ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ದಾರ್ ಪಟೇಲ್ ಸ್ಮಾರಕ ವೀಕ್ಷಣೆಗೆ ಹೆಲಿಕಾಪ್ಟರ್ ಸೌಲಭ್ಯ ಆರಂಭ

|
Google Oneindia Kannada News

ಅಹ್ಮದಾಬಾದ್ (ಗುಜರಾತ್), ಡಿಸೆಂಬರ್ 24: ಗುಜರಾತ್ ನ ಕೇವದಿಯಾದಲ್ಲಿರುವ ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ರ ಅತಿ ದೊಡ್ಡ ಪ್ರತಿಮೆಯನ್ನು ನಾನಾ ಆಯಾಮಗಳಿಂದ ವೀಕ್ಷಿಸಲು ಅನುಕೂಲ ಆಗುವಂತೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿದೆ. ಹತ್ತು ನಿಮಿಷಗಳ ಈ ಹೆಲಿಕಾಪ್ಟರ್ ರೈಡ್ ಗೆ ಭಾನುವಾರ ಚಾಲನೆ ಸಿಕ್ಕಿದೆ.

ಅಮೆರಿಕದ ಸ್ವಾತಂತ್ರ್ಯ ಪ್ರತಿಮೆಗಿಂತ ಎರಡು ಪಟ್ಟು ದೊಡ್ಡದಾದ ಈ ಪ್ರತಿಮೆಯ ವೀಕ್ಷಣೆಯನ್ನು ಹೆಲಿಕಾಪ್ಟರ್ ಸೇವೆ ಆರಂಭವಾದ ನಂತರ ಐವತ್ತೊಂಬತ್ತು ಸಂದರ್ಶಕರು ಹಾಗೂ ಮಾಧ್ಯಮದ ಆರು ಮಂದಿ ಪ್ರತಿನಿಧಿಗಳು ಬಳಸಿದ್ದಾರೆ. ಹತ್ತು ನಿಮಿಷದ ವಿಹಾರಕ್ಕಾಗಿ 2900 ರುಪಾಯಿ ದರ ನಿಗದಿ ಮಾಡಲಾಗಿದೆ.

ಜಗತ್ತಿನ ಅತಿ ಎತ್ತರದ ಸರ್ದಾರ್ ಪಟೇಲ್ ಪ್ರತಿಮೆಯಲ್ಲಿ ಏನೇನಿದೆ? ಮಾಹಿತಿ ಇಲ್ಲಿದೆ...ಜಗತ್ತಿನ ಅತಿ ಎತ್ತರದ ಸರ್ದಾರ್ ಪಟೇಲ್ ಪ್ರತಿಮೆಯಲ್ಲಿ ಏನೇನಿದೆ? ಮಾಹಿತಿ ಇಲ್ಲಿದೆ...

ಜಗತ್ತಿನ ಅತಿದೊಡ್ಡ ಪ್ರತಿಮೆ ಎಂಬ ಅಗ್ಗಳಿಕೆ ಇರುವ ಈ ಪುತ್ಥಳಿಯನ್ನು ಕಳೆದ ಅಕ್ಟೋಬರ್ 31ನೇ ತಾರೀಕು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದರು. ಆ ನಂತರ ಈ ಸ್ಥಳಕ್ಕೆ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಉದ್ಘಾಟನೆಯಾದ ಮೊದಲ ಹನ್ನೊಂದು ದಿನವೇ ಒಂದು ಲಕ್ಷದ ಮೂವತ್ತು ಸಾವಿರ ಮಂದಿ ಇಲ್ಲಿಗೆ ಭೇಟಿ ನೀಡಿದ್ದರು.

Statue of unity now gets a chopper ride, it costs 2900 for 10 minutes

'ಉಕ್ಕಿನ ಮನುಷ್ಯ' ಸರ್ದಾರ್ ಪಟೇಲ್ ಪ್ರತಿಮೆ ನಿರ್ಮಿಸಿದ ಶಿಲ್ಪಿ ಯಾರು?'ಉಕ್ಕಿನ ಮನುಷ್ಯ' ಸರ್ದಾರ್ ಪಟೇಲ್ ಪ್ರತಿಮೆ ನಿರ್ಮಿಸಿದ ಶಿಲ್ಪಿ ಯಾರು?

ಗುಜರಾತ್ ನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಈ ಪುತ್ಥಳಿ ಕೂಡ ಒಂದಾಗಿದೆ. ಈ ಏಕತಾ ವಿಗ್ರಹದ ಬಳಿ ಎಲ್ಲ ರಾಜ್ಯಗಳವರು ಅತಿಥಿ ಗೃಹಗಳನ್ನು ನಿರ್ಮಿಸುವಂತೆ ಆಯಾ ರಾಜ್ಯದ ಮುಖ್ಯಮಂತ್ರಿಹಳಿಗೆ ಗುಜರಾತ್ ಸರಕಾರ ಪತ್ರ ಬರೆದಿದೆ. 3 ಸಾವಿರ ಕೋಟಿ ವೆಚ್ಚದಲ್ಲಿ ಈ ಸ್ಮಾರಕ ನಿರ್ಮಾಣವಾಗಿದೆ. ಗುಜರಾತ್ ಸರಕಾರದ ಪ್ರಕಾರ ನಿತ್ಯವೂ ಇಲ್ಲಿಗೆ ಸರಾಸರಿ 15 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಾರೆ.

English summary
Tourists visiting the Statue of Unity in Gujarat's Kevadia, built as a tribute to Sardar Vallabhbhai Patel, can now enjoy a helicopter ride. A new 10-minute helicopter ride was launched on Sunday at the giant statue. Fifty nine visitors and six media persons have used the service since then. A 10-minute ride costs Rs. 2,900.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X