ಮೋದಿಯವರು ಮನೆಗೆ ಹೋಗುವ ಸಮಯ ಬಂದಿದೆ: ಚಂದ್ರಬಾಬು ನಾಯ್ಡು
ಅಮರಾವತಿ, ಜನವರಿ 25: ಮುಂಬರುವ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಸೋಲು ನಿಶ್ಚಿತವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮನೆಗೆ ಹೋಗುವ ಸಮಯ ಬಂದಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದರು.
'ಸೇವ್ ಇಂಡಿಯಾ, ಸೇವ್ ಡೆಮಾಕ್ರಸಿ ಘೋಷಣೆ ಭಾರತದಾದ್ಯಂತ ಪ್ರತಿಧ್ವನಿಸುತ್ತಿದೆ. ಒಕ್ಕೂಟ ಭಾರತ Rallyಗಳು ದೇಶದೆಲ್ಲೆಡೆ ಸಂಚಲನ ಮೂಡಿಸುತ್ತಿದೆ. ಜನ ವಿರೋಧಿ ಆಡಳಿತವನ್ನು ದೇಶ ಸಹಿಸುವುದಿಲ್ಲ' ಎಂದರು.
ಭಾರತೀಯ ಜನತಾ ಪಕ್ಷವನ್ನು ವಿರೋಧಿಸುವುದು ರಾಜಕೀಯ ಅನಿವಾರ್ಯತೆಯಾಗಿದೆ. ಹಾಗೆಯೇ ಪ್ರಧಾನಿ ಮೋದಿ ಅವರನ್ನು ವಿರೋಧಿಸುವುದು ಪ್ರಜಾಪ್ರಭುತ್ವ ಅನಿವಾರ್ಯತೆಯಾಗಿದೆ ಎಂದು ಪಕ್ಷದ ಮುಖಂಡರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು ಹೇಳಿದರು.
ಇತ್ತೀಚಿನ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚಿದೆ ಎಂಬುದನ್ನು ಅವರು ಜ್ಞಾಪಿಸಿದರು.

ಸಮೀಕ್ಷೆಯಿಂದ ಸ್ಪಷ್ಟವಾಗಿದೆ
'ಮೋದಿ ಅವರ ವಿರುದ್ಧ ಜನಾಭಿಪ್ರಾಯವಿದೆ ಎಂಬುದನ್ನು ಸಮೀಕ್ಷೆಗಳು ಸ್ಪಷ್ಟಪಡಿಸುತ್ತಿವೆ. ಬಿಜೆಪಿ ಮತ್ತು ಅದರ ಕೈಗೊಂಬೆ ಪಕ್ಷಗಳಿಗೆ ಮುಂಬರುವ ಚುನಾವಣೆಯಲ್ಲಿ ಸೋಲು ಖಚಿತವಾಗಿದೆ ಎಂದು ಆಂಧ್ರಪ್ರದೇಶದಲ್ಲಿನ ವೈಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು ಪರೋಕ್ಷವಾಗಿ ಉಲ್ಲೇಖಿಸಿದರು.

ಆಂಧ್ರಪ್ರದೇಶಕ್ಕೆ ಅನ್ಯಾಯ: ಆರೋಪ
ಕೇಂದ್ರ ಸರ್ಕಾರವು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿ 1.16 ಲಕ್ಷ ಕೋಟಿ ಇನ್ನೂ ಕೊಡಬೇಕಿದೆ. ಆದರೆ, ಬಿಜೆಪಿ ನಮ್ಮ ರಾಜ್ಯವನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೆ ಎಂದರು. ಆದರೆ, ಅದರ ಬಗ್ಗೆ ಅವರು ವಿವರ ನೀಡಲಿಲ್ಲ. ರಾಜ್ಯಕ್ಕೆ ನ್ಯಾಯ ಒದಗಿಸಬೇಕೆಂದು ಇಡೀ ದೇಶ ಒತ್ತಾಯಿಸುತ್ತಿದೆ ಎಂದು ಹೇಳಿದರು.

ವೈಎಸ್‌ಆರ್ ಕಾಂಗ್ರೆಸ್ ಮೌನ
ಇತ್ತೀಚೆಗೆ ಕೋಲ್ಕತಾದಲ್ಲಿ ನಡೆದ rallyಯಲ್ಲಿ 22 ಪಕ್ಷಗಳು ಆಂಧ್ರಪ್ರದೇಶಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದವು. ಆದರೆ ವೈಎಸ್‌ಆರ್ ಕಾಂಗ್ರೆಸ್ ಈ ಬಗ್ಗೆ ಒಮ್ಮೆಯೂ ಕೇಂದ್ರವನ್ನು ಪ್ರಶ್ನಿಸಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಮತ್ತು ವೈಎಸ್‌ಆರ್‌ಸಿಗೆ ಚುನಾವಣೆಯಲ್ಲಿ ಜನರು ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಪವನ್ ಕಲ್ಯಾಣ್ ಜೊತೆ ಮೈತ್ರಿ?
ಆಂಧ್ರಪ್ರದೇಶದಲ್ಲಿ ಏಕಾಂಗಿಯಾಗಿಯೇ ಚುನಾವಣೆ ಎದುರಿಸಲು ಮುಂದಾಗಿರುವ ಟಿಡಿಪಿಗೆ ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್ ಕಾಂಗ್ರೆಸ್‌ಅನ್ನು ಮಣಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಚಂದ್ರಬಾಬು ನಾಯ್ಡು, ನಟ ಪವನ್ ಕಲ್ಯಾಣ್ ಅವರ ಪಕ್ಷದೊಂದಿಗೆ ಮೈತ್ರಿಗೆ ಮುಂದಾಗುವ ಸಾಧ್ಯತೆ ಇದೆ. ಈ ಬಗ್ಗೆ ಚಂದ್ರಬಾಬು ನಾಯ್ಡು ಕೆಲವು ದಿನಗಳ ಹಿಂದೆ ಸುಳಿವು ನೀಡಿದ್ದರು. ಪಕ್ಷದ ಮುಖಂಡ ಟಿ.ಜಿ. ವೆಂಕಟೇಶ್ ಅವರು ಮಾರ್ಚ್‌ನಲ್ಲಿ ಎರಡು ಪಕ್ಷಗಳ ನಡುವೆ ಮೈತ್ರಿ ಘೋಷಣೆಯಾಗಲಿದೆ ಎಂದು ತಿಳಿಸಿದ್ದಾರೆ.












Click it and Unblock the Notifications