ಸ್ಮಗಲಿಂಗ್ ತಡೆಗಟ್ಟಲು ಮದ್ಯ ಬೆಲೆ ತಗ್ಗಿಸಿದ ರಾಜ್ಯ ಸರ್ಕಾರ
ಅಮರಾವತಿ, ಅ. 30: ಭಾರತದಲ್ಲಿ ತಯಾರಿಸಲಾಗುವ ವಿದೇಶಿ ಮದ್ಯಗಳನ್ನು ಎರಡು ಕೆಟಗರಿಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಲು ಜಗನ್ ಮೋಹನ್ ರೆಡ್ಡಿ ಸರ್ಕಾರ ಮುಂದಾಗಿದೆ.
ಸರಿ ಸುಮಾರು ಮದ್ಯದ ಬೆಲೆಯನ್ನು ಶೇ 25 ರಿಂದ 30ರಷ್ಟು ತಗ್ಗಿಸಲಾಗಿದ್ದು, ಇದರಿಂದ ಬೇರೆ ರಾಜ್ಯಗಳಿಂದ ಅಕ್ರಮ ಕಳ್ಳಸಾಗಣೆ ತಡೆಗಟ್ಟಬಹುದು ಎಂದು ಸರ್ಕಾರ ಹೇಳಿದೆ. ಪರಿಷ್ಕೃತ ದರ ಮಧ್ಯಮ ಹಾಗೂ ಪ್ರೀಮಿಯಂ ಕೆಟಗೆರಿಯ ಮದ್ಯಕ್ಕೆ ಅನ್ವಯವಾಗಲಿದ್ದು, 50 ರು ನಿಂದ 1,350 ರು ಪ್ರತಿ ಬಾಟಲ್ ತನಕ ಬೆಲೆ ತಗ್ಗಲಿದೆ.
ಅಂತಾರಾಜ್ಯ ಕಳ್ಳರು ತೆಲಂಗಾಣ, ಕರ್ನಾಟಕ, ತಮಿಳುನಾಡು ಹಾಗೂ ಒಡಿಶಾದಿಂದ ಆಂಧ್ರಪ್ರದೇಶಕ್ಕೆ ಅಕ್ರಮವಾಗಿ ಮದ್ಯ ಸಾಗಣೆ ಹಾಗೂ ಪೂರೈಕೆ ಮಾಡುತ್ತಿದ್ದು, ಇದನ್ನು ತಡೆಗಟ್ಟಲು ಸರ್ಕಾರ ಬೆಲೆ ತಗ್ಗಿಸಲು ಮುಂದಾಗಿದೆ.

ಅಂತಾರಾಜ್ಯ ಮದ್ಯಪೂರೈಕೆ ಕಡಿವಾಣ ಹಾಕಲು ಅಬಕಾರಿ ಸುಂಕ ಹೆಚ್ಚಿಸಲಾಗಿದ್ದು, ಈ ಮೂಲಕ ಸರ್ಕಾರದ ಬೊಕ್ಕಸ ಹೆಚ್ಚಳ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.
ಸೆಪ್ಟೆಂಬರ್ 15 ರಿಂದ ಇಲ್ಲಿ ತನಕ 1211 ಅಕ್ರಮ ಮದ್ಯ ಸಾಗಣೆ ಕೇಸ್ ದಾಖಲಾಗಿದೆ. ತೆಲಂಗಾಣದಿಂದ 630, ಕರ್ನಾಟಕದಿಂದ 546, ಒಡಿಶಾದಿಂದ 24 ಹಾಗೂ ತಮಿಳುನಾಡಿನಿಂದ 11 ಕೇಸು ದಾಖಲಾಗಿದೆ. ಕರ್ನಾಟಕ ಹಾಗೂ ತೆಲಂಗಾಣಕ್ಕೆ ಹೋಲಿಸಿದರೆ ಕೆಲವು ಪ್ರೀಮಿಮಂ ಮದ್ಯದ ದರ ಆಂಧ್ರಪ್ರದೇಶದಲ್ಲಿ ಡಬ್ಬಲ್ ರೇಟ್ ಇದೆ.












Click it and Unblock the Notifications