ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರದಲ್ಲಿ ರಸ್ತೆ ಸಂಪರ್ಕಕ್ಕಾಗಿ 5 ಲಕ್ಷ ಕೋಟಿ ವೆಚ್ಚ: ಗಡ್ಕರಿ

|
Google Oneindia Kannada News

ಅಮರಾವತಿ, ಸೆಪ್ಟೆಂಬರ್‌ 23: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಆಂಧ್ರಪ್ರದೇಶದಲ್ಲಿ 5 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, 2024 ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ.

ರಾಜಾಜಿನಗರದ ಕಲಾ ಕಾಲೇಜಿನ ಆವರಣದಲ್ಲಿ 3,000 ಕೋಟಿ ರೂಪಾಯಿ ವೆಚ್ಚದಲ್ಲಿ 129 ಕಿಲೋಮೀಟರ್ 3 ರಾಷ್ಟ್ರೀಯ ಹೆದ್ದಾರಿ ರಸ್ತೆಗಳು ಮತ್ತು 5 ಮೇಲ್ಸೇತುವೆಗಳಿಗೆ ವರ್ಚುವಲ್ ರೀತಿಯಲ್ಲಿ ಶಂಕುಸ್ಥಾಪನೆ ಮಾಡಿದರು. ಬಳಿಕ ವಿಕಲಚೇತನರಿಗೆ ಗಾಲಿ ಕುರ್ಚಿಗಳನ್ನು ವಿತರಿಸಿದರು. ರಾಜ್ಯದಲ್ಲಿ ಈಗಾಗಲೇ ಕೆಲವು ರಸ್ತೆ ಯೋಜನೆಗಳಿಗೆ ₹2 ಲಕ್ಷ ಕೋಟಿ ವೆಚ್ಚ ಮಾಡಲಾಗಿದೆ. ₹ 1 ಲಕ್ಷ ಕೋಟಿ ವೆಚ್ಚದ ರಸ್ತೆ ಯೋಜನೆಗಳು ನಡೆಯುತ್ತಿವೆ.

6 ಏರ್‌ಬ್ಯಾಗ್‌ ನಿಯಮ, ರಸ್ತೆ ಅಪಘಾತಗಳಿಗೆ ದಿನಕ್ಕೆ 426 ಜನ ಸಾವು: ಗಡ್ಕರಿ ಉತ್ತರವೇನು?6 ಏರ್‌ಬ್ಯಾಗ್‌ ನಿಯಮ, ರಸ್ತೆ ಅಪಘಾತಗಳಿಗೆ ದಿನಕ್ಕೆ 426 ಜನ ಸಾವು: ಗಡ್ಕರಿ ಉತ್ತರವೇನು?

ಈ ಯೋಜನೆಗಳು ಕಾಕಿನಾಡ ವಿಶೇಷ ಆರ್ಥಿಕ ವಲಯ, ಎಸ್‌ಇಝಡ್‌ ಬಂದರು, ಮೀನುಗಾರಿಕೆ ಬಂದರು ಮತ್ತು ಆಂಕಾರೇಜ್ ಬಂದರುಗಳಿಗೆ ಗ್ರೀನ್‌ಫೀಲ್ಡ್ ರಸ್ತೆ ಸಂಪರ್ಕವನ್ನು ಒದಗಿಸಲು ಮತ್ತು ಕಾಕಿನಾಡ ಬಂದರಿನ ಮೂಲಕ ಅಕ್ಕಿ, ಸಮುದ್ರಾಹಾರ, ತೈಲ, ಕಬ್ಬಿಣದ ಅದಿರು, ಜೈವಿಕ ಇಂಧನ ಮತ್ತು ಗ್ರಾನೈಟ್ ರಫ್ತುಗಳನ್ನು ಸುಗಮಗೊಳಿಸಲು ಉದ್ದೇಶಿಸಲಾಗಿದೆ. ಕೈಕರಂ, ಮೊರಂಪುಡಿ, ಉಂಡರಾಜವರಂ, ತೇತಲಿ ಮತ್ತು ಜೊನ್ನಡದಲ್ಲಿ 215 ಕೋಟಿ ರೂಪಾಯಿ ವೆಚ್ಚದಲ್ಲಿ ಐದು ಹೊಸ ಮೇಲ್ಸೇತುವೆಗಳನ್ನು ನಿರ್ಮಿಸಲಾಗುವುದು ಎಂದು ಅವರು ಹೇಳಿದರು.

