ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಬಿಡುಗಡೆ ಖಂಡಿಸಿ ಶಾಸಕಿ ಕವಿತಾ ಕಲ್ವಕುಂಟ್ಲ ಸಿಜೆಐಗೆ ಪತ್ರ

|
Google Oneindia Kannada News

ಅಹಮದಾಬಾದ್, ಆಗಸ್ಟ್ 20: ಗುಜರಾತ್ ಹಿಂಸಾಚಾರದ ವೇಳೆ ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ನಡೆದು, ಅವರ ಕುಟುಂಬದ 7 ಮಂದಿಯ ಕೊಲೆಯಾಗಿತ್ತು. ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ 11 ಅಪರಾಧಿಗಳನ್ನು ಗುಜರಾತ್ ಸರ್ಕಾರ ಬಿಡುಗಡೆ ಮಾಡಿದನ್ನು ಪ್ರಶ್ನಿಸಿ ನಿಜಾಮಾಬಾದ್ ಎಂಎಲ್‌ಸಿ ಮತ್ತು ಟಿಆರ್‌ಎಸ್ ನಾಯಕಿ ಕಲ್ವಕುಂಟ್ಲ ಕವಿತಾ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಸಿವಿ ರಮಣ ಅವರಿಗೆ ಪತ್ರ ಬರೆದಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿಯೂ ಆಗಿರುವ ಕವಿತಾ, 11 ಅಪರಾಧಿಗಳನ್ನು ಬಿಡುಗಡೆ ಮಾಡುವಾಗ ಯಾವುದೇ ಕಾರ್ಯವಿಧಾನ ಮತ್ತು ವಸ್ತುನಿಷ್ಠ ಪರಿಶೀಲನೆಗಳನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ. "ಈ ಘೋರ ಘಟನೆ ನಡೆದಾಗ ಬಾನೊ ಅವರಿಗೆ ಕೇವಲ 21 ವರ್ಷ ವಯಸ್ಸು. ಈ ಅವಧಿಯಲ್ಲಿ 5 ತಿಂಗಳ ಗರ್ಭಿಣಿಯೂ ಆಗಿದ್ದರು. ಅತ್ಯಾಚಾರಿಗಳಿಗೆ ಶಿಕ್ಷೆಯ ಬದಲು ಬಿಡುಗಡೆ ಭಾಗ್ಯ ಸಿಕ್ಕಿದೆ. ಇದು ಬಿಲ್ಕಿಸ್ ಬಾನೊ ಅವರ ರಕ್ಷಣೆಯ ಪ್ರಶ್ನೆಯಾಗಿದೆ" ಎಂದು ಅವರು ಹೇಳಿದರು.

"ಈ ವಿಷಯದಲ್ಲಿ ಮಧ್ಯಪ್ರವೇಶಿಸುವ ಮೂಲಕ ನಮ್ಮ ಕಾನೂನುಗಳು ಮತ್ತು ಮಾನವೀಯತೆಯ ಮೇಲಿನ ರಾಷ್ಟ್ರದ ನಂಬಿಕೆಯನ್ನು ಉಳಿಸಲು ನಾನು ಭಾರತದ ಸರ್ವೋಚ್ಚ ನ್ಯಾಯಾಲಯವನ್ನು ಬೇಡಿಕೊಳ್ಳುತ್ತೇನೆ, ಆದ್ದರಿಂದ ಮೇಲೆ ತಿಳಿಸಿದ ಅಪರಾಧಿಗಳ ಬಿಡುಗಡೆಯ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು [sic]" ಎಂದು ಅವರು ತಮ್ಮ ಪತ್ರದಲ್ಲಿ ಸಿಜೆಐಗೆ ಮನವಿ ಮಾಡಿದ್ದಾರೆ.

