• search
 • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೆಲವು ನಾಯಕರ ಹೇಳಿಕೆಗೆ ಪಾಕಿಸ್ತಾನ ಚಪ್ಪಾಳೆ ತಟ್ಟುತ್ತಿದೆ: ಮೋದಿ

|
   ನಮ್ಮನ್ನು ನೋಡಿ ಪಾಕಿಸ್ತಾನ ಹೀಯಾಳಿಸುತ್ತಿದೆ..! | Oneindia Kannada

   ಅಹ್ಮದಾಬಾದ್, ಮಾರ್ಚ್ 04: ಎರಡು ದಿನಗಳ ಭೇಟಿಗೆ ಇಂದು ತಮ್ಮ ತವರು ರಾಜ್ಯ ಗುಜರಾತ್‌ಗೆ ತೆರಳಿರುವ ಮೋದಿ ಅವರು ಇಲ್ಲಿ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ.

   ಬೆಳಿಗ್ಗೆ ಜಾಮ್‌ನಗರ್‌ ನಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ ಅವರು, ಸಂಜೆ ಅಹ್ಮದಾಬಾದ್‌ನಲ್ಲಿ ಮೊದಲ ಹಂತದ ಮೆಟ್ರೋ ಯೋಜನೆಗೆ ಚಾಲನೆ ನೀಡಿದರು.

   ಇಷ್ಟೆ ಅಲ್ಲದೆ ಪ್ರಧಾನಮಂತ್ರಿ ಶ್ರಮ ಯೋಗಿ ಮಾನಧನ ಯೋಜನೆಗೂ ಅವರು ಚಾಲನೆ ನೀಡಿದರು. ನಂತರ 1000 ಕೋಟಿ ವೆಚ್ಚದ ಉಮಿಯ ಧಾಮ್ ದೇವಸ್ಥಾನಕ್ಕೆ ಅವರು ಚಾಲನೆ ನೀಡಿದರು. ಅವರು ಅಹ್ಮದಾಬಾದ್ ಸರ್ಕಾರಿ ಆಸ್ಪತ್ರೆಗೂ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರು.

   ರಾಹುಲ್ ಗಾಂಧಿಗೆ ನರೇಂದ್ರ ಮೋದಿಯಿಂದ ಕಾಮನ್ ಸೆನ್ಸ್ ಪಾಠ!

   ನಂತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ, 2008 ರ ಬಾಂಬ್ ಘಟನೆಯನ್ನು ನೆನೆದು, ಆ ಭಯೋತ್ಪಾದಕರು ಪಾತಾಳದಲ್ಲಿ ಅಡಗಿದ್ದರೂ ಅವರನ್ನು ಹೊರಗೆಳೆಯುತ್ತೇನೆ ಎಂದು ಹೇಳಿದರು.

   'ಪಾಕಿಸ್ತಾನದ ಜನ ಚಪ್ಪಾಳೆ ಹೊಡೆಯುತ್ತಿದ್ದಾರೆ'

   ಪಾಕಿಸ್ತಾನದ ವಿಷಯದಲ್ಲಿ ವಿಪಕ್ಷಗಳ ಮುಖಂಡರು ನೀಡುತ್ತಿರುವ ಹೇಳಿಕೆಗಳನ್ನು ಖಂಡಿಸಿದ ಮೋದಿ, ಇಲ್ಲಿನ ಕೆಲವು ನಾಯಕರು ನೀಡುತ್ತಿರುವ ಹೇಳಿಕೆಗೆ ಪಾಕಿಸ್ತಾನ ಚಪ್ಪಾಳೆ ಹೊಡೆಯುತ್ತಿದೆ. ಅಲ್ಲಿನ ಟಿವಿ ಮಾಧ್ಯಮಗಳಲ್ಲಿ, ಪತ್ರಿಕೆಗಳ ಮುಖಪುಟದಲ್ಲಿ ಈ ನಾಯಕರು ನೀಡುವ ಹೇಳಿಕೆಗಳು ರಾರಾಜಿಸುತ್ತಿವೆ ಎಂದು ಅವರು ಹೇಳಿದರು.

