ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಟುಂಬದಲ್ಲಿದ್ದಿದ್ದು 9 ಜನ, ಸಿಕ್ಕ ಮತ 5! ಆದ್ರೆ ಆ ಸುದ್ದಿ ಸುಳ್ಳು!

|
Google Oneindia Kannada News

ಜಲಂಧರ್, ಮೇ 24: ಪಂಜಾಬಿನ ಜಲಂಧರ್ ನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನೀತು ಶಟ್ಟರ್ನ್ ವಾಲಾ ಅವರು ಕೇವಲ 5 ಮತಗಳನ್ನು ಪಡೆಯುವ ಮೂಲಕ ಅತೀ ಕಡಿಮೆ ಮತ ಪಡೆದ ದಾಖಲೆ ಬರೆದಿದ್ದಾರೆ!

ಈ ಬಗ್ಗೆ ಅವರನ್ನು ಮಾಧ್ಯಮಗಳು ಪ್ರಶ್ಸನಿಸುತ್ತಿದ್ದಂತೆಯೇ ಅಳುವುದಕ್ಕೆ ಆರಂಭಿಸಿದ ವಾಲಾ, "ನನಗೆ ಅತೀ ಕಡಿಮೆ ಮತ ಬಂದಿದೆ ಎಂಬುದಕ್ಕಿಂತ, ನನ್ನ ಕುಟುಂಬದಲ್ಲಿ 9 ಜನರಿದ್ದರೂ, ನನಗೆ ಕೇವಲ ಐದೇ ಮತ ಬಿದ್ದಿದೆಯಲ್ಲ ಎಂಬುದೇ ನೋವಿನ ಸಂಗತಿ ಎನ್ನಿಸಿದೆ" ಎಂದರು.

ಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರುಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರು

"ನನ್ನ ಕುಟುಂಬಸ್ಥರೇ ಎಲ್ಲರೂ ನನಗೆ ಮತಹಾಕಲಿಲ್ಲವಲ್ಲ ಎಂಬುದೇ ನನಗೆ ಬೇಸರ. ಮಾತ್ರವಲ್ಲ ಇವಿಎಂ ನಲ್ಲಿ ದೋಷವಿರಬಹುದು ಎಂಬುದು ನನ್ನ ಅನುಮಾನ" ಎಂದು ಅವರು ದೂರಿದ್ದಾರೆ!

"ನಿಮ್ಮ್ ಕುಟುಂಬದವರೇ ನಿಮಗೆ ಬೆಂಬಲ ನೀಡಿ ಮತಹಾಕದ ಮೇಲೆ ಹೊರಗಿನವರು ನಿಮಗೆ ಮತಹಾಕಬೇಕು ಎಂದು ಏಕೆ ಬಯಸುತ್ತೀರಿ?" ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ವಾಲಾ ಅವಾಕ್ಕಾಗಿದ್ದಾರೆ!

ಗುರುವಾರ ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ -08, ಬಿಜೆಪಿ-ಅಕಾಲಿದಳ- 04, ಎಎಪಿ- 01 ಕ್ಷೇತ್ರಗಳಲ್ಲಿ ಜಯಗಳಿಸಿವೆ.

ಎಎಪಿ ಅಭ್ಯರ್ಥಿ ಎಂಬುದೂ ಸುಳ್ಳು!

ವಾಲಾ ಅವರನ್ನು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಎಂದು ಒಬ್ಬರು ಟ್ವೀಟ್ ಮಾಡಿದ್ದು, ಈ ಸುದ್ದಿ ಸುಳ್ಳು. ಆತ ಪಕ್ಷೇತರ ಅಭ್ಯರ್ಥಿಯಾಗಿದ್ದು, ಎಎಪಿಯಿಂದ ಈ ಕ್ಷೇತ್ರದಲ್ಲಿ ಜಸ್ಟಿಸ್(ನಿ.) ಜೊತಾ ಸಿಂಗ್ ಎಂಬುವವರು ಸ್ಪರ್ಹದಿಸಿ 7984 ಮತಗಳನ್ನು ಪಡೆದಿದ್ದರು.

ಕಾಂಗ್ರೆಸ್ ಗೆ ಕೆಟ್ಟದಿನವಾದರೆ ಇವರಿಗೆ?

ನೀವು ಫಲಿತಾಂಶದ ದಿನವನ್ನು ಕಾಂಗ್ರೆಸ್ ಗೆ ಕೆಟ್ಟದಿನ ಎನ್ನುವುದಾದರೆ ಐದೇ ಮತಗಳನ್ನು ಪಡೆದ ಇವರ ಬಗ್ಗೆ ಏನೆನ್ನುತ್ತೀರಿ ಎಂದು ಒಬ್ಬರು ಪ್ರಶ್ನಿಸಿದ್ದಾರೆ.

ಎಲ್ಲೆಡೆ ತಪ್ಪು ಮಾಹಿತಿ

ಇವರು ಪಡೆದ ಮತಗಳ ಬಗ್ಗೆ ಎಲ್ಲೆಡೆಯೂ ತಪ್ಪು ಮಾಹಿತಿ ನೀಡಲಾಗಿದ್ದು, ಕೆಲವು ಪತ್ರಿಕೆಗಳಲ್ಲೂ ಹಾಗೆಯೇ ಬರೆಯಲಾಗಿದೆ.

ಅಭ್ಯರ್ಥಿಯೂ ಅತ್ತಿದ್ದೇಕೆ?

ಅಭ್ಯರ್ಥಿಯೂ ಅತ್ತಿದ್ದೇಕೆ?

ಮತ ಎಣಿಕೆ ಕೇಂದ್ರದ ಬಳಿ ಬಂದಿದ್ದ ಅಭ್ಯರ್ಥಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಿರಬೇಕು. ಆದ್ದರಿಂದಲೇ ಅವರು ಚಾನೆಲ್ ಗಳಿಗೂ ಹಾಗೆಯೇ ಹೇಳಿಕೆ ನೀಡಿದ್ದಾರೆ. ಅಥವಾ ಮತ ಎಣಿಕೆ ಪ್ರಕ್ರಿಯೆ ಮುಗಿಯುವ ಮುನ್ನವೇ ಅವರು ಈ ಪ್ರತಿಕ್ರಿಯೆ ನೀಡಿದ್ದರಿಂದ ಅವರಿಗೆ ಸಿಕ್ಕ ಒಟ್ಟು ಮತಗಳು ಎಷ್ಟು ಎಂಬುದು ಅವರಿಗೆ ತಿಳಿದಿರಲಿಲ್ಲ ಎನ್ನಿಸುತ್ತದೆ.

English summary
Neetu Shuttern Wala, who stood as an independent candidate from Jalandhar, Punjab in Lok Sabha elections 2019, said he received only 5 votes despite having 9 members in his own family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X