Get Updates
Get notified of breaking news, exclusive insights, and must-see stories!

ಆಂಧ್ರ ಸಿಎಂ ಜಗನ್ ಕ್ಯಾಬಿನೆಟ್ 2.0: ಐವರಿಗೆ ಡಿಸಿಎಂ ಪಟ್ಟ: ಮಹಿಳಾ ನಾಯಕಿಗೆ ಹೋಮ್

ಹೈದರಾಬಾದ್, ಏ. 11: ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಕ್ಯಾಬಿನೆಟ್ 2.0 ಪೂರ್ಣಗೊಂಡಿದೆ. ಐವರು ನಾಯಕರಿಗೆ ಜಾತಿ ಆದ್ಯತೆ ಡಿಸಿಎಂ ಪಟ್ಟದ ಜತೆಗೆ 25 ಮಂದಿ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ನಿರೀಕ್ಷೆಯಂತೆ ಸಮುದಾಯಗಳಿಗೆ ಆದ್ಯತೆವಾರು ಐವರಿಗೆ ಡಿಸಿಎಂ ಹುದ್ದೆಗಳ ಜತೆಗೆ ಮಹತ್ವದ ಖಾತೆಗಳನ್ನು ಹಂಚಿಕೆ ಮಾಡಿದ್ದು, ಜಗನ್ ಕ್ಯಾಬಿನೆಟ್ 2.0 ಪೂರ್ಣ ಪಟ್ಟಿ ಇಲ್ಲಿದೆ. ಹೋಮ್ ಮಿನಿಸ್ಟರ್ ಆಕಾಂಕ್ಷಿ ರೋಜಾಗೆ ಪ್ರವಾಸೋದ್ಯಮ ಖಾತೆ ಲಭ್ಯವಾಗಿದೆ.

ಸಿಎಂ ಜಗನ್ ಕ್ಯಾಬಿನೆಟ್‌ನಲ್ಲಿ ಅವಕಾಶ ವಂಚಿತ ಶಾಸಕರ ಬೆಂಬಲಿಗರು ಒಂದೆಡೆ ಪ್ರತಿಭಟನೆ ಆರಂಭಿಸಿದ್ದರು. ಸಚಿವರಾಗಿ ಆಯ್ಕೆಯಾದವರು, ತಮಗೆ ಇಂತಹ ಖಾತೆ ಸಿಕ್ಕರೆ ಒಳ್ಳೆಯದು ಎಂಬ ಲೆಕ್ಕಾಚಾರದಲ್ಲಿ ಮುಳಗಿದ್ದರು. ಆದರೆ ಈ ಹಿಂದೆ ಕ್ಯಾಬಿನೆಟ್ ರಚನೆ ಮಾಡುವಾಗ ಜಗನ್ ಅನುಸರಿಸಿದ್ದ ಜಾತಿ ಆದ್ಯತೆ ಲೆಕ್ಕಾಚಾರ ಸೂತ್ರವನ್ನು ಪಾಲನೆ ಮಾಡಿದ್ದಾರೆ. ಬಿಸಿ, ಎಸ್‌ಸಿ, ಎಸ್ಟಿ, ಕಾಪು ವರ್ಗಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡಿ ಸರ್ವರಿಗೂ ಸಮಪಾಲು ತತ್ವ ಪಾಲನೆ ಮಾಡಿದ್ದಾರೆ.

ಎಸ್‌ಸಿ ವರ್ಗಕ್ಕೆ ಆದ್ಯತೆ ನೀಡುವ ಭಾಗವಾಗಿ ಉತ್ತರಾಂಧ್ರ ರಾಜನ್ನ ದೊರ ಅವರಿಗೆ ಡಿಸಿಎಂ ಹುದ್ದೆ ನೀಡಿದ್ದು, ಅದರ ಜತೆಗೆ ಬುಡಕಟ್ಟು ಜನಾಂಗದ ಕಲ್ಯಾಣ ಖಾತೆಯನ್ನು ನೀಡಿದ್ದಾರೆ. ಮೈನಾರ್ಟಿ ವರ್ಗದಿಂದ ಅಂಜಾದ್ ಬಾಷಾ (ರಾಯಲಸೀಮೆ) ಅವರಿಗೆ ಜಗನ್ ಡಿಸಿಎಂ ಹುದ್ದೆ ಕಲ್ಪಿಸಿ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ಖಾತೆಯನ್ನು ಅವರಿಗೆ ನೀಡಿ ಜಗನ್ ಸಮುದಾಯಗಳಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ.

