ಆಂಧ್ರ ಪ್ರದೇಶ:ಒಂಟೆ ಏರಿ ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದ ಮಾಜಿ ಸಂಸದ

ಅಮರಾವತಿ,ಫೆಬ್ರವರಿ 23:ತೈಲ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮಾಜಿ ಸಂಸದರೊಬ್ಬರು ಒಂಟೆ ಮೇಲೆ ಪ್ರತಿಭಟನೆ ನಡೆಸಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ಆಂಧ್ರಪ್ರದೇಶದ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಂಸದ ಜಿವಿ ಹರ್ಷ ಕುಮಾರ್ ತಮ್ಮ ನಿವಾಸದಿಂದ ರಾಜಮುಂಡ್ರಿಯಲ್ಲಿರುವ ರಾಜೀವ್ ಗಾಂಧಿ ಎಜುಕೇಷನಲ್ ಇನ್‌ಸ್ಟಿಟ್ಯೂಟ್ ವರೆಗೆ ಒಂಟೆ ಮೇಲೆ ಮೆರವಣಿಗೆ ಮಾಡಿದರು.

ಇನ್ನು ಏರುತ್ತಿರುವ ತೈಲ ಬೆಲೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

Congress Leader Harsha Rides A Camel As A Mark Of Protest Against The Fuel Price Hike

ಈ ಸರ್ಕಾರ ಸಾಮಾನ್ಯ ಜನರ ಜೇಬು ಖಾಲಿ ಮಾಡಿಸಿ, ಉಚಿತವಾಗಿ ತಮ್ಮ ಸ್ನೇಹಿತರ ಜೇಬುಗಳನ್ನು ತುಂಬಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಮೂಲಕ ಕೇಂದ್ರವು ಜನರನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿರುವ ಅವರು, ಈ ಬೆಲೆ ಏರಿಕೆಯಿಂದಾಗಿ ತತ್ತರಿಸುತ್ತಿರುವ ಸಾಮಾನ್ಯ ಜನರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದೆ.

ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂ, ಮೋದಿ ಸರ್ಕಾರಜನರ ಜೇಬನ್ನು ಖಾಲಿ ಮಾಡಿ,ತಮ್ಮ ಸ್ನೇಹಿತರ ಜೇಬುಗಳನ್ನು ತುಂಬಿಸಲು ಬಹುದೊಡ್ಡ ಕೆಲಸಗಳನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+