• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಶಾಖಪಟ್ಟಣಂ ಫ್ಯಾಕ್ಟರಿಯಲ್ಲಿ ಸೋರಿಕೆಯಾಗಿದ್ದು ಡೆಡ್ಲಿ ಸ್ಟಿರಿನ್ ಗ್ಯಾಸ್!

|

ವಿಶಾಖಪಟ್ಟಣಂ, ಮೇ 7: ಕೊರೊನಾ ಹಾವಳಿಯಿಂದ ದೇಶ ತತ್ತರಿಸಿರುವ ನಡುವೆಯೇ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ವಿಷಕಾರಿ ಅನಿಲ ಸೋರಿಕೆಯಿಂದ ಮತ್ತೊಂದು ಆಘಾತ ಎದುರಾಗಿದೆ.

ವಿಶಾಖಪಟ್ಟಣಂ ಹೊರವಲಯದ ಆರ್ ಆರ್ ವೆಂಕಟಾಪುರಂ ಬಳಿಯ ಎಲ್‌ ಜಿ ಪಾಲಿಮರ್ಸ್ ಎಂಬ ದಕ್ಷಿಣ ಕೊರಿಯಾ ಮೂಲದ ಎಂಎನ್‌ಸಿ ಕಂಪೆನಿಯ ಕಾರ್ಖಾನೆಯಲ್ಲಿ ಮಹಾ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಇದುವರೆಗೆ 10 ಜನ ಮೃತಪಟ್ಟಿದ್ದು, 800 ಕ್ಕೂ ಹೆಚ್ಚು ಜನ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. 5000 ಜನಕ್ಕೆ ನೇರವಾಗಿ ವಿಷಾನಿಲ ತಟ್ಟಿದೆ.

ವಿಶಾಖಪಟ್ಟಣಂ ಮಹಾ ಅನಿಲ ದುರಂತಕ್ಕೆ ಕಾರಣ ಏನು?

ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಆಗಮಿಸಿದ್ದು, ಬಿರುಸಿನ ಕಾರ್ಯಾಚರಣೆ ನಡೆಸಿದೆ. ಅನಿಲ ಸೋರಿಕೆಯ ಸುಮಾರು ಎಂಟು ಕಿಲೋ ಮೀಟರ್ ವಿಸ್ತಾರವನ್ನು ಸೀಲ್‌ಡೌನ್ ಮಾಡಲಾಗುತ್ತಿದೆ. ಇಡೀ ದೇಶವನ್ನು ಬೆಚ್ಚಿ ಬೀಳಿಸಿರುವ ಎಲ್‌ಜಿ ಪಾಲಿಮರ್ಸ್‌ ಘಟಕದ ವಿಷಾನಿಲವಾದ ಸ್ಟಿರಿನ್ (Styrene) ಗ್ಯಾಸ್ ಮಹಾ ವಿಷಕಾರಿ ಅನಿಲವಾಗಿದೆ. ಈ ಅನಿಲದ ಬಗ್ಗೆ ಹೆಚ್ಚಿನ ಮಾಹಿತಿ... ಮುಂದೆ ಓದಿ...

ಪ್ಲಾಸ್ಟಿಕ್, ಪೈಬರ್ ತಯಾರಿಕೆಯಲ್ಲಿ

ಪ್ಲಾಸ್ಟಿಕ್, ಪೈಬರ್ ತಯಾರಿಕೆಯಲ್ಲಿ

Styrene ಗ್ಯಾಸ್‌ನ ವೈಜ್ಞಾನಿಕ ಹೆಸರು ethenylbenzene, vinylbenzene, and phenylethene (C6H5CH=CH2). ಪ್ಲಾಸ್ಟಿಕ್ ಮತ್ತು ರಬ್ಬರ್ ತಯಾರಿಸಲು ಸ್ಟಿರಿನ್ ಅನಿಲವನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ವಿದ್ಯುತ್ ವೈರಿಂಗ್ ವಸ್ತುಗಳು ತಯಾರಿಕೆ ಬಳಸುತ್ತಾರೆ. ಫೈಬರ್ಗ್ಲಾಸ್, ಪ್ಲಾಸ್ಟಿಕ್ ಕೊಳವೆಗಳು, ವಾಹನ ಭಾಗಗಳು, ಪ್ಲಾಸ್ಟಿಕ್​ ಕುಡಿಯುವ ನೀರಿನ ಕಪ್​ಗಳ ತಯಾರಿಕೆಗೆ ಸ್ಟೈರಿನ್​ ಬಳಸುತ್ತಾರೆ.

