ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿತ್ಲಿ ಚಂಡಮಾರುತದ ಭೀಕರತೆಗೆ ಸಾಕ್ಷಿಯಾಗುವ ಚಿತ್ರಗಳು!

|
Google Oneindia Kannada News

Recommended Video

ಒಡಿಶಾ ಹಾಗು ಆಂಧ್ರಪ್ರದೇಶಕ್ಕೆ ಅಪ್ಪಳಿಸಿದ ತಿತ್ಲಿ ಚಂಡಮಾರುತ | ಭಯಾನಕತೆಗೆ ಸಾಕ್ಷಿಯಾದ ಫೋಟೋಗಳು|Oneindia Kannada

ಅಮರಾವತಿ, ಅಕ್ಟೋಬರ್ 12: ಕಳೆದ 24 ಗಂಟೆಗಳಲ್ಲಿ 8 ಜನರನ್ನು ಬಲಿತೆಗೆದುಕೊಂಡ ತಿತ್ಲಿ ಚಂಡಮಾರುತ ಭೀಕರತೆಗೆ ಸಾಕ್ಷಿಯಾಗುವ ಕೆಲವು ಚಿತ್ರಗಳು ಇಲ್ಲಿವೆ.

ರಸ್ತೆ ತುಂಬ ಮುರಿದುಬಿದ್ದ ಮರಗಳು, ಭಯಾನಕವಾಗಿ ಬೀಸುವ ಗಾಳಿ, ಭೋರ್ಗರೆವ ಕಡಲು, ಮೀನುಗಾರರ ತಾಪತ್ರಯ, ಜನಸಾಮಾನ್ಯರಲ್ಲಿ ಮಡುಗಟ್ಟಿದ ಭಯ... ಇವು ಸದ್ಯಕ್ಕೆ ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳ ಚಿತ್ರಣ.

ಗಂಟೆಗೆ 120 ರಿಂದ 140 ಕಿಮೀ ವೇಗದಲ್ಲಿ ಚಂಡಮಾರುತ ಚಲಿಸಿತ್ತು. ಆದರೆ ಇಂದು ಅದರ ಆರ್ಭಟ ಕೊಂಚ ತಣ್ಣಗಾಗಿದೆ.

ಅತ್ಯುಗ್ರ ತಿತ್ಲಿ ಚಂಡಮಾರುತಕ್ಕೆ ಆಂಧ್ರದಲ್ಲಿ 8 ಮಂದಿ ಬಲಿ ಅತ್ಯುಗ್ರ ತಿತ್ಲಿ ಚಂಡಮಾರುತಕ್ಕೆ ಆಂಧ್ರದಲ್ಲಿ 8 ಮಂದಿ ಬಲಿ

ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಎದ್ದಿರುವ ತಿತ್ಲಿ ಚಂಡಮಾರುತ ಈ ಎರಡು ರಾಜ್ಯಗಳ ಜನರ ನಿದ್ದೆ ಕೆಡಿಸಿದೆ. ಈ ಚಂಡಮಾರುತದ ಭೀಕರತೆಗೆ ಸಾಕ್ಷಿಯಾಗುವ ಕೆಲವು ಚಿತ್ರಗಳು ನಿಮಗಾಗಿ ಇಲ್ಲಿವೆ.

ಸುರಕ್ಷಿತ ಸೂರಿನತ್ತ ಪಯಣ...

ಸುರಕ್ಷಿತ ಸೂರಿನತ್ತ ಪಯಣ...

ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿ ತಿತ್ಲಿ ಭಯಕ್ಕೆ ನೂರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ತಿತ್ಲಿಯಿಂದ ತರಗೆಲೆಗಳಂತೆ ಉದುರಿಬಿದ್ದ ತೆಂಗಿನ ಮರಗಳನ್ನು ದಾಟಿ ಜನರು ಸುರಕ್ಷಿತ ಸ್ಥಳದತ್ತ ಕುಟುಂಬ ಸಮೇತ ತೆರಳುತ್ತಿರುವ ಚಿತ್ರ ಇದು.

