ಪ್ರಿಯಾಂಕಾ ಗಾಂಧಿ ಮೊದಲ ಭಾಷಣದಲ್ಲಿ ಮೋದಿ ವಿರುದ್ಧ ವಾಗ್ದಾಳಿ

Recommended Video

      Lok Sabha Elections 2019 : ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ ಗಾಂಧಿ ವಾದ್ರಾ

      ಗಾಂಧೀನಗರ (ಗುಜರಾತ್), ಮಾರ್ಚ್ 12: ಕಾಂಗ್ರೆಸ್ ನ ನಾಯಕಿ- ಪ್ರಧಾನ ಕಾರ್ಯದರ್ಶಿ, ನಲವತ್ತೇಳು ವರ್ಷದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಈ ಬಾರಿಯ ಲೋಕಸಭೆ ಚುನಾವಣೆ ಘೋಷಣೆ ಆದ ಮೇಲೆ ತಮ್ಮ ಮೊದಲ ಭಾಷಣವನ್ನು ಗುಜರಾತ್ ನ ಗಾಂಧೀನಗರದಲ್ಲಿ ಮಾಡಿದರು. ತಮ್ಮ ಮೊದಲ ಭಾಷಣದಲ್ಲೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

      ಪ್ರಿಯಾಂಕಾ ಭಾಷಣದ ಮುಖ್ಯಾಂಶಗಳು:

      * ನಿಮ್ಮ ಮತವೇ ಅಸ್ತ್ರ. ಆಲೋಚನೆ ಮಾಡಿ, ನಿರ್ಧರಿಸಿ. ನಿಮ್ಮ ಮುಂದೆ ದೊಡ್ಡ ಮಾತುಗಳನ್ನು ಆಡುತ್ತಾರೆ. ಮಾತು ನೀಡಿದಂತೆ ಉದ್ಯೋಗ ಎಲ್ಲಿ? ಮಾತು ನೀಡಿದಂತೆ ಹದಿನೈದು ಲಕ್ಷ ರುಪಾಯಿ ಎಲ್ಲಿ? ಮಹಿಳೆಯರ ಸುರಕ್ಷತೆ ಬಗ್ಗೆ ಎಲ್ಲಿ?

      * ಯಾರು ಗುಣದ ಬಗ್ಗೆ ಮಾತನಾಡುತ್ತಾರೋ, ನಮ್ಮ ದೇಶದ ಗುಣ ಏನೆಂದರೆ ದ್ವೇಷವನ್ನು ಪ್ರೀತಿಯು ನಾಶ ಮಾಡಿಬಿಡುತ್ತದೆ.

      Our institutions are being destroyed, wherever you see, hatred is being spread

      * ಈ ದೇಶ ನಿಂತಿರುವುದು ಪ್ರೀತಿ ಹಾಗೂ ಸಹೋದರತ್ವದ ಮೇಲೆ. ಆದರೆ ಈಗ ದೇಶದಲ್ಲಿ ಏನಾಗುತ್ತಿದೆಯೋ ಅದು ಬಹಳ ದುಃಖದ ಸಂಗತಿ. ಜಾಗೃತಿಗಿಂತ ದೊಡ್ಡದಾದ ದೇಶಭಕ್ತಿ ಯಾವುದೂ ಇಲ್ಲ.

      * ನಮ್ಮ ಸಾಂವಿಧಾನಿಕ ಸಂಸ್ಥೆಗಳನ್ನು ನಾಶ ಮಾಡಲಾಗುತ್ತಿದೆ. ಎಲ್ಲಾದರೂ ನೋಡಿ, ದ್ವೇಷ ಹಬ್ಬಲಾಗುತ್ತಿದೆ. ನಾನು ಹಾಗೂ ನೀವು ಸೇರಿ ಈ ದೇಶ ರಕ್ಷಿಸುವುದಕ್ಕಿಂತ ಹೆಚ್ಚಿನದು ನಮಗಿಲ್ಲ. ಅದಕ್ಕಾಗಿ ಕೆಲಸ ಮಾಡೋಣ. ಮುಂದಕ್ಕೆ ಹೆಜ್ಜೆ ಇಡೋಣ.

      * ಯುವಜನಕ್ಕೆ ಹೇಗೆ ಉದ್ಯೋಗ ದೊರೆಯುತ್ತದೆ, ಮಹಿಳೆಯರು ಹೇಗೆ ಸುರಕ್ಷಿತರು ಎಂದು ಭಾವಿಸುತ್ತಾರೆ, ರೈತರಿಗಾಗಿ ಏನು ಮಾಡುತ್ತಾರೆ ಇವೆಲ್ಲ ಈ ಬಾರಿಯ ಚುನಾವಣೆ ವಿಷಯಗಳು.

      * ಈ ಚುನಾವಣೆ ಏನು ಅನ್ನೋದನ್ನು ನೀವು ಸರಿಯಾಗಿ ಅಲೋಚಿಸಬೇಕು. ನೀವು ಈ ಚುನಾವಣೆಯಲ್ಲಿ ಏನನ್ನು ಆಯ್ಕೆ ಮಾಡಿಕೊಳ್ಳುತ್ತೀರಿ? ನಿಮ್ಮ ಭವಿಷ್ಯವನ್ನು ಆಯ್ದುಕೊಳ್ಳುತ್ತೀರಿ. ಅಪ್ರಯೋಜಕ ವಿಷಯಗಳನ್ನು ಎತ್ತಬಾರದು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+