ಪಂಜಾಬ್‌ನಲ್ಲಿಯೂ ವಿಸ್ತರಣೆ ಆಯ್ತು ಲಾಕ್‌ಡೌನ್

ಚಂಡೀಗಡ, ಏಪ್ರಿಲ್ 10: ಕೇಂದ್ರ ಸರ್ಕಾರ ಲಾಕ್‌ಡೌನ್ ಮುಂದುವರೆಸುತ್ತದೆಯೇ ಎನ್ನುವ ಪ್ರಶ್ನೆ ಒಂದು ಕಡೆ ಇದ್ದರೆ, ಮತ್ತೊಂದು ಕಡೆ ಕೆಲವು ರಾಜ್ಯಗಳು ತಾವೇ ಲಾಕ್‌ ವಿಸ್ತರಣೆ ಮಾಡುತ್ತಿವೆ.

Recommended Video

      Oneindia Kannada Impact ಜನನಾಯಕರು ಸ್ಪಂದಿಸಲಿಲ್ಲ ಆದ್ರೆ ನಮ್ಮ ಜನ ಕೈಬಿಡಲಿಲ್ಲ..!

      ಒಡಿಶಾದ ನಂತರ ಪಂಜಾಬ್‌ನಲ್ಲಿಯೂ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. ಮೇ 1 ರವರೆಗೆ ಲಾಕ್‌ಡೌನ್ ಮುಂದುವರೆಸಲಾಗುವುದು ಎಂದು ಅಲ್ಲಿನ ಸರ್ಕಾರ ನಿರ್ಧಾರ ಮಾಡಿದೆ. ಕ್ಯಾಬಿನೆಟ್ ಸಭೆ ನಡೆಸಿದ ಬಳಿಕ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

      ರಾಜ್ಯದಲ್ಲಿ ಕೊರೊನಾ ವೈರಸ್ ಸಮುದಾಯಿಕವಾಗಿ ಹರಡುವ ಆತಂಕ ಇದ್ದು, ಲಾಕ್‌ಡೌನ್ ಮುಂದುವರೆಸುತ್ತಿರುವುದಕ್ಕೆ ಪ್ರಮುಖ ಕಾರಣ ಆಗಿದೆಯಂತೆ. ನಾಳೆ ತಮ್ಮ ಈ ನಿರ್ಧಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ತಿಳಿಸಲಿದ್ದಾರಂತೆ.

      Covid-19 lockdown extended till May 1st in Punjab

      ಈವರೆಗೆ ಪಂಜಾಬ್‌ನಲ್ಲಿ 132 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢವಾಗಿವೆ. 11 ಜನರು ಕೊರೊನಾದಿಂದ ಮರಣ ಹೊಂದಿದ್ದಾರೆ.

      ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಸಹ ಲಾಕ್‌ಡೌನ್ ಮುಂದುವರೆಸಬೇಕು ಎಂದು ಪ್ರಧಾನಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+