ವಿಡಿಯೋ: 'ತಿತ್ಲಿ' ಚಂಡಮಾರುತದ ಉಗ್ರರೂಪ ನೋಡಿವಿಡಿಯೋ: 'ತಿತ್ಲಿ' ಚಂಡಮಾರುತದ ಉಗ್ರರೂಪ ನೋಡಿ

ಆತಂಕದಲ್ಲಿ ಕಡಲ ತೀರದ ಜನರು

ಆತಂಕದಲ್ಲಿ ಕಡಲ ತೀರದ ಜನರು

ಆಂಧ್ರಪ್ರದೇಶದ ಗಂಜಾಮ್ ಎಂಬಲ್ಲಿ ಕಡಲ ತೀರದ ಜನರು ತಿತ್ಲಿ ಸೃಷ್ಟಿಸುತ್ತಿರುವ ಅವಾಂತರಕ್ಕೆ ಬೆದರಿ ಸುರಕ್ಷಿತ ತಾಣದತ್ತ ದಾಪುಗಾಲಿಡುತ್ತಿರುವ ದೃಶ್ಯ. ತಿತ್ಲಿಯು ಗಂಟೆಗೆ 120 ರಿಂದ 140 ಕು.ಮೀ.ವೇಗದಲ್ಲಿ ಚಲಿಸುತ್ತಿದ್ದು, ಇಂದು ಅದರ ಆರ್ಭಟ ಕೊಂಚ ಕಡಿಮೆಯಾಗಿದೆ.

ಅಪ್ಪಳಿಸಿದ ತಿತ್ಲಿ ಚಂಡಮಾರುತ: ಒಡಿಶಾ-ಆಂಧ್ರದಲ್ಲಿ ಹೈಅಲರ್ಟ್ ಅಪ್ಪಳಿಸಿದ ತಿತ್ಲಿ ಚಂಡಮಾರುತ: ಒಡಿಶಾ-ಆಂಧ್ರದಲ್ಲಿ ಹೈಅಲರ್ಟ್

ಚಂಡಮಾರುತದಲ್ಲಿ ಕಡಲಲೆ ಜೊತೆ ಆಟ!

ಚಂಡಮಾರುತದಲ್ಲಿ ಕಡಲಲೆ ಜೊತೆ ಆಟ!

ಇದೆಂಥ ಹುಚ್ಚು ನೋಡಿ! ಭೀಕರ ಚಂಡಮಾರುತ ಅಪ್ಪಳಿಸಿದ್ದರೆ ಆಂಧ್ರ ಪ್ರದೇಶ ಗಂಜಮ್ ನಲ್ಲಿ ವ್ಯಕ್ತಿಯೊಬ್ಬ ಕಡಲಲೆಗಳ ಬಳಿ ನಿಂತಿರುವ ದೃಶ್ಯ ಭಯ ಹುಟ್ಟಿಸುತ್ತದೆ. ಈಗಾಗಲೇ ಈ ಸೈಕ್ಲೋನ್ ಗೆ 8 ಜನ ಮೃತರಾಗಿದ್ದಾರೆ.

ಭೂಮಿಯನ್ನು ಮುಟ್ಟಿಬಂದ ಮರಗಿಡಗಳು!

ಭೂಮಿಯನ್ನು ಮುಟ್ಟಿಬಂದ ಮರಗಿಡಗಳು!

ಆಂಧ್ರಪ್ರದೇಶದ ಗೋಪಾಲ್ಪುರದಲ್ಲಿ ಜನರು ತಿತ್ಲಿಯಿಂದ ಪಾರಾಗಲು ಲಗುಬಗೆಯಿಂದ ಮನೆ ಸೇರಿಕೊಳ್ಳುತ್ತಿರುವ ದೃಶ್ಯ ಕಂಡುಬಂತು. ಬೀಸುತ್ತಿರುವ ಗಾಳಿಗೆ ಭೂಮಿಯನ್ನೇ ಮುಟ್ಟಿ ಬರುವಂತೆ ಮರಗಿಡಗಳು ಅಲ್ಲಾಡುತ್ತಿರುವುದು ಗಾಳಿಯ ವೇಗಕ್ಕೆ ಸಾಕ್ಷಿಯಾದವು!

ಕಡಲಿಳಿಯದ ಮೀನುಗಾರರು

ಕಡಲಿಳಿಯದ ಮೀನುಗಾರರು

ತಿತ್ಲಿ ಚಂಡಮಾರುತದ ಮುನ್ಸೂಚನೆಯನ್ನು ಮೊದಲೇ ಹವಾಮಾನ ಇಲಾಖೆ ನೀಡಿದ್ದರಿಂದ, ಮೀನುಗಾರರು ಯಾರೂ ಕಡಲು ಇಳಿಯದಂತೆ ಮೊದಲೇ ಸರ್ಕಾರ ಸೂಚನೆ ನೀಡಿತ್ತು. ಆದ್ದರಿಂದ ಆ ಹೊತ್ತಿನ ಊಟಕ್ಕಿಲ್ಲದಿದ್ದರೂ ಪರವಾಗಿಲ್ಲ, ಜೀವ ಉಳಿಸಿಕೊಳ್ಳೋಣ ಎಂದು ಮೀನುಗಾರರು ಕಡಲು ಇಳಿಯದೆ ಉಳಿದರು.

English summary
Andhra Pradesh: 8 people have died in Srikakulam and Vijayanagaram districts due to Cyclone Titli so far. Here are some pictures of the havoc created by Titli,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X