ದೀಪಾವಳಿಗಾಗಿ ಉದ್ಯೋಗಿಗಳಿಗೆ 600 ಕಾರ್ ಗಿಫ್ಟ್ ನೀಡಿದ ಉದ್ಯಮಿ!

ಸೂರತ್, ಅಕ್ಟೋಬರ್ 25: ಸೂರತ್ ಮೂಲದ ಉದ್ಯಮಿ ಸಾವಜಿ ಧೊಲಾಕಿಯಾ ಹೆಸರು ಎಲ್ಲರಿಗೂ ಚಿರಪರಿಚಿತ. ವಜ್ರ ವ್ಯಾಪಾರಿಯಾದ ಸಾವಜಿ ತನ್ನ ಉದ್ಯೋಗಿಗಳಿಗೆ ಪ್ರತಿವರ್ಷದ ದೀಪಾವಳಿಯಲ್ಲೂ ಬೆಲೆಬಾಳುವ ಉಡುಗೊರೆಯನ್ನು ಕೊಡುವ ಪರಿಪಾಠ ಇಟ್ಟುಕೊಂಡಿದ್ದಾರೆ.

ಸೈಟು, ಮನೆ, ಕಾರು... ಹೀಗೇ ಉದ್ಯೋಗಿಗಳು ನಿರೀಕ್ಷೆಯನ್ನೇ ಮಾಡಿರದಂಥ ಗಿಫ್ಟ್ ಗಳನ್ನು ನೀಡುವ ಸಾವಜಿ, ಈ ವರ್ಷದ ದೀಪಾವಳಿಗೆ ತಮ್ಮ 600 ಉದ್ಯೋಗಿಗಳಿಗೆ ಕಾರುಗಳನ್ನು ನೀಡಲು ನಿರ್ಧರಿಸಿದ್ದಾರೆ.

ಒಟ್ಟು 1500 ಉದ್ಯೋಗಿಗಳಲ್ಲಿ 900 ಜನರ ಹೆಸರಿನಲ್ಲಿ ಸ್ಥಿರ ಠೇವಣಿ ಪ್ರಮಾಣಪತ್ರ ನೀಡಲಿದ್ದು, 600 ಜನರಿಗೆ ಕಾರನ್ನು ನೀದಲಾಗುವುದು ಎಂದು ಅವರ ಹೇಳಿದ್ದಾರೆ. ಕಳೆದ ಬಾರಿಯ ದೀಪಾವಳಿಯಲ್ಲೂ ಉದ್ಯೋಗಿಗಳಿಗೆ ದುಬಾರಿ ಉಡುಗೊರೆಗಳನ್ನು ನೀಡಿ ಅವರು ಸುದ್ದಿಯಾಗಿದ್ದರು.

ಯಾರು ಈ ಧೋಲಾಕಿಯಾ?

ಯಾರು ಈ ಧೋಲಾಕಿಯಾ?

ಗುಜರಾತಿನ ಅಮರೇಲಿ ಜಿಲ್ಲೆಯ ದುಧಾಲಾ ಎಂಬ ಹಳ್ಳಿಯಲ್ಲಿ ಜನಿಸಿದ ಸಾವಜಿ 13 ನೇ ವಯಸ್ಸಿನಲ್ಲಿಯೇ ತಮ್ಮ ಚಿಕ್ಕಪ್ಪನ ವಜ್ರದ ವ್ಯಾಪಾರಕ್ಕೆ ಇಳಿದರು. ನಂತರ ಚಿಕ್ಕಪ್ಪನ ಬಳಿ ಸಾಲ ಪಡೆದು ತಮ್ಮದೇ ಸ್ವಂತ ಉದ್ಯಮ ಆರಂಭಿಸಿದ ಅವರನ್ನು ಲಕ್ಷ್ಮಿ ಕೈಬಿಡಲಿಲ್ಲ. 1991 ರಲ್ಲಿ ಹರಿಕೃಷ್ಣ ಎಕ್ಸ್ ಪೋರ್ಟ್ ಎಂಬ ಕಂಪನಿ ಕಟ್ಟಿದರು.

