ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರ್ಕಾರದ ವಿರುದ್ಧ ಚಂದ್ರಬಾಬು ನಾಯ್ಡು ಕರಾಳ ದಿನ ಆಚರಣೆ

|
Google Oneindia Kannada News

ಅಮರಾವತಿ, ಫೆಬ್ರವರಿ 1: ವಿಶಾಲ ಆಂಧ್ರಪ್ರದೇಶ ಇಬ್ಭಾಗವಾಗಿ ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ರಚನೆಯಾದ ಬಳಿಕ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ಬೇಡಿಕೆಗೆ ಕೇಂದ್ರ ಸ್ಪಂದಿಸಿಲ್ಲ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತೆ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದ ಬಜೆಟ್ ಮಂಡನೆಯ ದಿನವಾದ ಶುಕ್ರವಾರ ಸರ್ಕಾರದ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಲು ಅವರು ಕಪ್ಪು ದಿರಿಸು ತೊಟ್ಟು ಕಚೇರಿಗೆ ತೆರಳಿದರು.

ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ವಿರುದ್ಧ ಇತ್ತೀಚಿನ ದಿನಗಳಲ್ಲಿ ಸತತ ವಾಗ್ದಾಳಿ ನಡೆಸುತ್ತಿರುವ ನಾಯ್ಡು, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿಲ್ಲ ಹಾಗೂ ಭರವಸೆ ನೀಡಿದಂತೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸುತ್ತಿದ್ದು, ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ವಿರುದ್ಧದ ಪ್ರಚಾರಕ್ಕೆ ಈ ಸಂಗತಿಯನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಳ್ಳಲಿದ್ದಾರೆ.

ಚಂದ್ರಬಾಬು ನಾಯ್ಡುಗೆ ಶಾಕ್: ಜಗನ್ ಪಾಳೆಯಕ್ಕೆ ಎನ್‌ಟಿಆರ್ ಮೊಮ್ಮಗ ಚಂದ್ರಬಾಬು ನಾಯ್ಡುಗೆ ಶಾಕ್: ಜಗನ್ ಪಾಳೆಯಕ್ಕೆ ಎನ್‌ಟಿಆರ್ ಮೊಮ್ಮಗ

ಕೇಂದ್ರ ಸರ್ಕಾರಕ್ಕೆ ವಿಶೇಷ ಸ್ಥಾನಮಾನ ಒದಗಿಸದೆ ವಂಚಿಸಿದೆ. ಅದಕ್ಕಾಗಿ ತಾವು ಹಿರಿಯರಾದರೂ ನರೇಂದ್ರ ಮೋದಿ ಅವರ ಅಹಂಕಾರವನ್ನು ತಣಿಸಲು ಅವರ ಎದುರು ಬಾಗಿ ಸರ್ ಎಂದು ಕರೆದಿದ್ದೆ. ಆದರೂ ರಾಜ್ಯದ ಜನತೆಗೆ ಅವರು ಸ್ಪಂದಿಸಿಲ್ಲ ಎಂದು ನಾಯ್ಡು ಆರೋಪಿಸಿದ್ದಾರೆ.

ಕರಾಳ ದಿನ ಆಚರಣೆ

ಕರಾಳ ದಿನ ಆಚರಣೆ

'ಕೇಂದ್ರದಿಂದ ನಮಗೆ ಆದ ಅನ್ಯಾಯವನ್ನು ಖಂಡಿಸಿ ಧ್ವನಿ ಎತ್ತಲು ಆಂಧ್ರಪ್ರದೇಶದಲ್ಲಿ ನಾವು ಕರಾಳ ದಿನ ಆಚರಿಸುತ್ತಿದ್ದೇವೆ. ನಮ್ಮ ಜನರಿಗಾಗಿ ಹೋರಾಟ ನಡೆಸಲು ನಾವು ಬದ್ಧರಾಗಿ ನಿಂತಿದ್ದೇವೆ. ನ್ಯಾಯ ದೊರಕುವವರೆಗೂ ನಾವು ನಿಲ್ಲಿಸುವುದಿಲ್ಲ' ಎಂದು ನಾಯ್ಡು ಹೇಳಿದ್ದಾರೆ.

ಮೋದಿಯವರು ಮನೆಗೆ ಹೋಗುವ ಸಮಯ ಬಂದಿದೆ: ಚಂದ್ರಬಾಬು ನಾಯ್ಡು ಮೋದಿಯವರು ಮನೆಗೆ ಹೋಗುವ ಸಮಯ ಬಂದಿದೆ: ಚಂದ್ರಬಾಬು ನಾಯ್ಡು

Array

ಕೇಂದ್ರದಿಂದ ತಾರತಮ್ಯ ಏಕೆ?

