ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರ ಕೆಮಿಕಲ್ ಲ್ಯಾಬ್‌ನಲ್ಲಿ ಬೆಂಕಿ: 6 ಮಂದಿ ಬಲಿ, 11 ಮಂದಿಗೆ ಗಾಯ

|
Google Oneindia Kannada News

ವಿಜಯವಾಡ, ಏಪ್ರಿಲ್ 14: ಆಂಧ್ರಪ್ರದೇಶದ ಪೋರಸ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಬುಧವಾರ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ 6 ಜನರು ಸಾವನ್ನಪ್ಪಿದ್ದಾರೆ ಮತ್ತು 11 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಪೋರಸ್ ಲ್ಯಾಬ್ಸ್ ರಾಜ್ಯದ ಪಶ್ಚಿಮ ಗೋದಾವರಿ ಜಿಲ್ಲೆಯ ಅಕ್ಕಿರೆಡ್ಡಿಗುಡೆಮ್‌ನಲ್ಲಿದೆ. ಈ ಅವಘಡದಲ್ಲಿ ಸಾವನ್ನಪ್ಪಿದವರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಆ ಪೈಕಿ ಅಧಿಕ ಮಂದಿ ಬಿಹಾರ ಮೂಲದವರು ಎಂದು ಮಾಹಿತಿ ಲಭ್ಯವಾಗಿದೆ.

ಅತ್ತ ಸಾವಿರಾರು ಬೆಂಕಿ ದುರಂತ ಘಟನೆ; ಇತ್ತ ಅಗ್ನಿಶಾಮಕ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಅತ್ತ ಸಾವಿರಾರು ಬೆಂಕಿ ದುರಂತ ಘಟನೆ; ಇತ್ತ ಅಗ್ನಿಶಾಮಕ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

ಬುಧವಾರ ತಡರಾತ್ರಿ ಅನಿಲ ಸೋರಿಕೆ ಉಂಟಾಗಿ ಸ್ಪೋಟವಾಗಿದೆ. ಈ ಅಗ್ನಿ ಅವಘಡದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 15 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಾತ್ರಿ 11.30 ರ ಸುಮಾರಿಗೆ ಘಟನೆ ಸಂಭವಿಸಿದೆ ಎಂದು ನುಜ್ವಿಡ್‌ನ ಉಪ ಪೊಲೀಸ್ ಅಧೀಕ್ಷಕ ಬಿ ಶ್ರೀನಿವಾಸುಲು ತಿಳಿಸಿದ್ದಾರೆ.

Chemical lab fire in Andhra Pradesh kills 6 people, 11 injured

"ಘಟನೆ ಸಂಭವಿಸಿದಾಗ ಪೋರಸ್ ಲ್ಯಾಬೋರೇಟರೀಸ್ ಪ್ರೈವೇಟ್ ಲಿಮಿಟೆಡ್‌ನ ನಾಲ್ಕನೇ ಘಟಕದಲ್ಲಿ 20 ಜನರು ಇದ್ದರು," ಎಂದು ಅಧಿಕಾರಿ ಹೇಳಿದರು. ಸ್ಫೋಟ ಸಂಭವಿಸಿದ ಕೂಡಲೇ ಅಗ್ನಿಶಾಮಕ ದಳ ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.

ಬೆಂಗಳೂರು: ಚಲಿಸುತ್ತಿದ್ದ ಬಿಎಂಟಿಸಿ ಬಸ್‌ಗೆ ಹಠಾತ್ ಬೆಂಕಿ; 30 ಪ್ರಯಾಣಿಕರು ಪಾರುಬೆಂಗಳೂರು: ಚಲಿಸುತ್ತಿದ್ದ ಬಿಎಂಟಿಸಿ ಬಸ್‌ಗೆ ಹಠಾತ್ ಬೆಂಕಿ; 30 ಪ್ರಯಾಣಿಕರು ಪಾರು

ಸಮೀಪದ ಜನರಿಗೆ ಸ್ಥಳಾಂತರಗೊಳ್ಳಲು ಎಚ್ಚರಿಕೆ

ಬೆಂಕಿಯನ್ನು ನಂದಿಸಲು ನುಜ್ವಿಡ್ ಮತ್ತು ಹತ್ತಿರದ ಘಟಕಗಳಿಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದು, ಅನಿಲ ಸೋರಿಕೆಯು ಅಪಾಯಕಾರಿ ಆಗಬಹುದು ಎಂಬ ಆತಂಕದಲ್ಲಿ ಹತ್ತಿರದ ಜನರಿಗೆ ಸ್ಥಳಾಂತರಗೊಳ್ಳಲು ಎಚ್ಚರಿಕೆ ನೀಡಲಾಗಿದೆ.

"ಗಾಯಾಳುಗಳನ್ನು ನುಜ್ವಿಡ್ ಮತ್ತು ವಿಜಯವಾಡದ ಸರ್ಕಾರಿ ಜನರಲ್ ಆಸ್ಪತ್ರೆಗಳಿಗೆ ರವಾನಿಸಲಾಗಿದೆ," ಎಂದು ಶ್ರೀನಿವಾಸಲು ಹೇಳಿದರು. ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ ಎಂದು ಕೂಡಾ ಅಧಿಕಾರಿ ಮಾಹಿತಿ ನೀಡಿದ್ದಾರೆ.

English summary
6 people have reportedly died and 11 have been seriously injured in a fire accident at Andhra Pradesh’s Porus Labs Pvt Limited on Wednesday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X