• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮರಾವತಿ ಯೋಜನೆಗಳಲ್ಲಿ 30,000 ಕೋಟಿ ರುಪಾಯಿ ಅವ್ಯವಹಾರ?

|

ವಿಜಯವಾಡ (ಮಹಾರಾಷ್ಟ್ರ), ಅಕ್ಟೋಬರ್ 24: ಆಂಧ್ರಪ್ರದೇಶದ ರಾಜಧಾನಿ ಅಮರಾವತಿ ಕಾಮಗಾರಿ ಟೆಂಡರಿಂಗ್, ವಿವಿಧ ಇಲಾಖೆಯಲ್ಲಿನ ಕೆಲಸಗಳ ಅನುಷ್ಠಾನದ ಬಗ್ಗೆ ಈ ಹಿಂದೆ ಅಧಿಕಾರದಲ್ಲಿ ಇದ್ದ ತೆಲುಗು ದೇಶಂ ಸರ್ಕಾರ ಅನುಸರಿಸಿದ ಪ್ರಕ್ರಿಯೆಗಳ ಬಗ್ಗೆ ವರದಿ ಸಲ್ಲಿಸಲು ರಚಿಸಿದ್ದ ತಜ್ಞರ ಸಮಿತಿ ತನ್ನ ಶಿಫಾರಸುಗಳನ್ನು ನೀಡಿದೆ.

ವರದಿಯಲ್ಲಿರುವ ಶಿಫಾರಸುಗಳ ಬಗ್ಗೆ ಸಂಪೂರ್ಣ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ. ವೈಎಸ್ ಆರ್ ಸಿ ನಾಯಕರು ಹೇಳುವ ಪ್ರಕಾರ, ಅಮರಾವತಿಯ ಪ್ರತಿ ಪ್ರಸ್ತಾವಿತ ಯೋಜನೆಯಲ್ಲೂ ಅವ್ಯವಹಾರ ಹಾಗೂ ಅನವಶ್ಯಕ ಖರ್ಚುಗಳು ಕಂಡುಬಂದಿವೆ. ಹಾಗೆ ನಡೆದಿದೆ ಎನ್ನಲಾದ ಅವ್ಯವಹಾರ- ಅನವಶ್ಯಕ ಖರ್ಚುಗಳನ್ನೆಲ್ಲ ಒಟ್ಟು ಮಾಡಿ ಹೇಳುವುದಾದರೆ 30,000 ಕೋಟಿ ರುಪಾಯಿ ಆಗುತ್ತದೆ.

ಮೋದಿ ಸಖ್ಯ ತೊರೆದಿದ್ದಕ್ಕೆ ಪಶ್ಚಾತಾಪದ ಮಾತನಾಡಿದ ಚಂದ್ರಬಾಬು ನಾಯ್ಡ

ತಜ್ಞರ ಸಮಿತಿಯಲ್ಲಿ ಎಂಜಿನಿಯರ್ ಗಳು ಹಾಗೂ ಸ್ಟ್ರಕ್ಚರಲ್ ಎಂಜಿನಿಯರಿಂಗ್ ನಿಷ್ಣಾತರು ಇದ್ದರು. ಅಮರಾವತಿಯಲ್ಲಿ ಎಂಜಿನಿಯರಿಂಗ್ ಕೆಲಸಗಳಲ್ಲಿ ಹಲವು ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಗುಣಮಟ್ಟದ ನಿಯಮಾವಳಿಗಳನ್ನು ಅನುಸರಿಸಿಲ್ಲ. ಇನ್ನು ಅವುಗಳ ವೆಚ್ಚವು ಅಗತ್ಯಕ್ಕಿಂತ ವಿಪರೀತ ಹೆಚ್ಚು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

30,000 ಕೋಟಿ ರುಪಾಯಿಯಷ್ಟು ಅವ್ಯವಹಾರ

ತಮಗೆ ಬೇಕಾದವರ ಜತೆಗೆ ವ್ಯವಹಾರ, ಅನಗತ್ಯ ಯೋಜನೆಗಳು, ಕಾರಣವೇ ಇಲ್ಲದೆ ಯೋಜನೆಗಳಿಗೆ ವೆಚ್ಚ ಹೆಚ್ಚಳ ಮಾಡಿರುವುದು ಮತ್ತಿತರ ಕಾರಣಗಳಿಂದ 30,000 ಕೋಟಿ ರುಪಾಯಿಯಷ್ಟು ಅವ್ಯವಹಾರ ಆಗಿರಬಹುದು ಎಂದು ತಜ್ಞರ ಸಮಿತಿ ಅಂದಾಜಿಸುತ್ತಿರುವುದಾದಿ ವೈಎಸ್ ಆರ್ ಸಿ ಶಾಸಕ ಮಲ್ಲಾಡಿ ವಿಷ್ಣು ಹೇಳಿದ್ದಾರೆ.