Andrapradesh CM Jagan new cabinet will have five deputy cms; Actress Roja became tourism and youth minister

ಅದೇ ರೀತಿ ಬುಡಿ ಮುತ್ಯಾಲ ನಾಯ್ಡು ಅವರಿಗೆ ಡಿಸಿಎಂ ಸ್ಥಾನದ ಜತೆಗೆ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಖಾತೆಯನ್ನು ಜಗನ್ ನೀಡಿದ್ದಾರೆ. ಕೊಟ್ಟು ಸತ್ಯನಾರಾಯಣ ಅವರಿಗೆ ಡಿಸಿಎಂ ಸ್ಥಾನದ ಜತೆಗೆ ಮುಜರಾಯಿ ಖಾತೆಯನ್ನು ಹಂಚಿಕೆ ಮಾಡಲಾಗಿದೆ.

Andrapradesh CM Jagan new cabinet will have five deputy cms; Actress Roja became tourism and youth minister

ಎಸ್ ಸಿ ಸಮುದಾಯಕ್ಕೆ ಆದ್ಯತೆ ನೀಡುವ ಭಾಗವಾಗಿ ಕೆ. ನಾರಾಯಣಸ್ವಾಮಿ ಅವರಿಗೆ ಡಿಸಿಎಂ ಹುದ್ದೆ ಜತೆಗೆ ಅಬಕಾರಿ ಸಚಿವ ಸ್ಥಾನ ನೀಡಲಾಗಿದೆ. ಈ ಹಿಂದಿನ ಐವರು ಡೆಪ್ಯುಟಿ ಸಿಎಂ ಹುದ್ದೆಗಳ ಪೈಕಿ ಒಂದನ್ನು ಮಹಿಳೆಗೆ ನೀಡಿದ್ದರು. ಅದೇ ಕೋಟಾದಡಿ ಈ ಭಾರಿ ಎಸ್ಟಿ ವರ್ಗಕ್ಕೆ ಸೇರಿದ ಪುಷ್ಪರ್ಶರೀ ವಾಣಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗುತ್ತದೆ ಎಂದೇ ಹೇಳಲಾಗಿತ್ತು. ಆದರೆ ಜಗನ್ ಈ ಬಾರಿ ಐವರ ಪೈಕಿ ಮಹಿಳೆಗೆ ಡಿಸಿಎಂ ಸ್ಥಾನ ನೀಡಿಲ್ಲ.

Andrapradesh CM Jagan new cabinet will have five deputy cms; Actress Roja became tourism and youth minister

ಹೋಮ್ ಮಿನಿಸ್ಟರ್ ತಾನೇಟಿ ವನಿತಾ: ಜಗನ್ ಕ್ಯಾಬಿನೆಟ್ 1.0 ನಲ್ಲಿ ದಲಿತ ಮಹಿಳೆಗೆ ಹೋಮ್ ಮಿನಿಸ್ಟರ್ ಹುದ್ದೆ ನೀಡಿದ್ದರು. ಎಸ್ ಸಿ ಮಹಿಳೆಗೆ ಹೋಮ್ ಮಿನಿಸ್ಟರ್ ಹುದ್ದೆ ನೀಡಿದ್ದನ್ನು ಜಗನ್ ಕೂಡ ಹೇಳಿಕೊಂಡಿದ್ದರು. ಈ ಬಾರಿ ಕೂಡ ಅದೇ ಮಾನದಂಡ ಅನುಸಿ ಜಗನ್ ತಾನೇಟಿ ವನಿತಾ ಅವರಿಗೆ ಹೋಮ್ ಮಿನಿಸ್ಟರ್ ಸ್ಥಾನ ನೀಡಿದ್ದಾರೆ. ಅದರ ಜೆತೆಗೆ ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಖಾತೆಯನ್ನೂ ಹೆಚ್ಚುವರಿಯಾಗಿ ನೀಡಿದ್ದಾರೆ. ತಾನೇಟಿ ವನಿತಾ ಗೆ ಗೃಹ ಸಚಿವ ಸ್ಥಾನ ನೀಡುವ ಮೂಲಕ ಎರಡನೇ ಬಾರಿಯೂ ಹೋಮ್ ಮಿನಿಸ್ಟರ್ ಖಾತೆಯನ್ನು ಮಹಿಳೆಗೆ ಹಂಚಿಕೆ ಮಾಡಿ ಮಾದರಿ ಮೆರೆದಿದ್ದಾರೆ.

