ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸಲಹೆಗಾರ ಮಾಲಿ ರಾಜೀನಾಮೆ
ಅಮೃತಸರ, ಆಗಸ್ಟ್ 27: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಸಲಹೆಗಾರ ಮಾಲ್ವಿಂದರ್ ಸಿಂಗ್ ಮಾಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಜಮ್ಮು ಕಾಶ್ಮೀರ ಮತ್ತು ಪಾಕಿಸ್ತಾನದಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಇತ್ತೀಚಿಗೆ ಕೆಟ್ಟದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ತಮ್ಮ ಇಬ್ಬರು ಸಲಹೆಗಾರರನ್ನು ಹದ್ದುಬಸ್ತಿನಲ್ಲಿಡುವಂತೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ನವಜೋತ್ ಸಿಂಗ್ ಸಿಧುಗೆ ಸಲಹೆ ನೀಡಿದ್ದರು. ಇವರಿಬ್ಬರನ್ನು ಸಲಹೆಗಾರರನ್ನು ತೆಗೆದುಹಾಕುವಂತೆ ಪಂಜಾಬ್ ಎಐಸಿಸಿ ಉಸ್ತುವಾರಿ ಹರೀಶ್ ರಾವತ್ ಕೂಡಾ ಒತ್ತಾಯಿಸಿದ್ದರು.
ಯಾವುದೇ ಹುದ್ದೆ ಪಡೆಯುವುದಾಗಲೀ ಅಥವಾ ಯಾವುದೇ ಹುದ್ದೆಗೆ ರಾಜೀನಾಮೆ ನೀಡುವ ಪ್ರಶ್ನೆ ಉದ್ಬವಿಸುವುದಿಲ್ಲ ಎಂದು ಅವರು ಫೇಸ್ ಬುಕ್‌ನಲ್ಲಿ ಫೋಸ್ಟ್ ಮಾಡಿದ್ದಾರೆ.

ಮತ್ತೊಬ್ಬ ಸಲಹೆಗಾರ ಗಾರ್ಗ್, ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಪಾಕಿಸ್ತಾನ ಕುರಿತು ಟೀಕಿಸುವುದನ್ನು ಪ್ರಶ್ನಿಸಿದ್ದರು. ಇಂತಹ ಕೆಟ್ಟ ಹೇಳಿಕೆಗಳು ರಾಜ್ಯ ಹಾಗೂ ದೇಶದ ಶಾಂತಿ ಮತ್ತು ಭದ್ರತೆಗೆ ಅಪಾಯಕಾರಿ ಎಂದು ಕ್ಯಾಪ್ಟನ್ ಅಮರೀಂದರ್ ಸಿಂಗ್ ಎಚ್ಚರಿಕೆ ನೀಡಿದ್ದರು.
ರಾಜಕೀಯ ವಿಶ್ಲೇಷಕ ಮಾಲಿ ಮತ್ತು ಬಾಬಾ ಫರೀದ್ ಆರೋಗ್ಯ ವಿಜ್ಞಾನ ವಿವಿ ಮಾಜಿ ರಿಜಿಸ್ಟ್ರರ್ ಪ್ಯಾರೆ ಲಾಲ್ ಗಾರ್ಗ್ ಅವರನ್ನು ಸಲಹೆಗಾರರಾಗಿ ಆಗಸ್ಟ್ 11 ರಂದು ಸಿಧು ನೇಮಕ ಮಾಡಿಕೊಂಡಿದ್ದರು.
ಇತ್ತೀಚಿಗೆ ಫೇಸ್ ಬುಕ್ ನಲ್ಲಿ ಫೋಸ್ಟ್ ವೊಂದನ್ನು ಹಾಕಿದ್ದ ಮಾಲಿ, ಕಾಶ್ಮೀರ ಭಾರತದ ಭಾಗವಾದರೆ ಸಂವಿಧಾನದ 370 ಮತ್ತು 35 ಎ ಅಗತ್ಯವೇನಿತ್ತು ಎಂದು ಹೇಳಿದ ಬಗ್ಗೆ ವರದಿಯಾಗಿತ್ತು. ಅಲ್ಲದೇ ಕಾಶ್ಮೀರ ಕಾಶ್ಮೀರಿ ಜನರ ದೇಶ ಎಂದಿದ್ದರು.
ಮಲ್ವಿಂದರ್ ಸಿಂಗ್ ಪ್ರತ್ಯೇಕ ದೇಶವಾಗಿದ್ದು, ಕಾಶ್ಮೀರಿಗರಿಗೆ ಮಾತ್ರ ಸೇರಿದ್ದಾಗಿದೆ ಎಂದು ಹೇಳಿದ್ದರು. ಪಾಕಿಸ್ತಾದಂತೆ ಭಾರತ ಕೂಡ ಅಕ್ರಮವಾಗಿ ಕಾಶ್ಮೀರವನ್ನು ಆಕ್ರಮಿಸಿಕೊಂಡಿದೆ ಎಂದು ಹೇಳಿದ್ದರು. ಇದು ಭಾರತದ ಹುತಾತ್ಮ ಯೋಧರಿಗೆ ಮಾಡಿರುವ ಅವಮಾನ ಎಂದು ನಿಮಗೆ ಅನಿಸುವುದಿಲ್ಲವೇ? ಎಂದು ರಾಹುಲ್ ಗಾಂಧಿ ಅವರಿಗೆ ವಿಕ್ರಂ ಪ್ರಶ್ನಿಸಿದ್ದರು.
