ ಬ್ರಿಟಿಷರು ಮಾತ್ರ ಇದರಲ್ಲಿ ಸಂಚರಿಸುತ್ತಿದ್ದರು. ಆನಂತರ ಎಲ್ಲಾ ವರ್ಗದವರಿಗೂ ಈ ಎಕ್ಸ್ ಪ್ರೆಸ್ ರೈಲು ಲಭ್ಯವಾಯಿತು.

 ಸೂಪರ್ ಫಾಸ್ಟ್ ದರ್ಜೆ ಪಡೆದುಕೊಂಡಿರುವ ಈ ಟ್ರೈನ್

ಸೂಪರ್ ಫಾಸ್ಟ್ ದರ್ಜೆ ಪಡೆದುಕೊಂಡಿರುವ ಈ ಟ್ರೈನ್

ಈಗ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಂದ ಫಿರೋಜ್ ಪುರ್ ಕಂಟೋನ್ಮೆಂಟ್ ತನಕ 34 ಗಂಟೆ 15 ನಿಮಿಷಗಳ ಅವಧಿಯಲ್ಲಿ 1,930 ಕಿ.ಮೀ ಕ್ರಮಿಸುತ್ತಿದೆ. ಸೂಪರ್ ಫಾಸ್ಟ್ ದರ್ಜೆ ಪಡೆದುಕೊಂಡಿರುವ ಈ ಟ್ರೈನ್ 56/54 ನಿಲ್ದಾಣಗಳನ್ನು ಕ್ರಮಿಸಲಿದ್ದು, ಪ್ರತಿದಿನ ಸಂಚಾರವಿರುವುದು ವಿಶೇಷ. ಸುಮಾರು 55 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ಸಂಚರಿಸುತ್ತದೆ.

ಅತ್ಯಂತ ವೇಗದ ಎಕ್ಸ್ ಪ್ರೆಸ್ ರೈಲು

ಅತ್ಯಂತ ವೇಗದ ಎಕ್ಸ್ ಪ್ರೆಸ್ ರೈಲು

1930ರ ಆಸುಪಾಸಿನಲ್ಲಿ ತೃತೀಯ ದರ್ಜೆ ಬೋಗಿಗಳು ಕಾಣಿಸಿಕೊಂಡವು, 1945ರಲ್ಲಿ ಹವಾ ನಿಯಂತ್ರಿತ ಬೋಗಿ ಸೇರ್ಪಡೆಯಾಯಿತು. ಬ್ರಿಟಿಷ್ ಇಂಡಿಯಾ ಕಾಲದಲ್ಲಿ ಅತ್ಯಂತ ವೇಗದ ಎಕ್ಸ್ ಪ್ರೆಸ್ ರೈಲು ಎಂಬ ಹೆಗ್ಗಳಿಕೆ ಪಡೆದುಕೊಂಡಿತ್ತು. ಈಗ ಎಸಿ ಫಸ್ಟ್ ಕ್ಲಾಸ್, 2 ಟಯರ್, 3 ಟಯರ್ ಸ್ಲೀಪಿಂಗ್ ಕ್ಲಾಸ್, ಸಾಮಾನ್ಯ ಬೋಗಿ, ಮಿಲಿಟರಿಗೆ ಮೀಸಲಾದ ಬೋಗಿಗಳನ್ನು ಹೊಂದಿದೆ.

English summary
The Punjab Mail, one of the oldest long-distance trains in the country, completed 107 years on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X