ಪದ್ಮಾವತ್ ಸಿನಿಮಾ ಗಲಾಟೆ: ಅಹ್ಮದಾಬಾದಿನಲ್ಲಿ ಮಾಲ್ ಧ್ವಂಸ
ಅಹ್ಮದಾಬಾದ್, ಜನವರಿ 24: ಖ್ಯಾತ ಚಿತ್ರ ನಿರ್ದೇಶಕ, ನಿರ್ಮಾಪಕ ಸಂಜಯ್ ಲೀಲಾ ಭನ್ಸಾಲಿ ಅವರ 'ಪದ್ಮಾವತ್' ಚಿತ್ರ ಬಿಡುಗಡೆಯಾಗುವ ದಿನ ಸನ್ನಿಹಿತವಾಗುತ್ತಿದ್ದಂತೆಯೇ ಗಲಭೆಗಳು ಹೆಚ್ಚುತ್ತಿವೆ.
ಗುಜರಾತಿನ ಅಹ್ಮದಾಬಾದಿನಲ್ಲಿ ಮಾಲ್ ವೊಂದರಲ್ಲಿ, ಪದ್ಮಾವತಿ ಬಿಡುಗಡೆ ವಿರೋಧಿಸಿ ಕಿಡಿಗೇಡಿಗಳು ಧ್ವಂಸಗೊಳಿಸಿದ್ದಲ್ಲದೆ, ವಾಹನಗಳನ್ನು ನಾಶಗೊಳಿಸಿದ ಘಟನೆ ಜ.23 ರಂದು ಸಂಜೆ ನಡೆದಿದೆ.
'ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಹಿಂಸೆ ನಡೆಯುವುದಕ್ಕೆ ಬಿಡುವುದಿಲ್ಲ, ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ' ಎಂದು ನಿನ್ನೆ ತಾನೇ ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಹೇಳಿದ್ದರು. ಆದರೂ 'ಪದ್ಮಾವತ್' ಗಲಾಟೆ ಮಾತ್ರ ನಿಂತಿಲ್ಲ. ಗುರ್ಗಾಂವ್ ನಲ್ಲೂ ಗಲಭೆಯಾದ ಮಾಹಿತಿ ಲಭ್ಯವಾಗಿದೆ.

ಜ.25 ರಂದು ಬಿಡುಗಡೆಯಾಗಲಿರುವ, ಸಂಜಯ್ ಲೀಲಾ ಭನ್ಸಾಲಿಯವರ 'ಪದ್ಮಾವತಿ' ಚಿತ್ರ ಹಲವು ವಿರೋಧಗಳ ನಂತರ 'ಪದ್ಮಾವತ್' ಎಂದು ಶೀರ್ಷಿಕೆ ಬದಲಿಸಿಕೊಂಡಿದೆ. ಚಿತ್ರದಲ್ಲಿ ರಜಪೂತ್ ಸಮುದಾಯವನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂಬುದು ಗಲಭೆಗೆ ಕಾರಣ.
ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಸಾಹಿದ್ ಕಪೂರ್, ರಣ್ವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.












Click it and Unblock the Notifications