11 ದಿನದ ಉಪವಾಸಕ್ಕೆ 20 ಕೆಜಿ ತೂಕ ಕಳೆದುಕೊಂಡ ಹಾರ್ದಿಕ್ ಪಟೇಲ್

Recommended Video

      ಹಾರ್ದಿಕ್ ಪಟೇಲ್ ಉಪವಾಸ : ವಿವಿಧ ಬೇಡಿಕೆಗೆ ಒತ್ತಾಯ | Oneindia Kannada

      ಅಹ್ಮದಾಬಾದ್, ಸೆಪ್ಟೆಂಬರ್ 04: ಹನ್ನೊಂದು ದಿನಗಳ ಕಾಲ ಸತತ ಉಪವಾಸ ಆಚರಿಸಿದ ಹಾರ್ದಿಕ್ ಪಟೇಲ್ ಅವರು ಬರೋಬ್ಬರಿ 20 ಕೆಜಿ ತೂಕ ಕಳೆದುಕೊಂಡಿದ್ದಾರೆ!

      ಪಾಟೀದಾರ್ ಸಮುದಾಯಕ್ಕೆ ಮೀಸಲಾತಿ, ರೈತರ ಸಾಲ ಮನ್ನಾ, ದೇಶದ್ರೋಹದ ಆರೋಪದಲ್ಲಿ ಜೈಲಿನಲ್ಲಿರುವ ಅಲ್ಪೇಶ್ ಕಠಾರಿಯಾ ಬಿಡುಗಡೆಗಾಗಿ ಒತ್ತಾಯಿಸಿ ಪಾಟೀದಾರ್ ಅನಾಮತ್ ಆಂದೋಲನ ಸಮಿತಿ(PAAS) ಮುಖಂಡ ಹಾರ್ದಿಕ್ ಪಟೇಲ್ ಆಗಸ್ಟ್ 24 ರಿಂದ ಉಪವಾಸ ಸತ್ಯಾಗ್ರಹ ಆಚರಿಸುತ್ತಿದ್ದಾರೆ.

      ಉಪವಾಸಕ್ಕೂ ಮುನ್ನ 78 ಕೆಜಿ ತೂಕವಿದ್ದ 25 ವರ್ಷ ವಯಸ್ಸಿನ ಪಟೇಲ್, ಹನ್ನೊಂದನೇ ದಿನದ ಉಪವಾಸದ ನಂತರ 58 ಕೆಜಿ ತೂಕ ಹೊಂದಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಅಹ್ಮದಾಬಾದಿನಲ್ಲಿರುವ ತಮ್ಮ ನಿವಾಸದಲ್ಲಿ ಉಪವಾಸ ಆಚರಿಸುತ್ತಿರುವ ಹಾರ್ದಿಕ್ ಅವರ ಆರೋಗ್ಯದಲ್ಲಿ ಏರುಪೇರಾದರೆ ಕೂಡಲೇ ಚಿಕಿತ್ಸೆ ನೀಡಲು ಗುಜರಾತ್ ಸರ್ಕಾರದ ಸೂಚನೆಯ ಮೇರೆಗೆ ಅವರ ಮನೆಯೆದುರೂ 'ICU on Wheels' ಅಂಬುಲೆನ್ಸ್ ಅನ್ನು ಒದಗಿಸಲಾಗಿದೆ.

      Hardik Patel loses 20 kgs after 11 days of fasting

      ಉಪವಾಸ ಸತ್ಯಾಗ್ರಹ ಹನ್ನೊಂದನೇ ದಿನಕ್ಕೆ ಕಾಲಿಟ್ಟಿದ್ದರೂ ಗುಜರಾತ್ ಸರ್ಕಾರ ಮಧ್ಯಸ್ಥಿಕೆ ವಹಿಸಲು ಮುಂದೆ ಬಂದಿಲ್ಲ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ದೆಹಲಿ ಮುಖ್ಯಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ಗಣ್ಯರು ಪಟೇಲ್ ಅವರ ಆರೋಗ್ಯ ವಿಚಾರಿಸಿದ್ದಾರೆ.

      ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾ ಇಂದು ಹಾರ್ದಿಕ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+