• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್

|

ಅಮರಾವತಿ, ಆಗಸ್ಟ್ 30: ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಅವರಿಗೆ ತೆಲಂಗಾಣದ ಪ್ರಥಮದರ್ಜೆ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನುರಹಿತ ಬಂಧನ ವಾರಂಟ್ ನೀಡಿದೆ.

ನಾಲ್ಕು ವರ್ಷಗಳ ಹಿಂದೆ ನಡೆದ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ವಾರಂಟ್ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಗೆ ಹಾಜರಾಗದೆ, ನೊಟಿಸ್ ಗೆ ಉತ್ತರವನ್ನೂ ನೀಡದ ಕಾರಣಕ್ಕೆ ಇದೀಗ ಅವರ ವಿರುದ್ಧ ಜಾಮೀನುರಹಿತ ಬಂಧನದ ವಾರೆಂಟ್ ಹೊರಡಿಸಲಾಗಿದೆ.

2014 ರ ತೆಲಂಗಾಣ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಇಲ್ಲಿನ ವ್ಯಾರಾ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡುವುದಾಗಿ ರಾಮ್ಜಿ ನಾಯ್ಕ್ ಎಂಬುವವರ ಬಳಿ 1.20 ಕೋಟಿ ರೂ.ಗಳನ್ನು ರೇಣುಕಾ ಚೌಧರಿ ತೆಗೆದುಕೊಂಡಿದ್ದರು ಎಂದು ರಾಮ್ಜೀ ಪತ್ನಿ ಭುಕ್ಯಾ ಚಂದ್ರಕಲಾ ಆರೋಪಿಸಿದ್ದರು.

ಆದರೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ದೊರೆಯದೆ ಇದ್ದರೂ, ಹಣವನ್ನು ರೇಣುಕಾ ಚೌಧರಿ ವಾಪಸ್ ನೀಡಿರಲಿಲ್ಲ ಎಂಬುದು ಆರೋಪ. ಟಿಕೆಟ್ ವಂಚಿತರಾದ ನಂತರ ಖಿನ್ನತೆ ಅನುಭವಿಸುತ್ತಿದ್ದ ರಾಮ್ಜೀ ನಾಯ್ಕ್ 2014ರ ಅಕ್ಟೋಬರ್ 14 ರಂದು ನಿಧನರಾಗಿದ್ದರು.

English summary
Telangana: Non-bailable warrant issued against Congress leader Renuka Chowdhury in connection with a 4-year-old cheating case registered in Khammam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X