ರಾಜಮೌಳಿ ಅಮರಾವತಿ ವಿನ್ಯಾಸ ತಿರಸ್ಕರಿಸಿದ ಸಿಎಂ ನಾಯ್ಡು

ಅಮರಾವತಿ, ಡಿಸೆಂಬರ್ 15: ಬಾಹುಬಲಿ ಚಿತ್ರದ ನಿರ್ದೇಶಕ ರಾಜಮೌಳಿ ಅವರು ಅಮರಾವತಿ ಅಸೆಂಬ್ಲಿ ವಿನ್ಯಾಸವನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ತಿರಸ್ಕರಿಸಿದ್ದಾರೆ.

ಬಾಹುಬಲಿ ಚಿತ್ರದಲ್ಲಿ ಮಹಿಷ್ಮತಿ ಸಾಮ್ರಾಜ್ಯವನ್ನು ಸೃಷ್ಟಿಸಿದ್ದರು. ಇವರ ಈ ಕಲ್ಪನೆಗೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ರಾಜಮೌಳಿ ಅವರಿಗೆ ಈಗ ಒಂದು ಶಾಕ್​ ಎದುರಾಗಿದ್ದು, ಆಂಧ್ರ ರಾಜಧಾನಿ ಅಮರಾವತಿಗಾಗಿ ಅವರು ನೀಡಿದ್ದ ಡಿಸೈನ್​ ಅನ್ನು ಸಿಎಂ ಚಂದ್ರಬಾಬು ನಾಯ್ಡು ಅವರು ತಿರಸ್ಕರಿಸ್ದಾರೆ.

Chandrababu Naidu rejects Rajamoulis Assembly design in Amaravati

ಬಾಹುಬಲಿ ಚಿತ್ರ ನೋಡಿದ ನಂತರ ಚಂದ್ರಬಾಬು ನಾಯ್ಡು ಅವರು ರಾಜ್ಯದ ನೂತನ ರಾಜಧಾನಿ ಅಮರಾವತಿ ಕಟ್ಟಲು ನೆರವಾಗುವಂತೆ ರಾಜಮೌಳಿ ಅವರನ್ನು ಕೋರಿದ್ದರು. ಅದರಂತೆ ರಾಜಮೌಳಿ ಹಲವು ವಿನ್ಯಾಸಗಳನ್ನು ಸಿದ್ಧಪಡಿಸಿದ್ದರು. ಆದರೆ ಬಾಹುಬಲಿ ನಿರ್ದೇಶಕರ ವಿನ್ಯಾಸಗಳು ಚಂದ್ರಬಾಬು ನಾಯ್ದು ಅವರಿಗೆ ಇಷ್ಟವಾಗಿಲ್ಲ ವಂತೆ.

ಸ್ವತಃ ರಾಜಮೌಳಿ ಅವರೇ ಈ ವಿಷಯವನ್ನು ದೃಢಪಡಿಸಿದ್ದಾರೆ. ತೆಲುಗು ಸಂಸ್ಕೃತಿಯನ್ನು ಆಧರಿಸಿ ಅಮರಾವತಿಯ ಸರ್ಕಾರಿ ಕಟ್ಟಡಗಳಿಗಾಗಿ ನಾನು ಸಿದ್ಧಪಡಿಸಿದ್ದ ವಿನ್ಯಾಸ ಎಲ್ಲರಿಗೂ ಇಷ್ಟವಾಯಿತು. ಆದರೆ ಚಂದ್ರಬಾಬು ನಾಯ್ಡು ಅವರು ಮಾತ್ರ ವಿನ್ಯಾಸಕ್ಕೆ ಒಪ್ಪಿಗೆ ನೀಡಿಲ್ಲ. ಇದು ಆಸೆಂಬ್ಲಿ ಹಾಲ್ ಗೆ ಸಂಬಂಧಿಸಿದ ವಿನ್ಯಾಸವಾಗಿದೆ. ತೆಲುಗು ತಲ್ಲಿ ಪ್ರತಿಮೆ ಸ್ಥಾಪನೆ, ಗೋಪುರ ಕಲ್ಪನೆಗೆ ಸಿಎಂರಿಂದ ಅನುಮತಿ ಸಿಗಲಿಲ್ಲ.

ಆದರೆ, ಬೇರೆ ವಿನ್ಯಾಸಗಳನ್ನು ಸೂಕ್ತವಾಗಿ ಬಳಸಿಕೊಳ್ಳುವ ಭರವಸೆ ಸಿಕ್ಕಿದ್ದು, ಅದರಲ್ಲಿ ಮಾಧ್ಯಮ ಕೇಂದ್ರದ ವಿನ್ಯಾಸ ಮುಖ್ಯವಾಗಿದೆ ಎಂದು ರಾಜಮೌಳಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+