ಗುಜರಾತ್ ಕಾಂಗ್ರೆಸ್‌ಗೆ ಆಘಾತ; ಮತ್ತೊಬ್ಬ ಶಾಸಕನ ರಾಜೀನಾಮೆ

ಅಹಮದಾಬಾದ್, ಜೂನ್ 05 : ಗುಜರಾತ್ ಕಾಂಗ್ರೆಸ್‌ನ ಮತ್ತೊಬ್ಬ ಶಾಸಕ ಇಂದು ರಾಜೀನಾಮೆ ನೀಡಿದ್ದಾರೆ. ರಾಜ್ಯಸಭೆ ಚುನಾವಣೆ ಹತ್ತಿರವಿರುವಾಗಲೇ ನಡೆಯುತ್ತಿರುವ ಬೆಳವಣಿಗೆಗಳು ಗುಜರಾತ್‌ ಕಾಂಗ್ರೆಸ್‌ಗೆ ಆಘಾತ ತಂದಿದೆ.

Recommended Video

      ಜಿಮ್ ತರಬೇತುದಾರರ ಕಷ್ಟಕ್ಕೆ ಪರಿಹಾರ ಕೊಡಲಿದೆಯೇ ಸರ್ಕಾರ | Oneindia Kannada

      ಶುಕ್ರವಾರ ಶಾಸಕರೊಬ್ಬರು ರಾಜೀನಾಮೆ ನೀಡಿದ್ದಾರೆ ಎಂದು ಗುಜರಾತ್ ವಿಧಾನಸಭೆಯ ಸಚಿವಾಲಯ ಹೇಳಿದೆ. ಶಾಸಕರು ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಸುದ್ದಿ ಗುರುವಾರವೇ ಹಬ್ಬಿತ್ತು. ಶಾಸಕರು ಸಹ ಪಕ್ಷದ ಯಾವ ನಾಯಕರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ.

      ಗುರುವಾರ ಅಕ್ಷಯ್ ಪಾಟೀಲ್ ಮತ್ತು ಜಿಟು ಭಾಯ್ ಎಂಬ ಇಬ್ಬರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದರು. ಸ್ಪೀಕರ್ ರಾಜೀನಾಮೆಯನ್ನು ಅಂಗೀಕಾರ ಮಾಡಿದ್ದರು. ಆಗಲೇ ಮತ್ತೊಬ್ಬ ಶಾಸಕರು ರಾಜೀನಾಮೆ ಕೊಡುವ ಸುದ್ದಿ ಹಬ್ಬಿತ್ತು.

      One More Gujarat Congress MLA resigns

      ಕಾಂಗ್ರೆಸ್ ಶಾಸಕರ ಸರಣಿ ರಾಜೀನಾಮೆಯಿಂದಾಗಿ ಪಕ್ಷದ ರಾಜ್ಯಸಭೆ ಚುನಾವಣೆ ಲೆಕ್ಕಾಚಾರ ಬದಲಾಗಿದೆ. ಒಟ್ಟು ನಾಲ್ವರು ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಜೂನ್ 19ರಂದು ಚುನಾವಣೆಗೆ ದಿನಾಂಕ ನಿಗದಿಯಾಗಿದೆ.

      ವಿಧಾನಸಭೆಯಲ್ಲಿ 103 ಶಾಸಕರ ಬಲ ಇರುವ ಬಿಜೆಪಿ ಸುಲಭವಾಗಿ ಎರಡು ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್ ಪಕ್ಷ ಎರಡು ಸ್ಥಾನದಲ್ಲಿ ಗೆಲ್ಲುವ ವಿಶ್ವಾಸವನ್ನು ಹೊಂದಿತ್ತು. ಆದರೆ, ಮೂವರು ಶಾಸಕರ ರಾಜೀನಾಮೆ ಬಳಿಕ ಪಕ್ಷದ ಶಾಸಕರ ಬಲ 65ಕ್ಕೆ ಇಳಿಕೆಯಾಗಿದೆ.

      ಮಾರ್ಚ್‌ನಲ್ಲಿ 5 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದರು. ಪಕ್ಷದ ಶಾಸಕರ ರಾಜೀನಾಮೆಗೆ ಬಿಜೆಪಿ ಕಾರಣ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ರಾಜ್ಯಸಭೆ ಚುನಾವಣೆಗಾಗಿ ಶಾಸಕರನ್ನು ಖರೀದಿ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.

      ರಾಜ್ಯಸಭೆ ಚುನಾವಣೆಗೆ ಬಿಜೆಪಿ 3ನೇ ಅಭ್ಯರ್ಥಿಯಾಗಿ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದ ನರಹರಿ ಅಮಿನ್ ಅವರನ್ನು ಕಣಕ್ಕಿಳಿಸಲಿದೆ. ರಾಜ್ಯಸಭೆ ಚುನಾವಣೆ ಗುಜರಾತ್‌ನಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

      ರಾಜೀನಾಮೆ ಅಂಗೀಕಾರ : ಕಾಂಗ್ರೆಸ್ ಶಾಸಕ ನೀಡಿರುವ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ರಾಜೇಂದ್ರ ತ್ರಿವೇದಿ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+