ನ್ಯಾಯಮೂರ್ತಿಗೆ ಕವಿತಾ ಕಲ್ವಕುಂಟ್ಲ ಮನವಿ ಪತ್ರ

ನ್ಯಾಯಮೂರ್ತಿಗೆ ಕವಿತಾ ಕಲ್ವಕುಂಟ್ಲ ಮನವಿ ಪತ್ರ

ಅತ್ಯಾಚಾರದಂತಹ ಅಪರಾಧಗಳು ಸಾಮಾಜಿಕ ಆತ್ಮಸಾಕ್ಷಿಯನ್ನು ಅಲುಗಾಡಿಸುತ್ತವೆ ಮತ್ತು ಸ್ವಾತಂತ್ರ್ಯ ದಿನಾಚರಣೆಯಂತಹ ದಿನದಂದು ಶಿಕ್ಷೆಗೊಳಗಾದ ಅತ್ಯಾಚಾರಿಗಳು ಮುಕ್ತವಾಗಿ ನಡೆಯುವುದನ್ನು ನೋಡುವುದು ಪ್ರತಿಯೊಬ್ಬ ಮಹಿಳೆಯಲ್ಲಿ ನಡುಕವನ್ನು ಉಂಟುಮಾಡುತ್ತದೆ ಎಂದು ಅವರು ಹೇಳಿದ್ದಾರೆ. ಈ ವರ್ಷದ ಏಪ್ರಿಲ್ 21 ರಂದು ಆಜಾದಿ ಕಾ ಅಮೃತ್ ಮಹೋತ್ಸವದ ಆಚರಣೆಯ ಭಾಗವಾಗಿ ಗೃಹ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಗುಜರಾತ್ ಸರ್ಕಾರವು ಅಜ್ಞಾನದಿಂದ ವರ್ತಿಸಿದೆ ಎಂದು ಅವರು ಹೇಳಿದರು.


"ಗೃಹ ವ್ಯವಹಾರಗಳ ಸಚಿವಾಲಯವು ಹೊರಡಿಸಿದ ಈ ಮಾರ್ಗಸೂಚಿಯಲ್ಲಿ, ಅತ್ಯಾಚಾರ, ಮಾನವ ಕಳ್ಳಸಾಗಣೆ ಮತ್ತು ಲೈಂಗಿಕ ಅಪರಾಧಗಳು, ಮಕ್ಕಳ ರಕ್ಷಣೆ ಕಾಯಿದೆ, 2012 (ಪೋಕ್ಸೊ) , ಅನೈತಿಕ ಕಳ್ಳಸಾಗಣೆ ತಡೆ ಕಾಯ್ದೆಯ ಅಪರಾಧಕ್ಕಾಗಿ ಶಿಕ್ಷೆಗೊಳಗಾದ ಕೈದಿಗಳಿಗೆ ವಿಶೇಷ ಪರಿಹಾರವನ್ನು ನಿರ್ದಿಷ್ಟವಾಗಿ ನಿರಾಕರಿಸಲಾಗಿದೆ" ಎಂದು ಅವರು ಹೇಳಿದರು. ಆದರೆ ಇಲ್ಲಿ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

ಕೆಟಿಆರ್ ಟ್ವೀಟ್

ಕೆಟಿಆರ್ ಟ್ವೀಟ್

ಈ ಹಿಂದೆ, ಅಪರಾಧಿಗಳ ಬಿಡುಗಡೆಯನ್ನು ಟೀಕಿಸಿದ ಟಿಆರ್‌ಎಸ್ ಕಾರ್ಯಾಧ್ಯಕ್ಷ ಮತ್ತು ಕೈಗಾರಿಕಾ ಸಚಿವ ಕೆಟಿ ರಾಮರಾವ್ (ಕೆಟಿಆರ್) 11 ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿರುವುದು ಅತ್ಯಂತ ದುರದೃಷ್ಟಕರ ಮತ್ತು ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸುವಂತೆ ಕೇಳಿಕೊಂಡರು.


"ಆತ್ಮೀಯ ಪ್ರಧಾನಮಂತ್ರಿ ನರೇಂದ್ರಮೋದಿ ಜೀ, ನೀವು ನಿಜವಾಗಿಯೂ ಮಹಿಳೆಯರನ್ನು ಗೌರವಿಸುವ ಬಗ್ಗೆ ಮಾತನಾಡಿದ್ದರೆ, ಮಧ್ಯಪ್ರವೇಶಿಸಿ ಮತ್ತು 11 ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ಉಪಶಮನದ ಆದೇಶವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ" ಎಂದು ಕೆಟಿಆರ್ ಟ್ವೀಟ್ ಮಾಡಿದ್ದಾರೆ.


ಯಾವುದೇ ಅತ್ಯಾಚಾರಿಗಳಿಗೆ ನ್ಯಾಯಾಂಗದಿಂದ ಜಾಮೀನು ಸಿಗದಂತೆ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ)ಗೆ ಸೂಕ್ತ ತಿದ್ದುಪಡಿಗಳನ್ನು ಮಾಡುವಂತೆ ಅವರು ಪ್ರಧಾನಿಯನ್ನು ಒತ್ತಾಯಿಸಿದರು.

ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆ

ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆ

ಘಟನೆ ನಡೆದಾಗ ಬಾನು ಅವರಿಗೆ ಕೇವಲ 21 ವರ್ಷ ವಯಸ್ಸು. ಈ ಅವಧಿಯಲ್ಲಿ ಬಿಲ್ಕಿಸ್ ಬಾನು 5 ತಿಂಗಳ ಗರ್ಭಿಣಿಯಾಗಿದ್ದರು. ಅವರ ಮೂರು ವರ್ಷದ ಮಗಳನ್ನೂ ದುಷ್ಕರ್ಮಿಗಳು ಕೊಂದಿದ್ದರು. 2008 ರ ಜನವರಿ 21 ರಂದು ಬಿಲ್ಕಿಸ್ ಬಾನೊ ಅವರ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಏಳು ಸದಸ್ಯರ ಹತ್ಯೆಗಾಗಿ ಮುಂಬೈನ ವಿಶೇಷ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯ ಜನವರಿ 21, 2008ರಂದು 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಅಂತಿಮವಾಗಿ ಬಾಂಬೆ ಹೈಕೋರ್ಟ್‌ನಿಂದ ಅವರ ಶಿಕ್ಷೆಯನ್ನು ಎತ್ತಿ ಹಿಡಿಯಲಾಯಿತು.


ಭಾರತವು ಸ್ವಾತಂತ್ರ್ಯ ಗಳಿಸಿ 75 ವರ್ಷಗಳಾದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡುವ ಅಪರಾಧಿಗಳ ಪಟ್ಟಿಯಲ್ಲಿ ಈ ಅಪರಾಧಿಗಳ ಹೆಸರನ್ನೂ ಗುಜರಾತ್ ಸರ್ಕಾರ ಸೇರಿಸಿತ್ತು. ಬಿಜೆಪಿ ನಿರ್ಧಾರ ಸ್ವಾಗತಿಸಿದ್ದ ಹಿಂದುತ್ವಪರ ಸಂಘಟನೆಗಳ ನಾಯಕರು ಸಿಹಿ ಹಂಚಿ, ಹಾರ ಹಾಕಿ ಸ್ವಾಗತಿಸಿದ್ದರು.

'ಮೋಸಹೋದ ಅನುಭವವಾಗುತ್ತಿದೆ'

'ಮೋಸಹೋದ ಅನುಭವವಾಗುತ್ತಿದೆ'

ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಗುಜರಾತ್ ಸರ್ಕಾರದ ಕ್ರಮದ ಬಗ್ಗೆ 2002ರ ಗುಜರಾತ್ ಕೋಮು ಸಂಘರ್ಷದಲ್ಲಿ 11 ಜನರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಬದುಕುಳಿದ ಸಂತ್ರಸ್ತೆ ಬಿಲ್ಕಿಸ್ ಬಾನೊ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಸರ್ಕಾರದ ನಿರ್ಧಾರವು ನ್ಯಾಯಾಂಗ ವ್ಯವಸ್ಥೆಯ ಬಗೆಗಿನ ನನ್ನ ನಂಬಿಕೆಯನ್ನೇ ಅಲುಗಾಡಿಸಿದೆ. ತೀವ್ರ ಮಾನಸಿಕ ಆಘಾತ ಅನುಭವಿಸಿದ್ದೇನೆ, ಮೋಸಹೋದ ಅನುಭವವಾಗುತ್ತಿದೆ. ಏನು ಹೇಳಬೇಕು ಎಂದೇ ತೋಚುತ್ತಿಲ್ಲ, ಪದಗಳು ಸಿಗುತ್ತಿಲ್ಲ ಎಂದು ಬಿಲ್ಕಿಸ್ ಬಾನೊ ಬೇಸರ ವ್ಯಕ್ತಪಡಿಸಿದ್ದಾರೆ.


‘ಇಷ್ಟು ದೊಡ್ಡ ಮಟ್ಟದ ಅನ್ಯಾಯದ ನಿರ್ಧಾರ ತೆಗೆದುಕೊಳ್ಳುವ ಮೊದಲು ಯಾರೂ ನನ್ನ ಸುರಕ್ಷೆಯ ಬಗ್ಗೆ ವಿಚಾರಿಸಲಿಲ್ಲ. ಗುಜರಾತ್ ಸರ್ಕಾರಕ್ಕೆ ನನ್ನ ವಿನಂತಿ ಇಷ್ಟೇ. ಯಾವುದೇ ಭಯ ಇಲ್ಲದೇ, ಶಾಂತಿಯಿಂದ ಬದುಕುವ ನನ್ನ ಹಕ್ಕನ್ನು ಮರಳಿ ಕೊಡಿ' ಎಂದು ಅವರು ಸರ್ಕಾರದ ನಿರ್ಧಾರದ ಬಗ್ಗೆ ಬೇಸರ ಹೊರಹಾಕಿದರು.

Recommended Video

ಹೊಸ ಆಫರ್ : 10 ಮಕ್ಕಳ ಹೆತ್ತರೆ 13 ಲಕ್ಷ ಕೊಡ್ತಾರೆ | OneIndia Kannada

English summary
Nizamabad MLC and TRS leader Kalvakuntla Kavitha has written to Chief Justice of India CV Ramana questioning the Gujarat government's release of 11 convicts in the Bilkis Bano rape case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X