ಪ್ರಧಾನಿ ತವರೂರಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ 'ಮೋದಿ ಸೀರೆ'

ನವದೆಹಲಿ, ಫೆಬ್ರವರಿ 13: ಮೋದಿ ಕೋಟ್, ಮೋದಿ ಟಿ ಶರ್ಟ್, ಮೋದಿ ಮದುವೆ ಆಹ್ವಾನ ಪತ್ರಿಕೆ...

ಹೀಗೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ, ವಸ್ತ್ರವಿನ್ಯಾಸ ಶೈಲಿ ಮುಂತಾದವುಗಳನ್ನು ಒಳಗೊಂಡ ವಸ್ತುಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ. ಜತೆಗೆ ಜನಪ್ರಿಯತೆಯನ್ನೂ ಪಡೆದುಕೊಳ್ಳುತ್ತಿವೆ. ಈಗ ಮತ್ತೊಂದು ಉತ್ಪನ್ನವೊಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಮೋದಿ ಅವರ ಜನಪ್ರಿಯತೆ, ಮಹಿಳೆಯರ ಖರೀದಿ ಬಯಕೆ ಎರಡನ್ನೂ ಬಂಡವಾಳವನ್ನಾಗಿಸಿಕೊಂಡಿರುವ ವ್ಯಾಪಾರಿಯೊಬ್ಬರು ಈ ಹೊಸ ಐಡಿಯಾ ಪ್ರಯೋಗಿಸಿದ್ದಾರೆ.

ಮೋದಿ ಅವರ ತವರೂರು ಗುಜರಾತ್‌ನಲ್ಲಿ ಮೋದಿ ಅವರ ಚಿತ್ರವಿರುವ ಸೀರೆಗಳು ಮಾರುಕಟ್ಟೆಗೆ ಬಂದಿವೆ. ಇವು ಹೊಸ ಟ್ರೆಂಡ್ ಸೃಷ್ಟಿಸಿದ್ದು, ಮೋದಿ ಭಾವಚಿತ್ರದ ವೈವಿಧ್ಯಮಯ ವಿನ್ಯಾಸದ ಚಿತ್ರಗಳು ಮಹಿಳೆಯರಿಗೂ ಪ್ರಿಯವಾಗುತ್ತಿವೆ.

modi saree new trend in gujarat selling like hotcakes

'ಮೋದಿ ಅವರ ಚಿತ್ರವನ್ನು ಡಿಜಿಟಲ್ ಆಗಿ ಸೀರೆಗಳಲ್ಲಿ ಮುದ್ರಿಸಲಾಗುತ್ತದೆ. ಇದು ಇತ್ತೀಚೆಗೆ ಬಿಡುಗಡೆ ಮಾಡಿದ ವಿಭಿನ್ನ ಬಗೆಯ ಸೀರೆ. ಈಗ ಮಹಿಳೆಯರ ನಡುವೆ ಅತ್ಯಂತ ಜನಪ್ರಿಯತೆ ಪಡೆದುಕೊಂಡಿದೆ. ಪ್ರಸ್ತುತ ನಮ್ಮ ಬಳಿ ಮೋದಿ ಚಿತ್ರವಿರುವ ಕನಿಷ್ಠ ನಾಲ್ಕು ಬಗೆಯ ಸೀರೆಗಳಿವೆ' ಎಂದು 'ಮೋದಿ ಸೀರೆ'ಯ ಮಾರಾಟಗಾರರೊಬ್ಬರು ತಿಳಿಸಿದ್ದಾರೆ.

ಮೋದಿ ಅವರದ್ದು ಮಾತ್ರವಲ್ಲ, ಶೀಘ್ರದಲ್ಲಿಯೇ ಇತರೆ ಕೆಲವು ರಾಜಕಾರಣಿಗಳ ಚಿತ್ರವುಳ್ಳ ಸೀರೆಗಳೂ ಬರಬಹುದು ಎಂದು ಅಂಗಡಿ ಮಾಲೀಕ ರೋನಕ್ ಶಾ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+