ಆಂಧ್ರ ಪ್ರದೇಶದಲ್ಲಿ 17 ವರ್ಷದ ಬಾಲಕನಿಂದಲೇ ಅತ್ಯಾಚಾರ
ಅಮರಾವತಿ, ಜನವರಿ.08: ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗೆ ಸರ್ಕಾರಗಳು ಅದೆಷ್ಟೇ ಕಠಿಣ ಕಾನೂನುಗಳನ್ನು ಜಾರಿಗೊಳಿಸಿದರೂ ಸಾಕಾಗುತ್ತಿಲ್ಲ. ದಿನೇ ದಿನೆ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇವೆ.
ಆಂಧ್ರಪ್ರದೇಶದಲ್ಲೂ ಅಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಏನೂ ಅರಿಯದ ಪುಟ್ಟ ಕಂದಮ್ಮನ ಮೇಲೆ ಬಾಲಕನೊಬ್ಬ ಅತ್ಯಾಚಾರ ನಡೆಸಿರುವ ಘಟನೆ ಕೃಷ್ಣಾ ಜಿಲ್ಲೆಯ ಜಿ. ಕೊಂಡೂರು ಮಂಡಲದಲ್ಲಿ ನಡೆದಿದೆ.
4 ವರ್ಷ ಆರು ತಿಂಗಳ ಪುಟ್ಟ ಮಗುವಿನ ಮೇಲೆ 17 ವರ್ಷದ ಬಾಲಕ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು:
ಕಳೆದ ಜನವರಿ.06ರಂದು ನಾಲ್ಕೂವರೆ ವರ್ಷದ ಮಗುವಿನ ಮೇಲೆ ಬಾಲಕ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ 17 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನ ವಿರುದ್ಧ ಪೋಕ್ಸೋ ಕಾಯ್ದೆಯ 3 ಮತ್ತು 4ನೇ ಕಲಂನ ಅಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಭಾರತೀಯ ದಂಡ ಸಂಹಿತೆ (ಐಪಿಸಿ ಸೆಕ್ಷನ್) 376(2) ಅಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ.
ಆಂಧ್ರ ಪ್ರದೇಶದಲ್ಲಿ ಇತ್ತೀಚಿಗೆ ಈ ರೀತಿಯ ಪ್ರಕರಣಗಳು ಮೇಲಿಂದ ಮೇಲೆ ವರದಿ ಆಗುತ್ತಿವೆ. ಕಳೆದ ವಾರವಷ್ಟೇ 68 ವರ್ಷದ ವೃದ್ಧೆ ಮೇಲೆ 27 ವರ್ಷದ ಯುವಕನೊಬ್ಬ ಅತ್ಯಾಚಾರ ನಡೆಸಿದಂತಾ ಪ್ರಕರಣ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ನಡೆದಿದೆ ಎನ್ನಲಾದ ಈ ಘಟನೆಯು ಪುಟ್ಟ ಮಕ್ಕಳಲ್ಲೂ ಇಂಥ ವಿಕೃತ ಮನಸ್ಥಿತಿ ಬೆಳೆಯುತ್ತಿದೆಯಾ ಎಂಬ ಆತಂಕವನ್ನು ಹೆಚ್ಚಿಸುತ್ತಿದೆ.












Click it and Unblock the Notifications