ಒಂದುವೇಳೆ ಮಲ್ವಿಂದರ್ ಸಿಂಗ್ ಹೇಳಿದ್ದರಲ್ಲಿ ಯಾವ ತಪ್ಪೂ ಇಲ್ಲ ಎಂದು ರಾಹುಲ್ ಗಾಂಧಿ ಸಮರ್ಥನೆ ಮಾಡಿಕೊಂಡರೆ ಅವರ ನಿಜವಾದ ಮುಖ ಬಯಲಾದಂತಾಗುತ್ತದೆ. ಒಂದುವೇಳೆ ಅವರು ಹುತಾತ್ಮರ ಪ್ರಾಣತ್ಯಾಗಕ್ಕೆ ಬೆಲೆ ಕೊಡುವುದಾದರೆ ಕಾಂಗ್ರೆಸ್ನಿಂದ ಮಲ್ವಿಂದರ್ ಸಿಂಗ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲೇಬೇಕು. ಇದುವರೆಗೂ ಯಾವ ಕ್ರಮ ತೆಗೆದುಕೊಂಡಿದ್ದಾರೆ? ಇದು ಏನನ್ನು ಸೂಚಿಸುತ್ತದೆ? ಎಂದು ಬಿಕ್ರಂ ವಾದಿಸಿದ್ದರು.
ಕಳೆದ ವಾರ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದ ಮಲ್ವಿಂದರ್ ಸಿಂಗ್, ಕಾಶ್ಮೀರ ಯಾವುದೇ ದೇಶಕ್ಕೂ ಸೇರಿದ್ದಲ್ಲ. ಅದೊಂದು ಪ್ರತ್ಯೇಕ ದೇಶ. ಭಾರತ ಹಾಗೂ ಪಾಕಿಸ್ತಾನಗಳೆರಡೂ ಅಕ್ರಮವಾಗಿ ಕಾಶ್ಮೀರದ ಭಾಗವನ್ನು ಆಕ್ರಮಿಸಿಕೊಂಡಿವೆ. ಕಾಶ್ಮೀರ ಕೇವಲ ಅಲ್ಲಿ ವಾಸಿಸುತ್ತಿರುವ ಕಾಶ್ಮೀರಿಗರಿಗೆ ಸೇರಿದ ದೇಶವಾಗಿದೆ. ಅದರ ಮೇಲೆ ಭಾರತಕ್ಕಾಗಲಿ, ಪಾಕಿಸ್ತಾನಕ್ಕಾಗಲಿ ಹಕ್ಕು ಇಲ್ಲ ಎಂದಿದ್ದರು.
ಅದರ ಬೆನ್ನಲ್ಲೇ ಮಲ್ವಿಂದರ್ ಸಿಂಗ್ ಅವರನ್ನು ವಜಾಗೊಳಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು. ಮಲ್ವಿಂದರ್ ಸಿಂಗ್ ಅವರ ಇತ್ತೀಚಿನ ಪೋಸ್ಟ್‌ಗಳಿಗೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದರು. ರಾಜ್ಯ ಮತ್ತು ದೇಶದ ಶಾಂತಿ ಮತ್ತು ಸ್ಥಿರತೆಗೆ ಅಪಾಯಕಾರಿಯಾದ ಭೀಕರ ಮತ್ತು ಕೆಟ್ಟ ರೀತಿಯ ಟೀಕೆಗಳನ್ನು ಬಳಸದಂತೆ ಎಚ್ಚರಿಕೆ ನೀಡಿದ್ದರು.
ಕಾಶ್ಮೀರ ಕುರಿತು ಸಿಧು ಆಪ್ತರು ಹಾಗೂ ಸಲಹೆಗಾರರಾದ ಪ್ಯಾರೆ ಲಾಲ್ ಗರ್ಗ್ ಮತ್ತು ಮಲ್ವಿಂದರ್ ಸಿಂಗ್ ಮಾಲಿ ಅವರು ''ಕಾಶ್ಮೀರವನ್ನು ಭಾರತ ಆಕ್ರಮಿಸಿಕೊಂಡಿದೆ,'' ಎಂದು ಹೇಳಿದ್ದು ಭಾರಿ ಟೀಕೆಗೆ ಗುರಿಯಾಗಿತ್ತು. ಅಮರೀಂದರ್ ಸಿಂಗ್ ಅವರು ಹೇಳಿಕೆಯನ್ನು ನೇರವಾಗಿಯೇ ಖಂಡಿಸಿದ್ದರು.












Click it and Unblock the Notifications