ಅಧಿಕೃತ ದಾಖಲೆಗಳ ಪ್ರಕಾರ, ಈ ಹಿಂದಿನ ಟಿಡಿಪಿ ಸರ್ಕಾರವು ಮೊದಲ ಹಂತದಲ್ಲಿ ಐವತ್ತೊಂದು ಸಾವಿರ ಕೋಟಿ ರುಪಾಯಿ ಮೌಲ್ಯದ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಮೂವತ್ತಾರು ಸಾವಿರ ಕೋಟಿ ಮೌಲ್ಯದ ಅರವತ್ತೆಂಟು ಯೋಜನೆಗಳನ್ನು ಆಂಧ್ರಪ್ರದೇಶ್ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (ಎಪಿಸಿಆರ್ ಡಿಎ) ಮೂಲಕ ನೀಡಿತ್ತು.

370 ನೇ ವಿಧಿ: ಕೇಂದ್ರದ ಬೆಂಬಲಕ್ಕೆ ನಿಂತ ಚಂದ್ರಬಾಬು ನಾಯ್ಡು ಅಚ್ಚರಿಯ ನಡೆ

ತಾತ್ಕಾಲಿಕ ಹೈಕೋರ್ಟ್, ಪ್ರಮುಖ ರಸ್ತೆಗಳು, ಎಪಿಸಿಆರ್ ಡಿಎ ಕಚೇರಿ ಮತ್ತು ಇತರೆ ಕೆಲಸಗಳು ಐವತ್ತು ಪರ್ಸೆಂಟ್ ಗಿಂತ ಹೆಚ್ಚು ಪ್ರಗತಿಯಲ್ಲಿವೆ. ಕನಿಷ್ಠ ಇಪ್ಪತ್ತು ಯೋಜನೆಗಳ ಪ್ರಗತಿ ಒಂದು ಪರ್ಸೆಂಟ್ ಗಿಂತ ಕಡಿಮೆ ಇದೆ. ಇಪ್ಪತ್ತೈದು ಪರ್ಸೆಂಟ್ ಗಿಂತ ಕಡಿಮೆ ಕೆಲಸ ಆಗಿರುವ ಎಲ್ಲ ಯೋಜನೆಗಳ ಪರಿಶೀಲನೆಗೆ ನಿವೃತ್ತ ಎಂಜಿನಿಯರ್ ಗಳ ಸಮಿತಿ ಶಿಫಾರಸು ಮಾಡಿರುವುದಾಗಿ ವರದಿ ಆಗಿದೆ.

ಜೂನ್ ಹದಿನಾಲ್ಕನೇ ತಾರೀಕು ತಜ್ಞರ ಸಮಿತಿ ರಚನೆ

ಈಗಾಗಲೇ ಎಪ್ಪತ್ತರಿಂದ ಎಪ್ಪತ್ತೈದು ಪರ್ಸೆಂಟ್ ಅನುಷ್ಠಾನ ಆಗಿರುವ ಯೋಜನೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಸರ್ಕಾರಕ್ಕೆ ಬಿಟ್ಟಿದ್ದು ಎಂದು ಸಮಿತಿ ಶಿಫಾರಸು ಮಾಡಿರುವುದಾಗಿ ತಿಳಿದುಬಂದಿದೆ.

ವೈಎಸ್ ಆರ್ ಸಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ಜೂನ್ ಹದಿನಾಲ್ಕನೇ ತಾರೀಕು ತಜ್ಞರ ಸಮಿತಿಯೊಂದನ್ನು ರಚಿಸಿತ್ತು. ಎಪಿಸಿಆರ್ ಡಿಎ ಸೇರಿದಂತೆ ಎಲ್ಲ ಇಲಾಖೆಯಿಂದ ಕೈಗೆತ್ತಿಕೊಂಡ ಎಂಜಿನಿಯರಿಂಗ್ ಕೆಲಸಗಳ ಪರಿಶೀಲನೆ ನಡೆಸಲು ಹಾಗೂ ಇಪ್ಪತ್ತೈದು ಪರ್ಸೆಂಟ್ ಗಿಂತ ಕಡಿಮೆ ಪ್ರಗತಿ ಆಗಿರುವ ಯೋಜನೆ ಬಗ್ಗೆ ತೆಗೆದುಕೊಳ್ಳ ಬೇಕಾದ ಅಭಿಪ್ರಾಯ ತಿಳಿಸಲು ಕೇಳಲಾಗಿತ್ತು.

ಮೊದಲಿಗೆ ನಲವತ್ತೈದು ದಿನದೊಳಗೆ ವರದಿ ಸಲ್ಲಿಸಲು ಸರ್ಕಾರ ಕೇಳಿತ್ತು. ಆದರೆ ಪೋಲಾವರಂ ಯೋಜನೆ ಬಗ್ಗೆ ಪರಿಶೀಲನೆ ನಡೆಸಲು ತಜ್ಞರ ಸಮಿತಿಯನ್ನು ಜಗನ್ ಮೋಹನ್ ಕೇಳಿಕೊಂಡರು. ಆ ಕಾರಣಕ್ಕೆ ಈಗಿನ ತಜ್ಞರ ಸಮಿತಿ ವರದಿ ತಡವಾಗಿತ್ತು.

English summary
Andhra Pradesh previous Telugu Desam government in tendering, launching and executing engineering works across various departments, the expert committee reportedly submitted its recommendations to the state government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X