ವಿಜಯವಾಡ ಇಬ್ರಾಹಿಂಪಟ್ಟಣಕ್ಕೆ ರಸ್ತೆ

ವಿಜಯವಾಡ ಇಬ್ರಾಹಿಂಪಟ್ಟಣಕ್ಕೆ ರಸ್ತೆ

ಗುಂಟೂರು- ಬಾಪಟ್ಲ, ಬೆಂಗಳೂರು-ವಿಜಯವಾಡ, ವಿನುಕೊಂಡ-ಗುಂಟೂರು, ವೇಮಗಿರಿ-ಸಾಮರ್ಲಕೋಟ ಕೆನಾಲ್ ರಸ್ತೆ, ರಾಜಮಂಡ್ರಿ-ಕಾಕಿನಾಡ, ಹೈದರಾಬಾದ್‌ನಿಂದ ನಾಗಾರ್ಜುನ ಸಾಗರ, ಮಾಚರ್ಲ, ಅಮರಾವತಿ ಮೂಲಕ ವಿಜಯವಾಡ ಇಬ್ರಾಹಿಂಪಟ್ಟಣಕ್ಕೆ ರಸ್ತೆಗಳನ್ನು ಮಂಜೂರು ಮಾಡಲಾಗುತ್ತಿದೆ. ಬೆಂಗಳೂರು-ವಿಜಯವಾಡ, ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೈವೇ, ರಾಯ್‌ಪುರ-ವಿಶಾಖಪಟ್ಟಣಂ, ಛತ್ತೀಸ್‌ಗಢ-ಆಂಧ್ರಪ್ರದೇಶ ಗ್ರೀನ್‌ಫೀಲ್ಡ್ ಕಾರಿಡಾರ್ ಅಭಿವೃದ್ಧಿಗೊಳ್ಳಲಿದೆ ಎಂದು ಹೇಳಿದರು.

ಅಕ್ಷಯ್ ನಟನೆಯ ಜಾಹೀರಾತು ಹಂಚಿಕೊಂಡ ನಿತಿನ್ ಗಡ್ಕರಿ, ಟ್ವಿಟ್ಟರ್‌ನಲ್ಲಿ ಆಕ್ರೋಶ!ಅಕ್ಷಯ್ ನಟನೆಯ ಜಾಹೀರಾತು ಹಂಚಿಕೊಂಡ ನಿತಿನ್ ಗಡ್ಕರಿ, ಟ್ವಿಟ್ಟರ್‌ನಲ್ಲಿ ಆಕ್ರೋಶ!

ವಿಜಯವಾಡ ಪೂರ್ವ ಬೈಪಾಸ್ ರಸ್ತೆ ಮಂಜೂರು

ವಿಜಯವಾಡ ಪೂರ್ವ ಬೈಪಾಸ್ ರಸ್ತೆ ಮಂಜೂರು

ಭುವನೇಶ್ವರದಿಂದ ಭೋಗಾಪುರಂವರೆಗೆ 6 ಪಥಗಳ ಹೆದ್ದಾರಿ ನಿರ್ಮಾಣವಾಗಲಿದೆ. ವಿಜಯವಾಡ ಪೂರ್ವ ಬೈಪಾಸ್ ರಸ್ತೆ ಮಂಜೂರು ಮಾಡಲಾಗುವುದು. ಈ ರಸ್ತೆಗಳ ಮೂಲಕ ಕೈಗಾರಿಕಾ ಪ್ರಗತಿ ಸಾಧ್ಯವಾಗಲಿದೆ ಎಂದರು. ಹೈದರಾಬಾದ್ ಮತ್ತು ವಿಶಾಖದಿಂದ ಕಾಕಿನಾಡ ಸೆಜ್ ಬಂದರು, ಫಿಶಿಂಗ್ ಹಾರ್ಬರ್ ಮತ್ತು ಕಾಕಿನಾಡ ಆಂಕಾರೇಜ್ ಬಂದರುಗಳಿಗೆ ಗ್ರೀನ್‌ಫೀಲ್ಡ್ ರಸ್ತೆ ಸಂಪರ್ಕವನ್ನು ಸಹ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ಜೈವಿಕ ಇಂಧನ, ಗ್ರಾನೈಟ್ ಸಾಗಣೆ ಸುಗಮ