Styrene ಬಣ್ಣರಹಿತವಾದ ಅನಿಲವಾಗಿದೆ

Styrene ಬಣ್ಣರಹಿತವಾದ ಅನಿಲವಾಗಿದೆ

C6H5C-CH2 ಎಂಬ ರಾಸಾಯನಿಕ ಸೂತ್ರದಿಂದ ಬೆಂಜೀನ್‌ನ ಉತ್ಪನ್ನವಾಗುತ್ತದೆ. ಇದು ಬಣ್ಣರಹಿತವಾದ ಅನಿಲವಾಗಿದೆ, ತ್ವರಿತ ಆವಿಯಾಗುವಿಕೆಯ ಗುಣವನ್ನು ಹೊಂದಿದೆ. ಇದು ಎಣ್ಣೆಯುಕ್ತ ಸ್ವರೂಪದಲ್ಲಿದೆ ಮತ್ತು ಕೆಲವೊಮ್ಮೆ ಹಳದಿ ಬಣ್ಣದಲ್ಲಿ ಕಾಣಿಸಿಕೊಳ್ಳಬಹುದು.

ಸ್ಟೈರೀನ್​ ಅನಿಲವು ಸಿಹಿ ವಾಸನೆಯನ್ನು ಉಂಟುಮಾಡುತ್ತದೆ. ದೊಡ್ಡ ಪ್ರಮಾಣದಲ್ಲಿ ಸ್ಟೋಟಗೊಂಡರೆ ಆಹ್ಲಾದಕರ ವಾಸನೆಯನ್ನು ಉಂಟುಮಾಡುತ್ತದೆ. ಜಠರಗರುಳಿನ ಪ್ರದೇಶ, ಮೂತ್ರಪಿಂಡ ಮತ್ತು ಉಸಿರಾಟದ ವ್ಯವಸ್ಥೆಗೆ ಶಂಕಿತ ವಿಷ ಮನುಷ್ಯನ ಮೇಲೆ ಬೇಗ ಆವರಿಸುತ್ತದೆ

ಚರ್ಮದ ಮೇಲೆ ದದ್ದುಗಳು, ವಾಂತಿ, ದೇಹದೊಳಗೆ ಸುಡುವ ಸಂವೇದನೆ ಉಂಟಾಗುತ್ತದೆ.

Styrene ಅನಿಲದಿಂದಾಗುವ ಪರಿಣಾಮಗಳು

Styrene ಅನಿಲದಿಂದಾಗುವ ಪರಿಣಾಮಗಳು

ಇದು ಗಾಳಿಯಲ್ಲಿ ವೇಗವಾಗಿ ಹರಡುತ್ತದೆ. ಜೀವಿಗಳಿಗೆ ಅತ್ಯಂತ ಮಾರಕವಾದ ಅನಿಲವಾಗಿದೆ.

ಇದರ ಸಂಪರ್ಕಕ್ಕೆ ಬಂದ ಮನುಷ್ಯ, ಪ್ರಾಣಿ, ಪಕ್ಷಿಗಳು, ಹಲ್ಲಿ, ಹುತ್ತದಲ್ಲಿರುವ ಹಾವುಗಳು ಸಾಯುತ್ತವೆ. ಮನುಷ್ಯನ ಮೇಲೆ ಅತ್ಯಂತ ಕೆಟ್ಟ ಪರಿಣಾಮವನ್ನೇ ಬೀರುತ್ತದೆ. ಜಠರ, ಶಾಸಕೋಶದ ತೊಂದರೆ, ಉಸಿರಾಟದ ತೊಂದರೆ ಪರಿಣಾಮ ಬೀರುತ್ತೆ. ಕೇಂದ್ರ ನರಮಂಡಲದ ಮೇಲೆ ಅತ್ಯಂತ ವೇಗವಾಗಿ ಸ್ಟೈರೀನ್​ ಅನಿಲ ಪರಿಣಾಮ ಬೀರುತ್ತದೆ