ಆಂಧ್ರಪ್ರದೇಶವು ದೇಶದ ಇತರೆ ರಾಜ್ಯಗಳಂತೆಯೇ ಒಂದು ರಾಜ್ಯ. ಆದರೆ, ನಾವೇಕೆ ಕೇಂದ್ರದ ತಾರತಮ್ಯದ ಬೇಗುದಿಯಲ್ಲಿ ಸುಡುವಂತಾಗಿದೆ? ರಾಜ್ಯ ವಿಭಜನೆಯ ಬಳಿಕ ಅಡ್ಡಿ ಆತಂಕಗಳ ನಡುವೆಯೂ ರಾಜ್ಯ ಶೇ 10.52ರಷ್ಟು ಪ್ರಗತಿ ಸಾಧಿಸಿದೆ. ಕೇಂದ್ರದಿಂದ ನಿಜಕ್ಕೂ ಹೆಚ್ಚಿನ ಸಹಕಾರ ಬೇಕಿದೆ ಎಂದು ನಾಯ್ಡು ಹೇಳಿದ್ದಾರೆ.

ನರೇಂದ್ರ ಮೋದಿ ಪ್ರಚಾರಪ್ರಿಯ ಪ್ರಧಾನಿ : ಚಂದ್ರಬಾಬು ನಾಯ್ಡು ತೀಕ್ಷ್ಣ ವಾಗ್ದಾಳಿ ನರೇಂದ್ರ ಮೋದಿ ಪ್ರಚಾರಪ್ರಿಯ ಪ್ರಧಾನಿ : ಚಂದ್ರಬಾಬು ನಾಯ್ಡು ತೀಕ್ಷ್ಣ ವಾಗ್ದಾಳಿ

ಸರ್ ಎಂದು ತಲೆಬಾಗಿದ್ದೆ

ಸರ್ ಎಂದು ತಲೆಬಾಗಿದ್ದೆ

'ದೇಶದ ಅತಿ ಹಿರಿಯ ರಾಜಕಾರಣಿಯಾಗಿ ನಾನು ನರೇಂದ್ರ ಮೋದಿ ಅವರ ಅಹಂಕಾರವನ್ನು ತೃಪ್ತಿಪಡಿಸಲು ಅವರ ಮುಂದೆ ತಲೆಬಾಗಿ ಅವರನ್ನು 'ಸರ್' ಎಂದು ಸಂಬೋಧಿಸಿದ್ದೆ. ನನ್ನ ಜನರಿಗೆ ನ್ಯಾಯ ಒದಗಿಸುವ ಸಲುವಾಗಿ ದೆಹಲಿಗೆ ಹಲವು ಬಾರಿ ತೆರಳಿದ್ದೇನೆ. ಆದರೆ, ಬಿಜೆಪಿ ಆಂಧ್ರಪ್ರದೇಶದ ಜನರ ಸಂಕಷ್ಟಗಳೆಡೆಗೆ ತನ್ನ ಕಣ್ಣುಗಳನ್ನು ಕುರುಡನ್ನಾಗಿಸಿಕೊಂಡಿದೆ' ಎಂದು ನಾಯ್ಡು ಟ್ವೀಟ್ ಮಾಡಿದ್ದಾರೆ.

ಹೋರಾಟ ಮುಂದುವರಿಸುತ್ತೇವೆ

ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ನಾವು ನ್ಯಾಯಕ್ಕಾಗಿ ಗೌರವಯುತ ಹೋರಾಟ ಮುಂದುವರಿಸುತ್ತೇವೆ. ಆಂಧ್ರಪ್ರದೇಶದ ಐದು ಕೋಟಿ ಜನರನ್ನು ವಂಚಿಸಲು ಬಿಜೆಪಿ ಸರ್ಕಾರಕ್ಕೆ ಬಿಡುವುದಿಲ್ಲ. ವಿಶೇಷ ಸ್ಥಾನಮಾನ ಮಾನ್ಯತೆ ಮತ್ತು ರಾಜ್ಯ ವಿಭಜನೆ ಕಾಯ್ದೆಯಡಿ ವಿವಿಧ ಭರವಸೆಗಳನ್ನು ಈಡೇರಿಸಲೇಬೇಕು. ಇದಕ್ಕಾಗಿ ನಾವು ಹೋರಾಟ ಮಾಡುವಂತಾಗಬಾರದು ಎಂದಿದ್ದಾರೆ.

English summary
Andhra Pradesh chief minister N Chandrababu Naidu observed black day protesting against BJP government for not fullfilling his demand of special status to the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X