   ನಮ್ಮ ಸೇನೆ ಹೇಳಿದನ್ನೂ ನೀವು ನಂಬುವುದಿಲ್ಲವೇ? ಮೋದಿ ಪ್ರಶ್ನೆ

   'ಸೈನಿಕರ ಶೌರ್ಯಕ್ಕೆ ಅವಮಾನ ಮಾಡುತ್ತಿದ್ದಾರೆ'

   'ಸೈನಿಕರ ಶೌರ್ಯಕ್ಕೆ ಅವಮಾನ ಮಾಡುತ್ತಿದ್ದಾರೆ'

   ನಮ್ಮ ಸೈನಿಕರು ಶೌರ್ಯ ಪ್ರದರ್ಶಿಸಿ ಹೋರಾಟ ಮಾಡಿದ್ದಾರೆ ಆದರೆ ನಮ್ಮ ದೇಶದ ಕೆಲವು ನಾಯಕರು ಪಾಕಿಸ್ತಾನದ ಪರ ನಿಂತು ನಮ್ಮ ಸೈನಿಕರನ್ನು ಅವಮಾನಿಸುತ್ತಿದ್ದಾರೆ ಎಂದು ಮೋದಿ ಬೇಸರ ವ್ಯಕ್ತಪಡಿಸಿದರು.

   ನಾವು ಅಮೇಥಿ ಗೆದ್ದಿಲ್ಲ, ಇಲ್ಲಿಯ ಜನರ ಹೃದಯ ಗೆದ್ದಿದ್ದೇವೆ : ನರೇಂದ್ರ ಮೋದಿ

   ಭಯೋತ್ಪಾದನೆ ವಿರುದ್ಧ ತಾಳ್ಮೆ ಇಲ್ಲ: ಮೋದಿ

   ಭಯೋತ್ಪಾದನೆ ವಿರುದ್ಧ ತಾಳ್ಮೆ ಇಲ್ಲ: ಮೋದಿ

   ಭಯೋತ್ಪಾದನೆಗೆ ಪ್ರತಿಕ್ರಿಯೆ ನೀಡುವ ವಿಷಯದಲ್ಲಿ ನಾನು ತಾಳ್ಮೆ ಪ್ರದರ್ಶಿಸಲಾರೆ ಎಂದು ಹೇಳಿದ ಮೋದಿ, ಪ್ರತಿಯೊಂದು ಘಟನೆಗೂ ಪ್ರತೀಕಾರ ತೀರಿಸುವುದು ನನ್ನ ಸ್ವಭಾವ ಎಂದು ಮೋದಿ ಆರ್ಭಟಿಸಿದರು.

   ಭಯೋತ್ಪಾದನೆ ವಿರುದ್ಧ ಯುದ್ಧ: ಮೋದಿ

   ಭಯೋತ್ಪಾದನೆ ವಿರುದ್ಧ ಯುದ್ಧ: ಮೋದಿ

   ನಾವು ದೇಶದ ಹಿತಕ್ಕಾಗಿ ಭಯೋತ್ಪಾದನೆ ವಿರುದ್ಧ ಯುದ್ಧವನ್ನು ಪ್ರಾರಂಭಿಸಿದ್ದೇವೆ. ದೇಶದ ಹಿತವೇ ನಮ್ಮ ಪ್ರಾಥಮಿಕ ಆದ್ಯತೆ ಎಂದು ಮೋದಿ ಹೇಳಿದರು.

   ಮತ್ತೊಮ್ಮೆ ಪ್ರಧಾನಿ ಮಾಡಿ ಇನ್ನೂ ಕೆಲಸ ಮಾಡುವುದಿದೆ: ಮೋದಿ

   ಮತ್ತೊಮ್ಮೆ ಪ್ರಧಾನಿ ಮಾಡಿ ಇನ್ನೂ ಕೆಲಸ ಮಾಡುವುದಿದೆ: ಮೋದಿ

   ನಾವು ಈ ಬಾರಿ ಮಧ್ಯಂತರ ಬಜೆಟ್ ಮಂಡಿಸಿದ್ದೇವೆ, ನೀವು ನನ್ನನ್ನು ಮತ್ತೊಮ್ಮೆ ಪ್ರಧಾನಿ ಮಾಡಿದರೆ ಪೂರ್ಣ ಬಜೆಟ್ ಮಂಡಿಸುತ್ತೇವೆ ಆಗ ಇನ್ನೂ ಹೆಚ್ಚಿನ ಯೋಜನೆಗಳನ್ನು ನಿಮಗಾಗಿ ನೀಡುತ್ತೇವೆ ಎಂದು ಅವರು ಭರವಸೆ ನೀಡಿದರು.

   English summary
   Narendra Modi visited Gujarat for two days. Today he inaugurated several development programs. He addressed rally and said we started war against Terrorism.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X