ಆಹ್ಹಾ! ಹಾರ್ದಿಕ್ ಪಟೇಲ್ ಮದ್ವೆ ಅಂತೆ, ವಧು ಯಾರಂತೆ?!
ಅಹ್ಮದಾಬಾದ್, ಜನವರಿ 22: ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸುವ ಮೂಲಕ ಪ್ರಸಿದ್ಧಿ ಪಡೆದಿದ್ದ ಪಾಟೀದಾರ್ ಅನಾಮತ್ ಆಂದೋಲನ ಸಮಿತಿಯ ಮುಖಂಡ ಹಾರ್ದಿಕ್ ಪಟೇಲ್ ಇದೇ ಜನವರಿ 27 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ತಮ್ಮ ಬಾಲ್ಯದ ಗೆಳತಿ ಕಿಂಜಲ್ ಪಾರಿಖ್ ಅವರನ್ನು ಗುಜರಾತಿನ ಸುರೆಂದರ್ ನಗರ ಜಿಲ್ಲೆಯ ದಿಸ್ಗರ್ ಎಂಬ ಹಳ್ಳಿಯಲ್ಲಿ ವರಿಸಲಿದ್ದಾರೆ. ಕೇವಲ 100 ಜನರನ್ನಷ್ಟೇ ಮದುವೆಗೆ ಆಮಂತ್ರಿಸಿದ್ದು, ತೀರಾ ಸರಳವಾಗಿ ವಿವಾಹವಾಗುತ್ತಿದ್ದೇವೆ ಎಂದು 25 ವರ್ಷ ವಯಸ್ಸಿನ ಹಾರ್ದಿಕ್ ಪಟೇಲ್ ತಿಳಿಸಿದ್ದಾರೆ.

ಸೂರತ್ತಿನಲ್ಲಿ ವಾಸವಿರುವ ಕಿಂಜಾಲ್ ವಿರಾಮ್ಗಾಂ ಮೂಲದವರು. ಹಾರ್ದಿಕ್ ಪಟೇಲ್ ಸಹ ಇದೇ ಊರಿನ ಪಕ್ಕದ ಊರಾದ ಚಂದನ್ ನಗರಿಯವರು. ಇಬರಬೂ ಬಾಲ್ಯದಿಂದಲೂ ಸ್ನೇಹಿತರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು.
ಇದೀಗ ದಾಂಪತ್ಯ ಜೀವನಕ್ಕೆ ಕಾಲಿರಿಸಲು ನಿರ್ಧರಿಸಿದ್ದಾರೆಂದು ಹಾರ್ದಿಕ್ ಪಟೇಲ್ ತಂದೆ ಭರತ್ ಪಟೇಲ್ ಖಚಿತಪಡಿಸಿದ್ದಾರೆ.
ಮೀಸಲಾತಿ ಮತ್ತು ರೈತರ ಸಾಲಮನ್ನಾಕ್ಕೆ ಒತ್ತಾಯಿಸಿ ಕಳೆದ ಸೆಪ್ಟೆಂಬರ್ ನಲ್ಲಿ ಹಾರ್ದಿಕ್ ಪಟೇಲ್ ಹತ್ತೊಂಬತ್ತು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು.












Click it and Unblock the Notifications