ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್; ಮೆಗಾಸ್ಟಾರ್ ಚಿರಂಜೀವಿ ಬಿಗ್ ಬಜೆಟ್ ಚಿತ್ರಕ್ಕೆ ಬಂಡವಾಳ
ಕನ್ನಡದಲ್ಲಿ ಹಲವು ಹಿಟ್ ಸಿನಿಮಾಗಳನ್ನು ಹೊರತಂದಿರುವ ಕೆವಿಎನ್ ಪ್ರೊಡಕ್ಷನ್ಸ್ ಇದೀಗ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದೆ. ಮೆಗಾಸ್ಟಾರ್ ಚಿರಂಜೀವಿ ಹಾಗೂ ಮಾಸ್ ನಿರ್ದೇಶಕ ಬಾಬಿ ಕೊಲ್ಲಿ ಕಾಂಬಿನೇಷನ್‌ನ ಬಹುನಿರೀಕ್ಷಿತ 'ಮೆಗಾ 158' (Mega 158) ಚಿತ್ರಕ್ಕೆ ಗುರುವಾರ ಅಧಿಕೃತವಾಗಿ ಅದ್ಧೂರಿ ಚಾಲನೆ ಸಿಕ್ಕಿದೆ. ಸೂಪರ್ ಹಿಟ್ 'ವಾಲ್ತೇರು ವೀರಯ್ಯ' ಚಿತ್ರದ ಯಶಸ್ಸಿನ ನಂತರ ಈ ಜೋಡಿ ಮತ್ತೆ ಒಂದಾಗಿದ್ದು, ಸಿನಿಮಾದ ಮುಹೂರ್ತ ಸಮಾರಂಭವು ಹೈದರಾಬಾದ್‌ನಲ್ಲಿ ಅತ್ಯಂತ ವೈಭವದಿಂದ ನೆರವೇರಿದೆ.
ಹೈದರಾಬಾದ್‌ನಲ್ಲಿ ಶೂಟಿಂಗ್‌ಗೆ ಚಾಲನೆ
ಈ ಸಿನಿಮಾದ ಮುಹೂರ್ತ ಸಮಾರಂಭವು ಮೆಗಾ ಅಭಿಮಾನಿಗಳಿಗೆ ಡಬಲ್ ಧಮಾಕಾ ನೀಡಿದೆ. ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಚಿರಂಜೀವಿ ಅವರ ಸಹೋದರರು ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಹಿರಿಯ ನಟ ನಾಗಬಾಬು ಆಗಮಿಸಿದ್ದರು. ಮೂವರು ಸಹೋದರರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತ್ತು. ಚಿತ್ರದ ಮೊದಲ ದೃಶ್ಯಕ್ಕೆ ಪವನ್ ಕಲ್ಯಾಣ್ ಅವರು ಕ್ಲಾಪ್ ಬೋರ್ಡ್ ತಟ್ಟಿದರೆ, ಸುಶ್ಮಿತಾ ಕೋನಿಡೇಲ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ಖ್ಯಾತ ನಿರ್ದೇಶಕ ವಿ.ವಿ.ವಿನಾಯಕ್ ಮುಹೂರ್ತದ ದೃಶ್ಯಕ್ಕೆ ಆಕ್ಷನ್ ಕಟ್ ಹೇಳಿದರು. ಹಿರಿಯ ನಿರ್ದೇಶಕರಾದ ಬಿ. ಗೋಪಾಲ್, ಕೋದಂಡರಾಮಿ ರೆಡ್ಡಿ ಮತ್ತು ನಾಗಬಾಬು ಅವರು ಚಿತ್ರತಂಡಕ್ಕೆ ಸ್ಕ್ರಿಪ್ಟ್ ಹಸ್ತಾಂತರಿಸಿದರು.

ಕನ್ನಡ ಚಿತ್ರರಂಗದಲ್ಲಿ ಹಲವು ಸೂಪರ್ ಹಿಟ್ ಹಾಗೂ ಬೃಹತ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿ ಇಡೀ ದೇಶದ ಗಮನ ಸೆಳೆದಿರುವ ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ (KVN Productions), ಈಗ 'ಮೆಗಾ 158' ಚಿತ್ರದ ಮೂಲಕ ಅಧಿಕೃತವಾಗಿ ತೆಲುಗು ಚಿತ್ರರಂಗಕ್ಕೆ ಅದ್ಧೂರಿಯಾಗಿ ಹೆಜ್ಜೆ ಇಟ್ಟಿದೆ. ವೆಂಕಟ್ ಕೆ. ನಾರಾಯಣ ಅವರು ಈ ಚಿತ್ರವನ್ನು ಅತ್ಯಂತ ಬೃಹತ್ ಮಟ್ಟದಲ್ಲಿ ನಿರ್ಮಾಣ ಮಾಡುತ್ತಿದ್ದು, ಮುಹೂರ್ತದ ವೇಳೆ ಕೆವಿಎನ್ ಸಂಸ್ಥೆಯ ಲೋಹಿತ್ ಸೇರಿದಂತೆ ಇಡೀ ತಂಡದ ಉಪಸ್ಥಿತಿ ಇತ್ತು.
