ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಟಲಿ ಟು ಪಂಜಾಬ್: ಕೊರೊನಾ ಹೊತ್ತು ತಂದವನ ಕಥೆ

|
Google Oneindia Kannada News

ಅಮೃತಸರ್, ಮಾರ್ಚ್ 9: ಪಂಜಾಬ್‌ನಲ್ಲಿ ಮೊದಲ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿದೆ. ಇತ್ತೀಚಿಗಷ್ಟೆ ಇಟಲಿಗೆ ಹೋಗಿ ಬಂದಿದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.

Recommended Video

Karnataka Government Declared Holiday For primary (5th standard) Students | School Holiday

ಇಟಲಿಯಿಂದ ಅಮೃತಸರ್ ಏರ್ಪೋರ್ಟ್‌ಗೆ ಬಂದಿಳಿದಿದ್ದ ವ್ಯಕ್ತಿಗೆ ಕೊರೊನಾ ಪರೀಕ್ಷೆಗೆ ಒಳಪಡಿಸಿದ ವೇಳೆ ಸೋಂಕು ತಗುಲಿರುವುದು ಕಂಡುಬಂದಿದೆ. ನಂತರ ಆತನ ಮೇಲೆ ತೀವ್ರ ನಿಗಾವಹಿಸಲಾಗಿತ್ತು. ಇದೀಗ, ಆ ವ್ಯಕ್ತಿಗೆ ಕೊರೊನಾ ದಾಳಿಯಾಗಿರುವ ಬಗ್ಗೆ ಪಂಜಾಬ್ ಸರ್ಕಾರ ಖಚಿತ ಪಡಿಸಿದೆ.

Breaking: ಕರ್ನಾಟಕದಲ್ಲಿ ಮೊದಲ ಕೊರೊನಾವೈರಸ್ ಕೇಸ್ ಪತ್ತೆBreaking: ಕರ್ನಾಟಕದಲ್ಲಿ ಮೊದಲ ಕೊರೊನಾವೈರಸ್ ಕೇಸ್ ಪತ್ತೆ

'ಮಾರ್ಚ್ 4 ರಂದು ಅಮೃತಸರ್ ವಿಮಾನನಿಲ್ದಾಣಕ್ಕೆ ಇಬ್ಬರು ಕುಟುಂಬ ಸದಸ್ಯರ ಜೊತೆ ಆ ವ್ಯಕ್ತಿ ಬಂದಿದ್ದರು. ಇಟಲಿಯಲ್ಲಿ ಕೊರೊನಾ ಅಟ್ಯಾಕ್ ಆಗಿದೆ' ಎಂದು ಪಂಜಾಬ್ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನುರಾಗ್ ಅಗರ್ವಾಲ್ ತಿಳಿಸಿದ್ದಾರೆ.

Punjab Confirms First Positive Case Of Coronavirus

ಹೋಶಿಯಾರ್ಪುರ್ ಮೂಲದ ವ್ಯಕ್ತಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ಕಳೆದವಾರವೇ ಶಂಕೆ ವ್ಯಕ್ತವಾಗಿತ್ತು. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಪುಣೆಗೆ ಸ್ಯಾಂಪಲ್ ಕಳುಹಿಸಿಕೊಡಲಾಗಿತ್ತು. ಸೋಮವಾರ ಆ ವ್ಯಕ್ತಿಗೆ ಕೊರೊನಾ ಇದೆ ಎಂದು ಖಚಿತಪಡಿಸಿದ್ದಾರೆ. ಸದ್ಯಕ್ಕೆ ಆತ ಸಹಜ ಸ್ಥಿತಿಯಲ್ಲಿದ್ದಾನೆ.

ಈ ಕಡೆ ಕರ್ನಾಟಕದಲ್ಲೂ ಮೊದಲ ಕೊರೊನಾ ಕೇಸ್ ಬೆಳಕಿಗೆ ಬಂದಿದೆ. ಅಮೆರಿಕಾದಿಂದ ಬೆಂಗಳೂರಿಗೆ ಆಗಮಿಸಿದ ಟೆಕ್ಕಿಗೆ ಕೊರೊನಾ ಸೋಂಕು ಅಟ್ಯಾಕ್ ಆಗಿದೆ ಎಂದು ವೈದ್ಯಕೀಯ ಸಚಿವ ಡಾ ಸುಧಾಕರ್ ಅಧಿಕೃತವಾಗಿ ಖಚಿತಪಡಿಸಿದ್ದರು.

English summary
Punjab confirms first positive case of coronavirus. The man who tested positive in Punjab had recently travelled to Italy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X