ಆಂಧ್ರದಲ್ಲಿ ಸತತ ಮೂರನೇ ದಿನವೂ 10 ಸಾವಿರ ಕೊರೊನಾ ಕೇಸ್

ಅಮರಾವತಿ, ಜುಲೈ 31: ಆಂಧ್ರ ಪ್ರದೇಶದಲ್ಲಿ ಸತತ ಮೂರನೇ ದಿನವೂ 10 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇಂದಿನ ವರದಿ ಬಳಿಕ ರಾಜ್ಯದಲ್ಲಿ ಒಟ್ಟು ಕೊವಿಡ್ ಸೋಂಕಿತರ ಸಂಖ್ಯೆ 1,40,933ಕ್ಕೆ ಏರಿಕೆಯಾಗಿದೆ.

ಇಂದು ಒಂದೇ ದಿನ ಆಂಧ್ರದಲ್ಲಿ 10,376 ಜನರಿಗೆ ಕೊವಿಡ್ ತಗುಲಿರುವುದು ದೃಢವಾಗಿದೆ. ನಿನ್ನೆ 10167 ಕೇಸ್ ದಾಖಲಾಗಿತ್ತು, ಜುಲೈ 29ರಂದು 10093 ಮಂದಿಗೆ ಕೊವಿಡ್ ಅಂಟಿಕೊಂಡಿತ್ತು.

ಪ್ರಸ್ತುತ, ದಿನವೊಂದರಲ್ಲಿ ಹತ್ತು ಸಾವಿರಕ್ಕೂ ಅಧಿಕ ಸೋಂಕಿತರು ವರದಿಯಾಗುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶ ಮಾತ್ರ ಇದೆ.

10,376 New Covid19 Cases Reported In Andhra Pradesh In Last 24 Hours

ಇಂದಿನ ವರದಿ ಬಳಿಕ ಆಂಧ್ರ ಪ್ರದೇಶದಲ್ಲಿ ಜಿಲ್ಲೆವಾರು ಅಂಕಿ ಅಂಶ ಗಮನಿಸುವುದಾದರೇ ಪೂರ್ವ ಗೋದಾವರಿಯಲ್ಲಿ 1215 ಕೇಸ್ ದಾಖಲಾಗಿದೆ. ಕರ್ನೂಲ್‌ನಲ್ಲಿ 1124 ಪ್ರಕರಣ, ಅನಂತಪುರದಲ್ಲಿ 1387 ಕೇಸ್, ಗುಂಟೂರು 906 ಕೇಸ್, ಪಶ್ಚಿಮ ಗೋದಾವರಿ 956 ಕೇಸ್, ವಿಶಾಖಪಟ್ಟಣಂ 983 ಪ್ರಕರಣ, ಎಸ್‌ಪಿಎಸ್ ನೆಲ್ಲೂರು 861 ಕೇಸ್ ಹಾಗೂ ಚಿತ್ತೂರು 789 ಮಂದಿಗೆ ಸೋಂಕು ತಗುಲಿದೆ.

ಇದುವರೆಗೂ ಆಂಧ್ರದಲ್ಲಿ 63,864 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 75,720 ಪ್ರಕರಣಗಳು ಸಕ್ರಿಯವಾಗಿದೆ. ಆಂಧ್ರ ಪ್ರದೇಶದಲ್ಲಿ ಒಟ್ಟು 1349 ಜನರು ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಪ್ರಕಟಣೆ ಬಿಡುಗಡೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+