ಗುಜರಾತ್ ವಿಧಾನಸಭಾ ಚುನಾವಣೆ: ಏ.6 ರಂದು 'ಗಾಂಧಿ ಸಂದೇಶ ಯಾತ್ರೆ'
ಅಹಮದಾಬಾದ್, ಏಪ್ರಿಲ್ 1: ಪಂಚರಾಜ್ಯ ಚುನಾವಣೆಗಳ ಬಳಿಕ ಸದ್ಯ ಗುಜರಾತ್ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸಲಾಗುತ್ತಿದೆ. ಚುನಾವಣೆ ಬೆನ್ನಲ್ಲೇ ರಾಹುಲ್ ಗಾಂಧಿ ಅವರು ಏಪ್ರಿಲ್ 6 ರಂದು ಅಹಮದಾಬಾದ್‌ನಲ್ಲಿ ಗಾಂಧಿ ಸಂದೇಶ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಈ ಯಾತ್ರೆ ಗುಜರಾತ್‌ನ ಪ್ರತಿ ಜಿಲ್ಲೆಗಳಲ್ಲಿ ಹಾದುಹೋಗಲಿದೆ.
ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಏಪ್ರಿಲ್ 6 ರಂದು ಗುಜರಾತ್‌ಗೆ ಭೇಟಿ ನೀಡುತ್ತಿದ್ದಾರೆ. ಐತಿಹಾಸಿಕ ಗಾಂಧಿ ಸಂದೇಶ ಯಾತ್ರೆಯನ್ನು ಏಪ್ರಿಲ್ 6 ರಂದು ರಾಹುಲ್ ಗಾಂಧಿ ಅವರು ಸಬರಮತಿ ಆಶ್ರಮದಿಂದ ಆರಂಭಿಸಲಿದ್ದಾರೆ. ಈ ಯಾತ್ರೆಯು ದೆಹಲಿಯ ದಿವಂಗತ ರಾಜೀವ್ ಗಾಂಧಿಯವರ ಸಮಾಧಿ ವೀರ್ ಭೂಮಿಯಲ್ಲಿ ಮುಕ್ತಾಯಗೊಳ್ಳಲಿದೆ. ಕಾಂಗ್ರೆಸ್‌ನ ಸೇವಾದಳದ ಕಾರ್ಯಕರ್ತರ ನೇತೃತ್ವದ ಯಾತ್ರೆಯು ರಾಜಸ್ಥಾನ, ಹರಿಯಾಣ ಸೇರಿದಂತೆ ಗುಜರಾತ್‌ನ ಪ್ರತಿ ಜಿಲ್ಲೆಗಳಲ್ಲಿ ಹಾದುಹೋಗುತ್ತದೆ ಮತ್ತು ಮಹಾತ್ಮ ಗಾಂಧಿಯವರ ಶಾಂತಿ ಸಂದೇಶಗಳನ್ನು ಎತ್ತಿ ತೋರಿಸುತ್ತದೆ.
ಈ ವೇಳೆ ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ಪ್ರಯಾಣದ ಕ್ಷಣಗಳನ್ನು ಹೈಲೈಟ್ ಮಾಡಲಾಗುವುದು. ಹಿರಿಯ ಗುಜರಾತ್ ಕಾಂಗ್ರೆಸ್ ನಾಯಕ ಅರ್ಜುನ್ ಮೊದ್ವಾಡಿಯಾ ಅವರು ಭಾಸ್ಕರ್ ಅವರೊಂದಿಗೆ ಗಾಂಧಿ ಸಂದೇಶ ಯಾತ್ರೆಯ ಬಗ್ಗೆ ಮಾಹಿತಿ ನೀಡಿದ್ದಾರೆ. 1930ರ ಏಪ್ರಿಲ್ 6ರಂದು ಮುಕ್ತಾಯಗೊಂಡ ಭಾರತದ ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ದಿನದಂದು ಈ ದಂಡಿ ಯಾತ್ರೆ ನಡೆಯಲಿದೆ. ಈ ದಿನವನ್ನು ಆಚರಿಸಲು ರಾಹುಲ್ ಗಾಂಧಿ ಗುಜರಾತ್‌ಗೆ ಭೇಟಿ ನೀಡುತ್ತಿದ್ದಾರೆ ಮತ್ತು ಏಪ್ರಿಲ್ 6 ರಂದು ಅಹಮದಾಬಾದ್‌ನ ಸಬರಮತಿ ಆಶ್ರಮದಿಂದ ಗಾಂಧಿ ಸಂದೇಶ ಯಾತ್ರೆಯನ್ನು ಪ್ರಾರಂಭಿಸಲಿದ್ದಾರೆ.

ಏಪ್ರಿಲ್ 21 ರಂದು ಮೋದಿ ಗುಜರಾತ್‌ಗೆ ಭೇಟಿ
ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಸಂಸ್ಥಾಪನಾ ದಿನವಾದ ಏಪ್ರಿಲ್ 6 ರಂದು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಬಗ್ಗೆ ಬಿಜೆಪಿಯ ಎಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಮಾಹಿತಿ ನೀಡಲಾಗಿದೆ. ಇದಾದ ನಂತರ ಏಪ್ರಿಲ್ 21 ರಂದು ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮವನ್ನು ದಾಹೋದ್ ನಲ್ಲಿ ಆಯೋಜಿಸಲಾಗಿದೆ.












Click it and Unblock the Notifications