ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿಯಲ್ಲಿ ದರ್ಶನ ಪುನಾರಂಭ, ದಿನಕ್ಕೆ 6 ಸಾವಿರ ಭಕ್ತರಿಗೆ ಅವಕಾಶ

|
Google Oneindia Kannada News

ತಿರುಪತಿ, ಜೂನ್ 11: ಕೊರೊನಾ ವೈರಸ್ ಭೀತಿಯಿಂದ ಮೂರು ತಿಂಗಳ ಲಾಕ್‌ಡೌನ್‌ ಬಳಿಕ ತಿರುಪತಿಯಲ್ಲಿ ಜನಸಾಮಾನ್ಯರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದು ಸೇರಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

Recommended Video

DK Shivakumar finally gets good news from BS Yediyurappa | Oneindia Kannada

ಇಂದಿನಿಂದ ಜನಸಾಮಾನ್ಯರಿಗೆ ದರ್ಶನ ನೀಡುವ ಹಿನ್ನೆಲೆ, ಕಳೆದ ಮೂರು ದಿನಗಳಿಂದ ತಾಲೀಮು ನಡೆಸಲಾಗಿತ್ತು. ಗುರುವಾರ ಬೆಳಿಗ್ಗೆಯಿಂದಲೇ ಭಕ್ತರ ತಿರುಪತಿ ಕಡೆ ಧಾವಿಸಿದ್ದು, ಭಕ್ತರು ತಮ್ಮ ಸರದಿಗಾಗಿ ಬೆಟ್ಟದ ಗುಡಿಯಲ್ಲಿ ಸಾಲುಗಟ್ಟಿ ನಿಂತಿರುವುದು ಗಮನ ಸೆಳೆಯಿತು.

ಜೂನ್ 8 ರಿಂದ ತಿರುಪತಿ ತಿಮ್ಮಪ್ಪನ ದರ್ಶನ: ಭಕ್ತಾದಿಗಳು ಪಾಲಿಸಬೇಕಾದ ನಿಯಮಗಳಿವುಜೂನ್ 8 ರಿಂದ ತಿರುಪತಿ ತಿಮ್ಮಪ್ಪನ ದರ್ಶನ: ಭಕ್ತಾದಿಗಳು ಪಾಲಿಸಬೇಕಾದ ನಿಯಮಗಳಿವು

ಅಂದ್ಹಾಗೆ, ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪ್ರಕಾರ, ಜೂನ್ 8 ರಂದು ದೇವಾಲಯ ತೆರೆಯಲಾಗಿತು. ಆದರೆ, ಮೊದಲ ಎರಡು ದಿನಗಳಲ್ಲಿ ಟಿಟಿಡಿ ಪದಾಧಿಕಾರಿಗಳು, ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ಮತ್ತು ಮೂರನೇ ದಿನ ಸ್ಥಳೀಯ ಭಕ್ತರಿಗೆ ಮಾತ್ರ ಅನುಮತಿ ನೀಡಲಾಗಿತ್ತು.

 Tirumala temple reopened doors for common devotees on Thursday

ಪ್ರಾಯೋಗಿಕ ತಾಲೀಮು ವೇಳೆ ಲೋಪದೋಷಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸಿಕೊಂಡು, ಟಿಟಿಡಿ ಸಾಮಾನ್ಯ ಭಕ್ತರಿಗೆ ಅವಕಾಶ ಮಾಡಿಕೊಟ್ಟಿದೆ.

ಟಿಟಿಡಿ ಆಡಳಿತ ಮಂಡಳಿ ನಿರ್ಧಾರದಂತೆ ಪ್ರತಿದಿನ 6,000 ಭಕ್ತರಿಗೆ ಮಾತ್ರ ದರ್ಶನ ನೀಡಲಾಗುತ್ತಿದೆ. 3,000 ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗಿದ್ದು, ಉಳಿದ 3,000 ಟಿಕೆಟ್‌ಗಳನ್ನು ತಿರುಮಲದಲ್ಲಿರುವ ಕೌಂಟರ್‌ಗಳಲ್ಲಿ ನೀಡಲಾಗಿದೆ.

English summary
After 80 days due to the COVID-19 pandemic, the Lord Venkateswara temple at Tirumala reopened its doors for common devotees on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X