• search
 • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜಕೀಯ ಬದ್ಧ ವೈರಿ ಚಂದ್ರಬಾಬುರನ್ನು ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಿದ ಜಗನ್

|
   ಜಗನ್ ಕೆಲಸಕ್ಕೆ ಎಲ್ಲಡೆ ಪ್ರಶಂಸೆಗಳ ಸುರಿಮಳೆ..! | Oneindia kannada

   ಅಮರಾವತಿ, ಮೇ 28: ಆಂಧ್ರಪ್ರದೇಶದ ನಿಯೋಜಿತ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಮಂಗಳವಾರ ತಮ್ಮ ರಾಜಕೀಯ ವಿರೋಧಿ ಚಂದ್ರಬಾಬು ನಾಯ್ಡುರನ್ನು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ. ಮೇ 30ನೇ ತಾರೀಕು ವಿಜಯವಾಡದಲ್ಲಿ ಮಧ್ಯಾಹ್ನ 12.23ಕ್ಕೆ ಸಮಾರಂಭ ನಡೆಯಲಿದೆ.

   ಜಗನ್ ರೆಡ್ಡಿ ದಿಗ್ವಿಜಯದ ಹಿಂದಿನ ಶಕ್ತಿ ಪ್ರಶಾಂತ್ ಕಿಶೋರ್

   ಆಂಧ್ರಪ್ರದೇಶದ ವಿಧಾನಸಭೆಯ ಒಟ್ಟು ಸದಸ್ಯ ಬಲ 175. ಅದರಲ್ಲಿ 151 ಸ್ಥಾನಗಳಲ್ಲಿ ವೈಎಸ್ ಆರ್ ಕಾಂಗ್ರೆಸ್ ಅಭ್ಯರ್ಥಿಗಳು ಜಯ ದಾಖಲಿಸಿದ್ದು, ಲೋಕಸಭೆ ಫಲಿತಾಂಶದಲ್ಲೂ ಪಕ್ಷವು ಅದ್ಭುತವಾದ ಸಾಧನೆ ಮಾಡಿದೆ. ಮೂಲಗಳು ತಿಳಿಸಿರುವ ಪ್ರಕಾರ, ಜಗನ್ ಮೋಹನ್ ರೆಡ್ಡಿ ಅವರು ದೂರವಾಣಿ ಮೂಲಕ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ದು ಅವರನ್ನು ಆಹ್ವಾನಿಸಿದ್ದಾರೆ.

   ಜಗನ್ ಈಗಾಗಲೇ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಅವರು ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸುವುದನ್ನು ಖಾತ್ರಿ ಮಾಡಿದ್ದಾರೆ. ಆಂಧ್ರಪ್ರದೇಶದಲ್ಲಿ ಕಾರ್ಯಕ್ರಮ ಮುಗಿದ ನಂತರ ರಾಜ್ಯಪಾಲ ಇ.ಎಸ್.ಎಲ್.ನರಸಿಂಹನ್, ಚಂದ್ರಶೇಖರ್ ರಾವ್ ಹಾಗೂ ಜಗನ್ ಮೋಹನ್ ರೆಡ್ಡಿ ಮೂವರೂ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸಮಾರಂಭಕ್ಕೆ ದೆಹಲಿಗೆ ತೆರಳಲಿದ್ದಾರೆ.

   English summary
   Andhra Pradesh designated CM Jagan Mohan Reddy invited TDP leader Chandrababu Naidu to oath taking ceremony, which will be held in Vijayavada on May 30th.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X