ಬಹುದಿನಗಳವರೆಗೆ ಕಾಡುವ ಅನಿಲ Styrene

ಬಹುದಿನಗಳವರೆಗೆ ಕಾಡುವ ಅನಿಲ Styrene

Styrene ಅನಿಲ ಸೋರಿಕೆ ನಿಂತ ನಂತರವು ದೀರ್ಘಕಾಲದ ವರೆಗೆ ಮನುಷ್ಯನ ಮೇಲೆ ಪರಿಣಾಮ ಬೀರುತ್ತದೆ ತಲೆನೋವು, ಆಯಾಸ, ದೌರ್ಬಲ್ಯ, ಖಿನ್ನತೆ, ಏಕಾಗ್ರತೆ ಸಮಸ್ಯೆ, ಕಿವಿಗಳ ಪೊರೆಗೆ ಹಾನಿ, ಮೂಗಿನ ಒಳಪದರದಲ್ಲಿ ಹಾನಿ, ಕರುಳಿನ ಸಮಸ್ಯೆ ಮನುಷ್ಯನ ಮೇಲೆ ಉಂಟಾಗುತ್ತದೆ.

ಮಕ್ಕಳ ಮೇಲೆ ಪರಿಣಾಮ ಹೆಚ್ಚು

ಮಕ್ಕಳ ಮೇಲೆ ಪರಿಣಾಮ ಹೆಚ್ಚು

Styrene ಅನಿಲದಿಂದ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಮಕ್ಕಳ ಶ್ವಾಶಕೋಷಕ್ಕೆ ಹೆಚ್ಚಿನ ಹಾನಿಯಾಗುತ್ತದೆ ಉಸಿರಾಟದ ತೊಂದರೆ, ಕರುಳಿನ ಸಮಸ್ಯೆ ದೀರ್ಘವಾಗಿ ಕಾಡುತ್ತದೆ. ಮುಂದೆ ಮಕ್ಕಳಲ್ಲಿ ಮತ್ತು ದೊಡ್ಡವರಲ್ಲಿ ವಿವಿಧ ರೀತಿಯ ಕ್ಯಾನ್ಸರ್​ ಹೆಚ್ಚಾಗಲು ಸ್ಟೀರಿನ್​ ಕಾರಣವಾಗುತ್ತದೆ.

ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆಗಳು

ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆಗಳು

ಚರ್ಮ ಮತ್ತು ಕಣ್ಣುಗಳನ್ನು ಸಾಕಷ್ಟು ನೀರಿನಿಂದ ಚನ್ನಾಗಿ ತಿಕ್ಕಿ ತೊಳೆಯುವುದು. ಬೇಗನೇ ತೀವ್ರ ನಿಗಾ ಘಟಕಕ್ಕೆ ರೋಗಿಗೆ ಚಿಕಿತ್ಸೆ ಕೊಡಿಸಬೇಕು ಮುಖಗವಸುಗಳನ್ನು ಖಡ್ಡಾಯವಾಗಿ ಬಳಸಬೇಕು. ನೀರನ್ನು ಹೆಚ್ಚು ಸಿಂಪಡಿಸಿದರೆ ಅನಿಲ ಬೇಗನೆ ತಣ್ಣಗಾಗುತ್ತದೆ. ಅನಿಲ ಸೋರಿಕೆ ವೇಳೆ ಮಳೆ ಬಂದರೂ ಸ್ಟಿರೀನ್​ ಅನಿಲ ಪರಸಿಸುವ ಪ್ರಮಾಣ ಕಡಿಮೆಯಾಗತ್ತದೆ.

English summary
Visakhapatnam Gas Tragedy: Deadly Styrene Gas Is Very Poisoning For Lives. here the What is Styrene gas and Styrene gas details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X