ಹಿರಿಯ ಉದ್ಯೋಗಿಗಳಿಗೆ ಬೆಂಝ್ ಕಾರು

ಹಿರಿಯ ಉದ್ಯೋಗಿಗಳಿಗೆ ಬೆಂಝ್ ಕಾರು

ತಮ್ಮ ಹರಿ ಕೃಷ್ಣ ಎಕ್ಸ್ ಪೋರ್ಟ್ ಕಂಪನಿಯಲ್ಲಿ ಕಳೆದ 25 ವರ್ಷಗಳಿಂದ ಕೆಲಸ ಮಾಡುತ್ತಿರುವ ಮೂವರು ಸಿಬ್ಬಂದಿಗೆ ಇತ್ತೀಚೆಗಷ್ಟೇ 3 ಕೋಟಿ ಮೌಲ್ಯದ ಮರ್ಸಿಡೆಜ್ ಬೆಂಝ್ ಕಾರುಗಳನ್ನು ಉಡುಗೊರೆಯಾಗಿ ಸಾವಜಿ ನೀಡಿದ್ದಾರೆ. 2014 ರಲ್ಲಿ ಈ ಕಂಪನಿಯು ಸುಮಾರು 400 ಕೋಟಿ ರೂ ಮೌಲ್ಯದ ವ್ಯವಹಾರ ನಡೆಸಿತ್ತು.

50 ದೇಶಗಳಿಗೆ ರಫ್ತು

50 ದೇಶಗಳಿಗೆ ರಫ್ತು

ಅಮೆರಿಕ, ಬೆಲ್ಜಿಯಂ, ಅರಬ್ ದೇಶಗಳು, ಹಾಂಕ್ ಕಾಂಗ್, ಚೀನಾ ಸೇರಿದಂತೆ ಐವತ್ತಕ್ಕೂ ಹೆಚ್ಚು ದೇಶಗಳೊಂದಿಗೆ ವಜ್ರದ ರಫ್ತು ವ್ಯವಹಾರ ನಡೆಸುವ ಸಾವಜಿ, ವಿಶ್ವದ ಅಗ್ರಗಣ್ಯ ವಜ್ರದ ವ್ಯಾಪಾರಿಗಳಲ್ಲೊಬ್ಬರು. 2011 ರಿಂದ ತಮ್ಮ ಸಿಬ್ಬಂದಿಗೆ ದೀಪಾವಳಿ ಉಡುಗೊರೆಯನ್ನು ಸಾವಜಿ ನೀಡುತ್ತಾ ಬಂದು ಸುದ್ದಿಯಾಗಿದ್ದರು.

ಆರೋಪಗಳು

ಆರೋಪಗಳು

ಸಾವಜಿ ದಾನಶೂರ ಕರ್ಣ ಅನ್ನೋದು ನಿಜ. ಹಣ ಇದ್ದವರು ಸಾಕಷ್ಟು ಮಂದಿ. ಆದರೆ ಅದನ್ನು ದಾನ ಮಾಡುವ ಮನಸ್ಥಿತಿ ಉಳ್ಳವರು ಇರುವುದು ಅಪರೂಪ. ಆದರೆ ಸಾವಜಿ ತಾವು ದುಡಿದ ಹಣದಲ್ಲಿ ಎಷ್ಟೋ ಪಾಲನ್ನು ತಮ್ಮ ನೌಕರರಿಗೆ ನೀಡುತ್ತಿದ್ದಾರೆ. ಆದರೆ ಅವರು ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ ನೌಕರರಿಗೆ ಭವಿಷ್ಯ ನಿಧಿ(ಪಿಎಫ್)ಯನ್ನೇ ನೀಡಿಲ್ಲ ಎಂಬ ಆರೋಪ ಅವರ ವಿರುದ್ಧ ಕೇಳಿಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+