Andrapradesh CM Jagan new cabinet will have five deputy cms; Actress Roja became tourism and youth minister

ಬಿಸಿ ಕೆಟಗಿರಿ ವರ್ಗದಿಂದ ಗುರುತಿಸಿಕೊಂಡಿರುವ ನಟಿ ರೋಜಾ ಅವರಿಗೆ ಸಚಿವ ಸ್ಥಾನ ಪಕ್ಕಾ ಆಗುತ್ತಿದ್ದಂತೆ, ಗೃಹ ಮಂತ್ರಿ ಹುದ್ದೆ ಅಲಂಕರಿಸಿದ್ದಾರೆ ಎಂಬ ಸಂಗತಿ ಸಂಚಲನ ಮೂಡಿಸಿತ್ತು. ವಿಕಿಪಿಡಿಯಾದಲ್ಲಿ ಜಗನ್ ಕ್ಯಾಬಿನೆಟ್‌ನಲ್ಲಿ ರೋಜಾ ಹೊಮ್ ಮಿನಿಸ್ಟರ್ ಆಗಿ ನೇಮಕಗೊಂಡಿದ್ದಾರೆ ಎಂದು ಈಗಾಗಲೇ ಅಪಡೇಟ್ ಮಾಡಲಾಗಿದೆ. ಕೊನೆ ಕ್ಷಣದಲ್ಲಿ ರೋಜಾ ಅವರಿಗೆ ಪ್ರವಾಸೋದ್ಯಮ ಖಾತೆ ನೀಡಲಾಗಿದೆ. ಇದರ ಜತೆಗೆ ಸಂಸ್ಕೃತಿ ಮತ್ತು ಯುವ ಜನ ಸೇವಾ ಖಾತೆಯನ್ನು ನೀಡಲಾಗಿದೆ.

ಐವರು ಡಿಸಿಎಂ ಹಾಗೂ 25 ಮಂತ್ರಿಗಳಿಗೆ ನೂತನ ಖಾತೆಗಳನ್ನು ಹಂಚಿಕೆ ಮಾಡಿ ಜಗನ್ ಸರ್ವ ಸಮುದಾಯಕ್ಕೂ ಸಮಾನ ಅವಕಾಶ ನೀಡಿದ್ದಾರೆ. ಇದರ ನಡುವೆ ಅವಕಾಶ ವಂಚಿತರ ಹೋರಾಟದ ಬಿಸಿ ತಾಕಿದ್ದು, ಜಗನ್ 2.0 ಕ್ಯಾಬಿನೆಟ್ ಸಚಿವರ ಪಟ್ಟಿ ಇಲ್ಲಿದೆ.

Andrapradesh CM Jagan new cabinet will have five deputy cms; Actress Roja became tourism and youth minister

ಧರ್ಮನ ಪ್ರಸಾದ್ ರಾವ್- ಕಂದಾಯ,ನೋಂದಣಿ ಮತ್ತು ಮುದ್ರಾಂಕ

ಸೀದಿರಿ ಅಪ್ಪಲ ರಾಜು- ಪಶು ಸಂಗೋಪನೆ, ಡೈರಿ ಅಭಿವೃದ್ಧಿ, ಮೀನುಗಾರಿಕೆ

ಬೋತ್ಸಾ ಸತ್ಯನಾರಾಯಣ- ಶಿಕ್ಷಣ

ರಾಜನ್ನ ದೊರ ಪಿಡಿಕ-ಡಿಸಿಎಂ, ಬುಡಕಟ್ಟು ಅಭಿವೃದ್ಧಿ,

ಗುಡಿವಾಡ ಅಮರನಾಥ್, ಕೈಗಾರಿಕೆ, ಮೂಲ ಸೌಕರ್ಯ, ಹೂಡಿಕೆ ಮತ್ತು ವಾಣಿಜ್ಯ , ಮಾಹಿತಿ ತಂತ್ರಜ್ಞಾನ,

ದಾಡಿಶೆಟ್ಟಿ ರಾಮಲಿಂಗೇಶ್ವರರಾವ್, ರಸ್ತೆ ಮತ್ತು ಕಟ್ಟಡ,

Andrapradesh CM Jagan new cabinet will have five deputy cms; Actress Roja became tourism and youth minister