ಜಿಮ್‌ನಲ್ಲಿ ಬೆವರು ಹರಿಸಿದ ಮೆಗಾಸ್ಟಾರ್
ಮಾಸ್ ಸಿನಿಮಾಗಳನ್ನು ಮಾಡುವುದರಲ್ಲಿ ಹೆಸರುವಾಸಿಯಾದ ನಿರ್ದೇಶಕ ಬಾಬಿ ಕೊಲ್ಲಿ, ಈ ಬಾರಿ ಚಿರಂಜೀವಿ ಅವರಿಗಾಗಿ 'ವಾಲ್ತೇರು ವೀರಯ್ಯ' ಚಿತ್ರಕ್ಕಿಂತಲೂ ದೊಡ್ಡ ಕಥೆಯನ್ನು ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ. ಇದೊಂದು ಹೈ-ವೋಲ್ಟೇಜ್ ಆಕ್ಷನ್ ಡ್ರಾಮಾ ಆಗಿರಲಿದ್ದು, ಚಿರಂಜೀವಿ ಅವರು ಹಿಂದೆಂದೂ ಕಾಣದ ವಿಭಿನ್ನವಾದ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಇತ್ತೀಚೆಗಷ್ಟೇ ಚಿರಂಜೀವಿ ಅವರು ಜಿಮ್‌ನಲ್ಲಿ ಕಠಿಣ ವರ್ಕೌಟ್ ಮಾಡುತ್ತಿರುವ ವಿಡಿಯೋ ಸಹ ವೈರಲ್ ಆಗಿದ್ದು, ಈ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಚಿತ್ರದ ಶೂಟಿಂಗ್ ಶುಕ್ರವಾರದಿಂದಲೇ ಹೈದರಾಬಾದ್‌ನಲ್ಲಿ ಆರಂಭವಾಗಲಿದೆ.
Setting 𝗧𝗛𝗘 𝗕𝗟𝗢𝗢𝗗𝗬 𝗕𝗘𝗡𝗖𝗛𝗠𝗔𝗥𝗞 right from the Pooja Ceremony itself 😎
— KVN Productions (@KvnProductions) May 21, 2026
The most anticipated Project of @KVNProductions - #KVNTeluguDebut with Megastar @Kchirutweets garu launched grandly with a magnificent pooja ceremony❤️🔥#ChiruBobby2 Shoot begins Tomorrow ✨ pic.twitter.com/44lWi40oSl
ಮಲಯಾಳಂನ ಪ್ರತಿಭಾವಂತ ನಟಿ ಅನಾಸ್ವರ ರಾಜನ್ ಈ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಆಯ್ಕೆಯಾಗಿದ್ದಾರೆ. ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಎಸ್. ಥಮನ್ ಅವರು ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ವಿಜಯ್ ಕಾರ್ತಿಕ್ ಕಣ್ಣನ್ ಕ್ಯಾಮೆರಾ ಜವಾಬ್ದಾರಿ ಹೊತ್ತಿದ್ದಾರೆ. ಕೋನ ವೆಂಕಟ್ ಮತ್ತು ಕೆ. ಚಕ್ರವರ್ತಿ ರೆಡ್ಡಿ ಚಿತ್ರಕಥೆ ಬರೆದಿದ್ದು, ಹರಿ ಮೋಹನ ಕೃಷ್ಣ ಮತ್ತು ವಿನೀತ್ ಪೊಟ್ಲೂರಿ ಹೆಚ್ಚುವರಿ ಬೆಂಬಲ ನೀಡಿದ್ದಾರೆ. ಟಾಲಿವುಡ್‌ನ ಪ್ರಸಿದ್ಧ ಜೋಡಿ ಭಾನು-ನಂದು ಚಿತ್ರದ ಮಾಸ್ ಸಂಭಾಷಣೆಗಳನ್ನು ಬರೆಯುತ್ತಿದ್ದಾರೆ. ಅಬಿನಾಶ್ ಕೊಲ್ಲಾ ಕಲಾ ನಿರ್ದೇಶನ ಮಾಡುತ್ತಿದ್ದಾರೆ.













Click it and Unblock the Notifications