ಜೈವಿಕ ಇಂಧನ, ಗ್ರಾನೈಟ್ ಸಾಗಣೆ ಸುಗಮ

ಇದು ಅಕ್ಕಿ, ಸಮುದ್ರಾಹಾರ, ತೈಲ ಮತ್ತು ಕಬ್ಬಿಣದ ರಫ್ತಿಗೆ ಸಹಾಯ ಮಾಡುತ್ತದೆ. ಕಾಕಿನಾಡ ಬಂದರಿನ ಮೂಲಕ ಅದಿರು, ಜೈವಿಕ ಇಂಧನ ಮತ್ತು ಗ್ರಾನೈಟ್ ಸಾಗಣೆಯನ್ನು ಸುಗಮಗೊಳಿಸಲಾಗುವುದು ಮತ್ತು ಅರಕು ಕಣಿವೆ, ಲಂಬಸಿಂಗಿ ಮತ್ತು ಬೊರ್ರಾ ಗುಹೆಗಳಂತಹ ಬುಡಕಟ್ಟು ಮತ್ತು ಪ್ರವಾಸಿ ಪ್ರದೇಶಗಳಿಗೆ ರಸ್ತೆ ಸಂಪರ್ಕವನ್ನು ಒದಗಿಸಲಾಗುವುದು. ಒಮ್ಮೆ ಅಭಿವೃದ್ಧಿಪಡಿಸಿದ ಯೋಜನೆಗಳು ಕಾಕಿನಾಡ ಮತ್ತು ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಗಳ ಮೂಲಕ ತ್ವರಿತ ಅಂತರ-ರಾಜ್ಯ ಸಂಪರ್ಕವನ್ನು ಒದಗಿಸುತ್ತವೆ ಎಂದು ಅವರು ಹೇಳಿದರು.

ಕಡಿಯಂ ನರ್ಸರಿಗಳಿಗೆ ಭೇಟಿ

ಕಡಿಯಂ ನರ್ಸರಿಗಳಿಗೆ ಭೇಟಿ

ವಿಶ್ವ ದರ್ಜೆಯ ಮೂಲಸೌಕರ್ಯಗಳ ಮೂಲಕ ಆಂಧ್ರಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು. ಎಪಿ ರಸ್ತೆ ಮತ್ತು ಕಟ್ಟಡಗಳ ಸಚಿವ ಡಿ ರಾಜಾ, ಸಂಸದರಾದ ವಿ ಗೀತಾ, ಎಂ ಭರತ್, ಅನುರಾಧ, ಜಿ ಮಾಧವಿ, ಪಿಲ್ಲಿ ಸುಭಾಷ್ ಚಂದ್ರ ಬೋಸ್, ವೈಎಸ್‌ಆರ್‌ಸಿಪಿ ಶಾಸಕರು, ರಸ್ತೆಗಳು ಮತ್ತು ಕಟ್ಟಡಗಳ ಪ್ರಧಾನ ಕಾರ್ಯದರ್ಶಿ ಎಂಟಿ ಕೃಷ್ಣಬಾಬು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಸಿದ್ಧ ಕಡಿಯಂ ನರ್ಸರಿಗಳಿಗೆ ಭೇಟಿ ನೀಡಿದ ಕೇಂದ್ರ ಸಚಿವರು ರೈತರೊಂದಿಗೆ ಸಂವಾದ ನಡೆಸಿ ಅಲ್ಲಿ ಸಸಿ ನೆಟ್ಟರು.

English summary
Union Road Transport and Highways Minister Nitin Gadkari has said that national highways are being developed in Andhra Pradesh at a cost of Rs 5 lakh crore and will be completed by 2024.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X