ಪಿ. ವಿಶ್ವರೂಪು, ಸಾರಿಗೆ

ಚೆಲ್ಲುಬೊಯಿನ ಶ್ರೀನಿವಾಸ ವೇಣುಗೋಪಾಲ ಕೃಷ್ಣ -ಹಿಂದುಳಿದ ಕಲ್ಯಾಣ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ, ಸಿನಿಮೋಟೋಗ್ರಫಿ,

ತಾನೇಟಿ ವನಿತಾ-ಗೃಹ ಖಾತೆ ಮತ್ತು ಡಿಸಾಸ್ಟರ್ ಮ್ಯನೇಜ್ಮೆಂಟ್,

ಕುರುಮುರಿ ವೆಂಕಟ ನಾಗೇಶ್ವರ ರಾವ್- ನಾಗರಿಕ ಸೇವೆ ಮತ್ತು ಗ್ರಾಹಕ ಪೂರೈಕೆ,

ಕೊಟ್ಟು ಸತ್ಯನಾರಾಯಣ-ಡಿಸಿಂ ಮತ್ತು ಮುಜರಾಯಿ ಇಲಾಖೆ,

ಜೋಗಿ ರಮೇಶ್- ವಸತಿ ಸಚಿವ,

ಮೆರುಗು ನಾಗಾರ್ಜುನ- ಸಮಾಜ ಕಲ್ಯಾಣ,

ವಿಡುದಲ ರಜಿನಿ- ಆರೋಗ್ಯ ಮತ್ತು ಕುಟುಂಬ ಕಲ್ಯಾಣ , ವೈದ್ಯಕೀಯ ಶಿಕ್ಷಣ,

ಅಂಬಾಟಿ ರಾಂಬಾಬು- ಜಲ ಸಂಪನ್ಮೂಲ ಖಾತೆ,

ಅಡಿಮುಲುಪು ಸುರೇಶ್- ಪೌರಾಡಳಿತ ಮತ್ತು ನಗರಾಭಿವೃದ್ಧಿ,

ಕಾಕಿಣಿ ಗೋವರ್ಧನ ರೆಡ್ಡಿ- ಕೃಷಿ, ಸಹಕಾರ, ಮಾರ್ಕೆಟಿಂಗ್,

ಪೆದ್ದಿರೆಡ್ಡಿ ರಾಮಚಂದ್ರ ರೆಡ್ಡಿ- ವಿದ್ಯುತ್, ಅರಣ್ಯ, ಪರಿಸರ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ, ಗಣಿ

ಆರ್.ಕೆ. ರೋಜಾ- ಟೂರಿಸಂ, ಯುವ ಕಲ್ಯಾಣ,

ಕೆ. ನಾರಾಯಣಸ್ವಾಮಿ- ಡಿಸಿಎಂ, ಅಬಕಾರಿ,

ಅಮ್ಜದ್ ಬಾಷಾ- ಡಿಸಿಎಂ, ಅಲ್ಯ ಸಂಖ್ಯಾತರ ಕಲ್ಯಾಣ ಖಾತೆ,

ಬುಗ್ಗನ ರಾಜೇಂದ್ರನಾಥ್-ಹಣಕಾಸು, ಯೋಜನೆ, ವಾಣಿಜ್ಯ ತೆರಿಗೆ, ಕೌಶಲ್ಯ ಅಭಿವೃದ್ಧಿ,

ಗುಮ್ಮನೂರು ಜಯರಾಂ- ಕಾರ್ಮಿಕ, ಉದ್ಯೋಗ, ತರಬೇತಿ, ಕೈಗಾರಿಕೆ

ಉಷಾ ಶ್ರೀ ಚರಣ್- ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+