ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಗುಜರಾತ್ ಚುನಾವಣೆ; ಜನರಿಗೆ ಕೇಜ್ರಿವಾಲ್ ಕೊಟ್ಟ ಭರವಸೆ

|
Google Oneindia Kannada News

ಅಹಮದಾಬಾದ್, ಆಗಸ್ಟ್ 07: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ತಮ್ಮ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ 24 ಗಂಟೆ ವಿದ್ಯುತ್ ಸರಬರಾಜು ಮಾಡುವುದಾಗಿ ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹೇಳಿದರು.

ಜೊತೆಗೆ ಹಿಂದಿನ ವರ್ಷದ ವಿದ್ಯುತ್ ಬಿಲ್‌ಗಳನ್ನು ಮನ್ನಾ ಮಾಡುವುದಾಗಿ ಭಾನುವಾರ ಭರವಸೆ ನೀಡಿದರು.
ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿರುವ 1998 ರಿಂದ ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್‌ಗೆ ಕೇಜ್ರಿವಾಲ್ ಎರಡು ದಿನಗಳ ಪ್ರವಾಸ ಆರಂಭಿಸಿದ್ದಾರೆ.

ಕಳೆದ ತಿಂಗಳು, ಕೇಜ್ರಿವಾಲ್ ತಮ್ಮ ಪಕ್ಷ ಗುಜರಾತ್‌ನಲ್ಲಿ ಅಧಿಕಾರಕ್ಕೆ ಬಂದರೆ ತಿಂಗಳಿಗೆ 300 ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ್ದರು. ಇನ್ನು ಡಿಸೆಂಬರ್ 2021 ರವರೆಗಿನ ವಿದ್ಯುತ್ ಬಾಕಿಯನ್ನು ಮನ್ನಾ ಮಾಡಲಾಗುವುದು ಎಂದು ಭರವಸೆ ನೀಡಿದರು.

Gujarat polls: Arvind Kejriwal promises 24x7 power supply, jobs

ದೆಹಲಿ ಮತ್ತು ಪಂಜಾಬ್‌ನಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಎಎಪಿ ಸರ್ಕಾರದ ಕೆಲಸದ ಉದಾಹರಣೆಗಳನ್ನು ನೀಡಿದ ಕೇಜ್ರಿವಾಲ್, "ನಮ್ಮ ಮೊದಲ ಭರವಸೆ ವಿದ್ಯುತ್ ಪೂರೈಕೆಗೆ ಸಂಬಂಧಿಸಿದೆ. ಗುಜರಾತ್‌ನಲ್ಲಿ ಜನರು ಸಂಕಷ್ಟದಲ್ಲಿದ್ದಾರೆ. ವಿದ್ಯುತ್ ಬಿಲ್‌ಗಳು ತುಂಬಾ ಹೆಚ್ಚಿವೆ. ನಾವು ದೆಹಲಿಯಲ್ಲಿ ಉಚಿತ ವಿದ್ಯುತ್ ಸರಬರಾಜು ಮಾಡಿದ್ದೇವೆ. ಪಂಜಾಬ್‌ನಲ್ಲಿ 25 ಲಕ್ಷ ಕುಟುಂಬಗಳು ಇತ್ತೀಚೆಗೆ ಶೂನ್ಯ ವಿದ್ಯುತ್ ಬಿಲ್‌ಗಳನ್ನು ಪಡೆದಿವೆ. ಶೀಘ್ರದಲ್ಲೇ, ಪಂಜಾಬ್‌ನ ಒಟ್ಟು 51 ಲಕ್ಷ ಕುಟುಂಬಗಳು ಶೂನ್ಯ ಬಿಲ್‌ಗಳನ್ನು ಪಡೆಯಲಿವೆ" ಎಂದರು.

ಮುಂದುವರೆದು, "ಕೆಲವೇ ವರ್ಷಗಳಲ್ಲಿ ನಾವು ದೆಹಲಿಯ 12 ಲಕ್ಷ ಯುವಕರಿಗೆ ಉದ್ಯೋಗ ಒದಗಿಸಿದ್ದೇವೆ. ಇಲ್ಲಿರುವ ನಿರುದ್ಯೋಗಿಗಳಿಗೂ ಉದ್ಯೋಗ ನೀಡುತ್ತೇವೆ. ಕೆಲಸ ಸಿಗುವವರೆಗೂ ನಿರುದ್ಯೋಗಿಗಳು ತಿಂಗಳಿಗೆ 3,000 ರೂಪಾಯಿ ಹಣ ಪಡೆಯಲಿದ್ದಾರೆ" ಎಂದು ಕೇಜ್ರಿವಾಲ್ ಹೇಳಿದರು.

ಇನ್ನು, ಗುಜರಾತ್ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯ ಘೋಷಣೆಯೊಂದಿಗೆ ಆಮ್ ಆದ್ಮಿ ಪಕ್ಷ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ತನ್ನ ಅಭ್ಯರ್ಥಿಯನ್ನು ಘೋಷಿಸಿದ ಪಕ್ಷವಾಗಿದೆ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕ್ಲೀನ್ ಇಮೇಜ್ ಮತ್ತು ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಮೊದಲ ಪಟ್ಟಿಯಲ್ಲಿ ಒಟ್ಟು 10 ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.

ಗುಜರಾತ್ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ ದಿಯೋದರ್‌ನಿಂದ ಭೀಮಾಭಾಯಿ ಚೌಧರಿ, ಸೋಮನಾಥ್‌ನಿಂದ ಜಗ್ಮಲ್‌ವಾಲಾ, ಛೋಟಾ ಉದಯಪುರದಿಂದ ಅರ್ಜುನ್ ರಥ್ವಾ, ಬೆಚರಾಜಿಯಿಂದ ಸಾಗರ್ ರಾಬರಿ, ರಾಜ್‌ಕೋಟ್ ಗ್ರಾಮಾಂತರದಿಂದ ವಾಶ್ರಮ್ ಸಗಾಥಿಯಾ, ಕಾಮಾಜಿಯಿಂದ ರಾಮ್ ಧದುಕಿ, ದಕ್ಷಿಣದಿಂದ ಶಿವಲಾಲ್‌ಭಾಯ್ ಬಾರ್ಸಿಯಾ, ರಾಜ್‌ಕೋಟ್‌ನಿಂದ ಸಿಲ್ವಾಲ್ ಬಾರ್ಸಿಯಾ ಹಾಗೂ ಸುಧೀರ್ ವಘಾನಿಗೆ ಗರಿಯಾಧರ್, ರಾಜೇಂದ್ರ ಸೋಲಂಕಿಗೆ ಬಾರ್ಡೋಲಿ, ಓಂ ಪ್ರಕಾಶ್ ತಿವಾರಿಗೆ ನರೋಡಾ (ಅಹಮದಾಬಾದ್) ನಿಂದ ಟಿಕೆಟ್ ನೀಡಿದೆ.

English summary
Gujarat assembly electons 2022: Aam Aadmi Party's (AAP) national convener Arvind Kejriwal promises 24x7 power supply, jobs for Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X