ವಿಡಿಯೋ: ಏಕತಾ ಪ್ರತಿಮೆ ಅನಾವರಣದ ಅಮೋಘ ಕ್ಷಣಗಳು
Recommended Video

ಅಹ್ಮದಾಬಾದ್, ಅಕ್ಟೋಬರ್ 31: ನರ್ಮದಾ ನದಿಗೆ ಕಟ್ಟಲಾದ ಸರ್ದಾರ್ ಸರೋವರ್ ಅಣೆಕಟ್ಟಿನ ಮೇಲೆ ಮೀಟರ್ ಎತ್ತರದಲ್ಲಿ ತಲೆ ಎತ್ತಿನಿಂತ ಆ ಭವ್ಯ ಮೂರ್ತಿಯನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲದು!
ಸ್ವಾತಂತ್ರ್ಯಾನಂತರ ಭಾರತದಲ್ಲಿ ಹರಿದುಹಂಚಿ ಹೋಗಿದ್ದ ರಾಜಮನೆತನಗಳನ್ನು ಒಗ್ಗೂಡಿಸಿ, ಅವರನ್ನೆಲ್ಲ ಭಾರತ ಎಂಬ ಒಂದೇ ಸೂರಿನಡಿ ತಂದ ಕೀರ್ತಿ ಸರ್ದಾರ್ ವಲ್ಲಭಬಾಯಿ ಪಟೇಲ್(31 ಅಕ್ಟೋಬರ್ 1875 -15 ಡಿಸೆಂಬರ್ 1950) ಅವರಿಗೆ ಸಲ್ಲುತ್ತದೆ. ಅವರ 143 ನೇ ಜನ್ಮದಿನೋತ್ಸವದಂದು ಏಕತಾ ಪ್ರತಿಮೆ ಅನಾವರಣಗೊಂಡಿದೆ.
ಇದು ಐತಿಹಾಸಿಕ ಕ್ಷಣ. ಏಕತೆಯ ಪ್ರತಿಮೆಯನ್ನು ಅನಾವರಣಗೊಳಿಸುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಅವಿಸ್ಮರಣೀಯ ಕ್ಷಣದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕಣ್ಮನ ತಣಿಸುತ್ತಿದೆ.
|
ಭಾರತದ ಪ್ರಮುಖ ಪ್ರವಾಸೀ ತಾಣವಾಗುತ್ತಾ?
ಉಕ್ಕಿನ ಮನುಷ್ಯರೆಂದೇ ಖ್ಯಾತರಾದ ಸರ್ದಾರ್ ವಲ್ಲಭಬಾಯ್ ಪಟೇಲ್‌ರ ಈ ಬೃಹತ್ ಪ್ರತಿಮೆಯು 182 ಮೀಟರ್ (ಸುಮಾರು 597 ಅಡಿ) ಎತ್ತರವಿದೆ. ದಕ್ಷಿಣ ಗುಜರಾತ್‌ನಲ್ಲಿ ನರ್ಮದಾ ನದಿಗೆ ಕಟ್ಟಲಾಗಿರುವ ಸರ್ದಾರ್ ಸರೋವರ್ ಅಣೆಕಟ್ಟಿನ ಎದುರಿನಲ್ಲಿ ಇದನ್ನು ನಿರ್ಮಿಸಲಾಗಿರುವುದರಿಂದ ಇದು ಖಂಡಿತವಾಗಿಯೂ ಭಾರತದ ಪ್ರಮುಖ ಪ್ರವಾಸೀ ತಾಣವಾಗಿ ಹೆಸರಾಗುವುದು ಖಂಡಿತ ಎನ್ನಿಸಿದೆ.
| Array |
ಅವಿಸ್ಮರಣೀಯ ಘಳಿಗೆ
ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪಟೇಲ್ ಅವರ ಪ್ರತಿಮೆಯನ್ನು ಇಂದು ಅನಾವರಣಗೊಳಿಸಲಾಗಿದ್ದು, ಈ ಅವಿಸ್ಮರಣೀಯ ಘಳಿಗೆಗೆ ನೂರಾರು ಗಣ್ಯರು ಸಾಕ್ಷಿಯಾದರು. ಈ ದಿನವನ್ನು ರಾಷ್ಟ್ರೀಯ ಏಕತಾ ದಿವಸ ಎಂದು ಇಡೀ ದೇಶದಾದ್ಯಂತ ಆಚರಿಸಲಾಗುತ್ತಿದೆ.
| Array |
ಗಿರ್ ಅರಣ್ಯಕ್ಕೂ ವೀಸಾ ಬೇಕಾಗುತ್ತಿತ್ತು!
ಸರ್ದಾರ್ ಪಟೇಲ್ ಅವರು ಅಂದು ಭಾರತದ ವಿವಿಧ ಪ್ರಾಂತಗಳನ್ನು ಒಗ್ಗೂಡಿಸುವ ಕ್ರಾಂತಿಕಾರಿ ತೀರ್ಮಾನ ಕೈಗೊಳ್ಳದೆ ಇದ್ದಿದ್ದರೆ, ಇಂದು ಗಿರ್ ಅರಣ್ಯದಲ್ಲಿ ಸಿಂಹಗಳನ್ನು ನೋಡುವುದಕ್ಕೂ, ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಮಾಡುವುದಕ್ಕೂ, ಹೈದರಾಬಾದಿನ ಚಾರ್ ಮಿನಾರ್ ಗೆ ತೆರಳುವುದಕ್ಕೂ ನಮಗೆ ವೀಸಾ ಬೇಕಾಗುತ್ತಿತ್ತು ಎಂಬ ನರೇಂದ್ರ ಮೋದಿಯವರ ಮಾತು ಸತ್ಯವೂ ಹೌದು.
| Array |
ಸರ್ದಾರ್ ಪಟೇಲ್ ಅವರ ಬಗ್ಗೆ
ಗುಜರಾತಿನ ಕರಮ್ ಸಂದ್ ನಲ್ಲಿ 1875ರ ಅಕ್ಟೋಬರ್ 31ರಂದು ಜನಿಸಿದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಕಾನೂನು ಪದವಿ ಪಡೆದಿದ್ದವರು. ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯರಾದ ಅವರು, ಸ್ವಾತಂತ್ರ್ಯಾನಂತರ ಭಾರತದ ಮೊದಲ ಗೃಹಮಂತ್ರಿಯೂ ಆಗಿದ್ದರು.












Click it and Unblock the Notifications